ದಾರಿ ಕಾಣದೇ ಡಿಕ್ಕಿ ಹೊಡೆದುಕೊಂಡ ಬೆಂಗಾವಲು ವಾಹನಗಳು: ಗ್ಲಾಸ್​ ಒರೆಸಿದ ಪ್ರಿಯಾಂಕಾ ಗಾಂಧಿ

priyankagandhi1
Published on

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸಿದ್ದ ಹಿಂಸಾಚಾರದಲ್ಲಿ ಟ್ರ್ಯಾಕ್ಟರ್​ ಪಲ್ಪಿ ಹೊಡೆದು ಮೃತಪಟ್ಟ ರೈತನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಹೋದ ಸಂದರ್ಭದಲ್ಲಿ ಕಾಂಗ್ರೆಸ್​ ನಾಯಕಿ ಅವರ ಬೆಂಗಾವಲು ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದವು.

ಉತ್ತರ ಪ್ರದೇಶದ ಹಾಪುರ್​ದಲ್ಲಿ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಇಬ್ಬನಿ ಇದ್ದ ಹಿನ್ನೆಲೆಯಲ್ಲಿ  ದಾರಿ ಕಾಣದೇ ಅಕಸ್ಮಾತ್ತಾಗಿ ಬ್ರೆಕ್​ ಹಾಕಿದ ಕಾರಣ, ಬೆಂಗಾವಲು ವಾಹನಗಳು ಡಿಕ್ಕಿ ಹೊಡೆದುಕೊಂಡಿದ್ದವು. ಆದರೆ ಭದ್ರತಾ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದರು.

ಕೆನಡಾದಿಂದ ದೆಹಲಿಗೆ ಬಂದಿದ್ದ ನವನೀತ್​ ಎಂಬ ರೈತ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಮೃತಪಟ್ಟಿದ್ದರು.ಟ್ರ್ಯಾಕ್ಟರ್​ನಿಂದ ಬ್ಯಾರಿಕೇಡ್​ ಒಳಗೆ ನುಗ್ಗಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್​ ಪಲ್ಟಿಯಾಗಿ ಅವರು ಮೃತಪಟ್ಟಿದ್ದು, ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಪ್ರಿಯಾಂಕಾ ಗಾಂಧಿ ತೆರಳಿದ್ದರು.

ಇದೇ ವೇಳೆ ಪ್ರಿಯಾಂಕಾ ಗಾಂಧಿ ಇದ್ದ ಕಾರಿನ ಚಾಲಕ ಕೂಡ ಸರಿಯಾಗಿ ರಸ್ತೆ ಕಾಣದ ಕಾರಣ  ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಇದರಿಂದ ತಕ್ಷಣವೇ ಗಾಡಿ ನಿಲ್ಲಿಸಿದ ಪ್ರಿಯಾಂಕಾ ಗಾಂಧಿ ಕೆಳಕ್ಕಿಳಿದು ತಾವೇ ಕಾರಿನ ವಿಂಡ್ ಶೀಲ್ಡ್ ಒರೆಸಿದ್ದಾರೆ.

ಪ್ರಿಯಾಂಕಾ ಗಾಜು ಒರೆಸುತ್ತಿದ್ದ ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಸಹಸ್ರಾರು ಕಮೆಂಟ್​ಗಳು ಇದರ ಕುರಿತು ಹರಿದಾಡುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net