More

    ಮಾನ ಇದ್ರೆ ‘ಹಿಂದು’ ಪದ ಕಿತ್ತೆಸೆಯಿರಿ ಎಂದಿದ್ದ ಭಗವಾನ್​ ಮುಖಕ್ಕೆ ಮಸಿ ಬಳೆದ ವಕೀಲೆ ವಿರುದ್ಧ ಎಫ್​ಐಆರ್​

    ಬೆಂಗಳೂರು: ಹಿಂದು ಧರ್ಮ ಧರ್ಮವೇ ಅಲ್ಲ. ಹಿಂದು ಎಂಬ ಶಬ್ದ ಅವಮಾನಕರ ಎಂದು ಹೇಳಿಕೆ ನೀಡಿದ್ದ ಪ್ರೊ. ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳೆದಿದ್ದ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಳ್ಳಲಾಗಿದೆ.

    ಭಗವಾನ್​ ಅವರು ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದ ವಕೀಲೆ ಮೀರಾ ಅವರು ಭಗವಾನ್​ ಅವರ ವಿರುದ್ಧ ದಾಖಲು ಮಾಡಿದ್ದ ದೂರಿಗೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆದಿತ್ತು. ಈ ಸಂದರ್ಭದಲ್ಲಿ ಭಗವಾನ್​ ಅವರು ಬೆಂಗಳೂರಿನ 2 ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಅವರ ವಿರುದ್ಧ ರೊಚ್ಚಿಗೆದ್ದಿದ್ದ ಮೀರಾ ಅವರು ಕೋರ್ಟ್​ ಆವರಣದಲ್ಲಿ ಮಸಿ ಬಳೆದಿದ್ದರು.

    ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ಕೋರ್ಟ್​ನಿಂದ ಹೊರಕ್ಕೆ ಬರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

    ಇಬ್ಬರೂ ಎದುರು ಬದುರು ಆದಾಗ ಮೀರಾ ಅವರು ಭಗವಾನ್​ರನ್ನು ಉದ್ದೇಶಿಸಿ, ಇಷ್ಟು ವಯಸ್ಸು ಆಗಿದೆ. ಇನ್ನು ನಾಚಿಕೆಯಾಗಲ್ವಾ? ರಾಮನ ಬಗ್ಗೆ, ಹಿಂದು ಧರ್ಮದ ಬಗ್ಗೆ ಮಾತಾನಾಡ್ತೀರಾ ಎಂದು ಮಸಿ ಬಳಿದು ಮೀರಾ ಅವಾಜ್ ಹಾಕಿದ್ದಾರೆ. ನಾನು ಏನೇ ಬಂದ್ರೂ ಎದುರಿಸಲು ರೆಡಿ ಎಂದು ಮೀರಾ ಹೇಳಿದ್ದಾರೆ.

    ಮಾನ ಇದ್ರೆ 'ಹಿಂದು' ಪದ ಕಿತ್ತೆಸೆಯಿರಿ ಎಂದಿದ್ದ ಭಗವಾನ್​ ಮುಖಕ್ಕೆ ಮಸಿ ಬಳೆದ ವಕೀಲೆ ವಿರುದ್ಧ ಎಫ್​ಐಆರ್​

    ಮಸಿ ಬಳೆದ ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಮೀರಾ ವಿರುದ್ಧ ಭಗವಾನ್‌ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಐಪಿಸಿ ಸೆಕ್ಷನ್‌ 341(ಅಕ್ರಮವಾಗಿ ತಡೆಯವುದು), 504(ಅವಾಚ್ಯವಾಗಿ ನಿಂದನೆ)ಅಡಿ ಪ್ರಕರಣ ದಾಖಲಾಗಿದೆ.

    ಹಿಂದು ಧರ್ಮ ಎಂದರೆ ಬ್ರಾಹ್ಮಣ ಎಂದರ್ಥ. ಗ್ರಾಮೀಣ ಜನರಿಗೆ ಹಿಂದು ಎಂದರೆ ಗೊತ್ತೇ ಇಲ್ಲ. ನೀವು ಯಾವ ಧರ್ಮ ಎಂದರೆ ಒಕ್ಕಲಿಗ, ಕುರುಬ ಅಂತ ಜಾತಿಗಳ ಹೆಸರನ್ನಷ್ಟೇ ಹೇಳುತ್ತಾರೆ. ಹಿಂದು‌ ಪದವನ್ನೇ ತೆಗೆದು ಹಾಕಬೇಕು. ನಿಮಗೆ ಮಾನ ಮರ್ಯಾದೆ ಇದ್ದರೆ ಆ ಪದ ತೆಗೆದು ಹಾಕಿ ಎಂದು ಭಗವಾನ್ ಹೇಳಿದ್ದರು. ಇದು ಮೀರಾ ಅವರನ್ನು ಸಿಡಿದೇಳುವಂತೆ ಮಾಡಿದೆ.

    ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…

    ‘ವೇಶ್ಯೆಯ ಸಹವಾಸ ಮಾಡಿದ್ರೇನು, ಅವನು ಗಂಡಸು ಕಣೆ… ಏನು ಬೇಕಾದ್ರೂ ಮಾಡ್ಬೋದು…’

    ತೇಜಸ್​ ಮೇಲೇರಿದ ತೇಜಸ್ವಿ: 15 ಸಾವಿರ ಅಡಿ ಎತ್ತರದಲ್ಲಿ ಅರ್ಧ ಗಂಟೆ ಹಾರಾಟ

    ವೈದ್ಯ ಪದವೀಧರರಿಗೆ ತಿಂಗಳೊಳಗೆ ಉದ್ಯೋಗ: ಗುಡ್​ ನ್ಯೂಸ್​ ಕೊಟ್ಟ ಆರೋಗ್ಯ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts