More

    ವರದಕ್ಷಿಣೆ ಪಡೆಯುವುದು, ತೆಗೆದುಕೊಳ್ಳುವುದು ನಿಲ್ಲಲಿ

    ಇಳಕಲ್ಲ(ಗ್ರಾ): ವರದಕ್ಷಿಣೆ ಎಂಬ ಪಿಡುಗು ಈ ದೇಶದಿಂದ ತೊಲಗಿದಾಗ ಮಾತ್ರ ಮಹಿಳೆಯರ ಕಲ್ಯಾಣ ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಸಾಲಿಮಠ ಹೇಳಿದರು.

    ನಗರದ ಆಶಾದೀಪ ಸಂಸ್ಥೆಯ ದಿಶಾ ಕೇಂದ್ರದಲ್ಲಿ ಬಾಗಲಕೋಟೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಳಕಲ್ಲದ ಆಶಾದೀಪ ಅಂಗವಿಕಲರ ಸೇವಾ ಸಂಸ್ಥೆ, ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವರದಕ್ಷಿಣೆ ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ವಕೀಲೆ ಬಿ.ಭಾರತಿ ಮಾತನಾಡಿ, ವರನಿಗೆ ಮದುವೆ ಸಮಯದಲ್ಲಿ ಕೊಡುವ ಹಣ, ವಸ್ತು, ಬಂಗಾರ, ಬೆಳ್ಳಿ ಇತ್ಯಾದಿ ನೀಡುವುದನ್ನು ವರದಕ್ಷಿಣೆ ಎಂದು ಕರೆಯುವರು. ಅದಕ್ಕಾಗಿ ಮೊಟ್ಟ ಮೊದಲು ವಿದ್ಯಾರ್ಥಿನಿಯರು ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಯಾಗಬೇಕು. ಆಗ ಯಾರೂ ವರದಕ್ಷಿಣೆ ಕೇಳುವುದಿಲ್ಲ. ಒಂದು ವೇಳೆ ಕೇಳಿದರೆ ಅಂತಹ ವರನನ್ನು ತಿರಸ್ಕರಿಸುವ ಆತ್ಮಸ್ಥೈರ್ಯ ನಿಮ್ಮಲ್ಲಿ ಬರುತ್ತದೆ. ವಿದ್ಯಾರ್ಥಿಗಳು ಕೂಡ ವರದಕ್ಷಿಣೆ ಪಡೆದರೆ ನಿಮ್ಮನ್ನು ನೀವೇ ಮಾರಿಕೊಂಡಂತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

    ವರದಕ್ಷಿಣೆ ಪಡೆಯುವುದು ಒಂದು ಅನಿಷ್ಟ ಪದ್ಧತಿಯಾಗಿದೆ. ಇದರಿಂದ ಹೆಣ್ಣು ಮಕ್ಕಳ ಪಾಲಕರು ತುಂಬಾ ಕಷ್ಟ, ನೋವುಗಳಲ್ಲಿ ಅನುಭವಿಸುತ್ತಾರೆ. ಕೆಲವರು ಜೀವವನ್ನೇ ಕಳೆದುಕೊಂಡು ಎಷ್ಟೋ ಉದಾಹರಣೆಗಳಿವೆ. ಎಲ್ಲರೂ ಇನ್ನು ಮುಂದೆ ವರದಕ್ಷಿಣೆ ಕೊಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ ಎಂದು ನಿರ್ಧರಿಸಿದಾಗ ಮಾತ್ರ ಇದನ್ನು ಹೊಡೆದೋಡಿಸಲು ಸಾಧ್ಯವಾಗುವುದು ಎಂದು ಹೇಳಿದರು.

    ಹನುಮಂತ ತಳವಾರ ಪ್ರತಿಜ್ಞಾ ವಿಧಿ ಬೋಧಿಸಿದರು. ಯಶೋದಾ ವನಕಿ, ಉಮೇಶ ಶಿರೂರ, ಹುಸೇನಸಾಬ ಮುದಗಲ್ಲ, ಹಸೀನಾಬಾನು ಹವಾಲ್ದಾರ್, ಶೈನಾಜ ಮುಲ್ಲಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts