ಖ್ಯಾತ ಹಿನ್ನೆಲೆ ಗಾಯಕಿ ಸಂಗೀತಾ ಇನ್ನಿಲ್ಲ: ಇವರ ಹಾಡಿಗೆ ಮನಸೋತು ಚಿನ್ನದ ಸರವನ್ನೇ ಕೊಟ್ಟಿದ್ದ ಜಯಲಲಿತಾ

sangeetha
Published on

ತಿರುವನಂತಪುರ (ಕೇರಳ): ಕನ್ನಡ, ಮಲಯಾಳಿ, ತಮಿಳು ಮತ್ತು ತೆಲುಗು ಭಾಷೆಗಳ ಹಲವಾರು ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಧ್ವನಿ ನೀಡಿದ ಖ್ಯಾತ ಗಾಯಕಿ ಸಂಗೀತಾ ಸಚಿತ್ ಕೊನೆಯುಸಿರೆಳೆದಿದ್ದಾರೆ. ಇವರಿಗೆ 46 ವರ್ಷ ವಯಸ್ಸಾಗಿತ್ತು.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುಮಾರು 200 ಹಾಡುಗಳನ್ನು ಇವರು ಹಾಡಿದ್ದಾರೆ.

ತಮಿಳಿನ ನಾಲೈ ತೀರ್ಪು ಚಿತ್ರದಲ್ಲಿ ಹಾಡುವ ಮೂಲಕ ಸಂಗೀತ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಸಂಗೀತಾ ಅವರಿಗೆ ಹೆಸರು ತಂದುಕೊಟ್ಟದ್ದು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಂಯೋಜಿಸಿದ ತಮಿಳು ಚಲನಚಿತ್ರ ಮಿಸ್ಟರ್ ರೋಮಿಯೋ. ಈ ಚಿತ್ರದಲ್ಲಿನ 'ತಣ್ಣೀರೈ ಕತಲಿಕ್ಕುಮ್' ಹಾಡು ಸೂಪರ್​ ಹಿಟ್ ಆಗಿತ್ತು.

ಇದಿಷ್ಟೇ ಅಲ್ಲದೇ ಮಲಯಾಳದ ಕಕ್ಕುಯಿಲ್‌ನ ಅಲಾರೆ ಗೋವಿಂದಾ, ಎನ್ನ್ ಸ್ವಂತಂ ಜಾನಕಿಕುಟ್ಟಿಯ ಅಂಬಿಲಿಪೂವಟ್ಟಂ ಮತ್ತು ಧುಮ್ ಧುಮ್ ಧುಮ್ ಧುರಯಾತೋ ಅವರು ಹಾಡಿರುವ ಜನಪ್ರಿಯ ಹಾಡುಗಳು. ಮಲಯಾಳಂನಲ್ಲಿ ಅವರ ಕೊನೆಯ ಹಾಡು ಕುರುತಿ ಚಿತ್ರದ ಥೀಮ್ ಸಾಂಗ್.

ಇವರ ಹಾಡಿಗೆ ಮನಸೋತಿದ್ದ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರು ಕಾರ್ಯಕ್ರಮವೊಂದರಲ್ಲಿ ತಾವು ಧರಿಸಿದ್ದ 10 ಪವನ್ ಚಿನ್ನದ ಸರವನ್ನು ಗೌರವಾರ್ಥವಾಗಿ ಉಡುಗೊರೆಯಾಗಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net