VIDEO: ವಧು-ವರರ ಫೋಟೋ ತೆಗೆಯಲು ಸ್ವಿಮ್ಮಿಂಗ್‌ಫೂಲ್‌ಗೆ ಹೋದ ಛಾಯಾಗ್ರಾಹಕ- ಮುಂದೇನಾಯ್ತು ನೋಡಿ!

photo
Published on

ಗುರುಗ್ರಾಮ (ಪಂಜಾಬ್‌): ಕರೊನಾ ಇದ್ದರೂ ಕೆಲವರು ಧಾಮ್‌ ಧೂಮ್‌ ಆಗಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಮದುವೆಯನ್ನು ಕರೊನಾ ನಿಯಮಕ್ಕೆ ಅನುಸಾರವಾಗಿ ಸಿಂಪಲ್‌ ಮಾಡಿಕೊಳ್ಳುವ ಸ್ಥಿತಿ ಇದ್ದರೂ ಫೋಟೋಶೂಟ್‌ಗೇನೂ ಕಮ್ಮಿ ಇಲ್ಲ.

ಅದೇ ರೀತಿ ಇಲ್ಲೊಂದು ಜೋಡಿ ಮಾಡಿಕೊಂಡಿರುವ ಫೋಟೋಶೂಟ್‌ನ ವಿಡಿಯೋ ಭಾರಿ ವೈರಲ್‌ ಆಗಿದೆ. ವಿಭಿನ್ನ ಸ್ಥಳಗಳಿಗೆ ಜೋಡಿಯನ್ನು ಕರೆದುಕೊಂಡು ಹೋಗಿ ಫೋಟೋಶೂಟ್‌ ಮಾಡಲಾಗುತ್ತದೆ. ಈ ವೈರಲ್‌ ವಿಡಿಯೋದಲ್ಲಿ ಫೋಟೋಗ್ರಾಫರ್‌ ನವಜೋಡಿಯನ್ನು ಸ್ವಿಮ್ಮಿಂಗ್ ಪೂಲ್‌ ಬಳಿ ಕರೆದುಕೊಂಡು ಹೋಗುತ್ತಿದ್ದಾನೆ.

ವರ ಮತ್ತು ವಧು ಮದುವೆಯ ಮಂಟಪದಿಂದ ಹೊರ ನಡೆದುಕೊಂಡು ಬರುತ್ತಿದ್ದಂತೆಯೇ ಅದರ ವಿಡಿಯೋ ಮಾಡಲು ಫೋಟೋಗ್ರಾಫರ್‌ ಮುಂದಾಗಿದ್ದಾನೆ. ಅಕ್ಕಪಕ್ಕ ನಿಂತಿರುವವರೆಲ್ಲಾ ಅವರ ಮೇಲೆ ಹೂವಿನ ದಳಗಳನ್ನು ಎಸೆದು ಶುಭಕೋರುತ್ತಿದ್ದಾರೆ.ಅಂಥ ಸಂದರ್ಭದಲ್ಲಿ ಉತ್ತೇಜಿತನಾದ ಫೋಟೋಗ್ರಾಫರ್‌ ತಾನೆಲ್ಲಿ ನಿಂತಿದ್ದೇನೆ ಎನ್ನುವ ಅರಿವು ಇಲ್ಲದೇ ಕೊಳದೊಳಕ್ಕೆ ಜಾರಿಬಿಟ್ಟಿದ್ದಾನೆ.

ಅದೃಷ್ಟವಶಾತ್‌ ಅವನನ್ನು ಯಾರೋ ಎತ್ತಿ ಹಿಡಿದು ಹೊರಕ್ಕೆ ತಂದಿದ್ದಾರೆ. ಅಸಲಿಗೆ ಇದೇನು ನಗುವಂಥ ವಿಷಯವಲ್ಲ. ಫೋಟೋಗ್ರಾಫರ್‌ ಪಟ್ಟಿರುವ ಫಜೀತಿ ಇದು. ಆದರೆ ಜಾಲತಾಣದಲ್ಲಿ ಈ ವಿಡಿಯೋ ಅನ್ನು ಹಾಸ್ಯದ ರೂಪದಲ್ಲಿ ವೈರಲ್‌ ಮಾಡಲಾಗುತ್ತಿದೆ. ಹಲವರು ಇದನ್ನು ನೋಡಿ ತಮಗೆ ಸಿಕ್ಕಾಪಟ್ಟೆ ನಗು ಬಂತು ಎಂದಿದ್ದರೆ, ಕೆಲವರು ಇಂಥ ಸ್ಥಿತಿ ಯಾರಿಗೂ ಬರಬಾರದು ಎಂದು ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಅವರವರ ಭಾವಕ್ಕೆ....

ನೀವೂ ನೋಡಿ ಈ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net