VIDEO: ಅಮ್ಮನ ಶವ ಮನೆಯದ್ದಾಗಲೇ ಪರೀಕ್ಷೆ ಬರೆದ ಅಮೀನಗಢದ ಯುವತಿ- ಎಲ್ಲವೂ ಹೆತ್ತಾಕೆಗಾಗಿ...

exam
Published on

ರಾಯಚೂರು: ಅಮ್ಮನ ದಿಢೀರ್‌ ಸಾವು ಎದುರಾದರೂ, ಆಕೆಯ ಇಚ್ಛೆ ಪೂರೈಸುವುದಕ್ಕಾಗಿ ತಾಯಿಯ ಶವ ಮನೆಯಲ್ಲಿರುವಾಗಲೇ ಯುವತಿಯೊಬ್ಬರು ಪರೀಕ್ಷೆ ಬರೆದು ಬಂದಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮೀನಗಢ ಗ್ರಾಮದಲ್ಲಿ ನಡೆದಿದೆ.

ಬಸಲಿಂಗಮ್ಮ ಪೂಜಾರ ಎಂಬ ಯುವತಿ, ಅಮೀನಗಢದಿಂದ ಲಿಂಗಸುಗೂರಿಗೆ ಬಂದು ಪದವಿ ಮೂರನೇ ಸೆಮ್ಇಸ್ಟರ್ ಪರೀಕ್ಷೆ ಬರೆದಿದ್ದಾರೆ.

ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ ಚನ್ನಮ್ಮ ಉಪವಾಸ ವೃತದಲ್ಲಿ ಇದ್ದರು. ಇದರ ಹೊರತಾಗಿಯೂ ಅವರ ಹೊಲಕ್ಕೆ ಕೆಲಸಕ್ಕೆಂದು ತೆರಳಿದ್ದರು. ಮಧ್ಯಾಹ್ನ ಏಕಾಏಕಿ ಬಿಪಿ ಲೋ ಆಗಿದೆ. ಕೂಡಲೇ ಅವರು ಮೃತಪಟ್ಟಿದ್ದಾರೆ. ದಿಢೀರ್‌ ಎಂದು ಈ ರೀತಿಯ ಸಾವು ಬಂದಿರುವುದು ಮನೆಯವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ.

ಆದರೆ ಅಮ್ಮ ಸದಾ ತನಗೆ ಓದು ಎಂದು ಹೇಳುತ್ತಿದ್ದಳು. ಅವಳ ಇಚ್ಛೆ ಪೂರೈಸಬೇಕು ಎಂಬ ಕಾರಣಕ್ಕೆ ಬಸಲಿಂಗಮ್ಮ ಪರೀಕ್ಷೆ ಬರೆದಿದ್ದಾರೆ. ನಂತರ ತನ್ನ ತಾಯಿಯ ಇಚ್ಛೆಯ ಕುರಿತು ಹೇಳಿದ್ದಾಳೆ. ತಾನು ಪರೀಕ್ಷೆ ಬರೆಯದೇ ಇದ್ದರೆ ಅಮ್ಮನಿಗೆ ನೋವಾಗುವುದು ಎಂಬ ಕಾರಣಕ್ಕೆ ಪರೀಕ್ಷೆ ಬರೆದಿರುವುದಾಗಿ ಕಣ್ಣೀರಾಗಿದ್ದಾಳೆ ಯುವತಿ.

ಬಸಲಿಂಗಮ್ಮ ಏನು ಹೇಳಿದ್ದಾರೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net