ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಟ್ಯಾಂಕ್‌ ಸ್ಫೋಟ: 27 ಮಂದಿ ಸಜೀವ ದಹನ!

cylinder
Published on

ಬಗ್ದಾದ್: ಕರೊನಾದ ಬಿಕ್ಕಟ್ಟಿನ ಈ ದಿನಗಳಲ್ಲಿ ಆಕ್ಸಿಜನ್‌ ಅನಿವಾರ್ಯವಾಗಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಇವುಗಳನ್ನು ಸ್ಟಾಕ್‌ ಮಾಡಿಟ್ಟುಕೊಳ್ಳಲಾಗುತ್ತಿದೆ. ಆದರೆ ಪ್ರಾಣದಾಯಕವಾಗಿರುವ ಆಕ್ಸಿಜನ್‌ ಸ್ಫೋಟಗೊಂಡು ಪ್ರಾಣವನ್ನು ಕಸಿದುಕೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ.

ಅಂಥದ್ದೇ ಒಂದು ವರದಿ ಇರಾಕ್‌ ಬಗ್ದಾದ್‌ನಿಂದಲೂ ಬಂದಿದೆ. ಆಕ್ಸಿಜನ್ ಟ್ಯಾಂಕ್‌ಗಳು ಸ್ಫೋಟಗೊಂಡ ಪರಿಣಾಮ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 27 ಜನರು ಸಜೀವವಾಗಿ ದಹಿಸಿರುವ ಘಟನೆ ಬಗ್ದಾದ್‌ನ ಇಬನ್‌ ಅಲ್ ಖತೀಬ್‌ನಲ್ಲಿ ನಡೆದಿದೆ.

ಬೆಂಕಿ ಅವಘಡ ಸಂಭವಿಸುವ ಹೊತ್ತಿಗೆ ಈ ಆಸ್ಪತ್ರೆಯಲ್ಲಿ ಕನಿಷ್ಠ 120 ರೋಗಿಗಳಿದ್ದರು. ಸದ್ಯ 27 ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು, ಸಾವಿನ ಸಂಖ್ಯೆ ಹೆಚ್ಚೂ ಆಗಿರಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಆಮ್ಲಜನಕದ ಸಿಲಿಂಡರ್ ಸ್ಪೋಟವೇ ಕಾರಣವಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net