

ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್.... ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು... ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ....
| ವೈಶಾಲಿ ಲಕ್ಷ್ಮಿನಾರಾಯಣ, ಬೆಂಗಳೂರು
2019ರಲ್ಲಿ ಮನೆ ಕಟ್ಟಿಸಬೇಕು ಎಂದು ತೀರ್ಮಾನ ಮಾಡಿ ಪ್ಲ್ಯಾನ್ ರೆಡಿ ಮಾಡಿಸಿದೆವು. ಒಬ್ಬ ಕಾಂಟ್ರ್ಯಾಕ್ಟರ್ ಬೇಕಲ್ಲ. ಅವ್ರು, ಇವ್ರು ಸಜೆಸ್ಟ್ ಮಾಡಿದ ಕಾಂಟ್ರ್ಯಾಕ್ಟರ್ ಒಬ್ಬ ಸಿಕ್ಕ. ಸರಿ, ಅವನ ಬಳಿ ಎಲ್ಲಾ ವಿಷಯ ಹೇಳಾಯ್ತು. ನಾವು ಹೇಳಿದ್ದಕ್ಕೆಲ್ಲಾ ಹೂಂಗುಟ್ಟುತ್ತಾ, ನಾವು ಹೇಳಿದ್ದಕ್ಕೆಲ್ಲಾ ಸರಿ ಸರಿ ಎನ್ನುತ್ತಾ, "ನಮ್ದೇ ಸ್ವಂತ ಇಟ್ಟಿಗೆ ಫ್ಯಾಕ್ಟರಿ ಇದೆ, ನೀವೇನೂ ಚಿಂತೆ ಮಾಡ್ಬೇಡಿ' ಎಂದ.
ಇದೊಳ್ಳೆ ಕಥೆ ಆಯ್ತಲ್ಲ ಎಂದುಕೊಂಡು ವಿಚಾರಿಸಿದರೆ ಅವನು ಶಬರಿಮಲೆ ಯಾತ್ರೆಗೆ ಹೋಗಿದ್ದ! ಪದೇಪದೆ ಫೋನ್ ಮಾಡಿದರೂ ಪ್ರಯೋಜನವಾಗಲಿಲ್ಲ. ಕಾಂಟ್ರ್ಯಾಕ್ಟರ್ ಮೊದಲೇ ಸಜೆಸ್ಟ್ ಮಾಡಿದ್ದ ಟೈಲ್ಸ್ ಅಂಗಡಿಯವನನ್ನು ಭೇಟಿ ಮಾಡಿದೆವು. ಕಾಂಟ್ರ್ಯಾಕ್ಟರ್‌ನ ಬೆನ್ನು ಬಿಡದೇ ಆನ್ಲೈನ್ ಮೂಲಕ ಅವನಿಂದಲೇ ಟೈಲ್ಸ್ ಅಂಗಡಿಯವನಿಗೆ ದುಡ್ಡು ಹಾಕಿಸಿದೆವು. ಇಷ್ಟು ಮಾಡುವ ಹೊತ್ತಿಗೆ ಉಸ್ಸಪ್ಪ ಎನ್ನುವಂತಾಗಿತ್ತು. ಅಷ್ಟೊತ್ತಿಗೆ ಕರೊನಾ ಲಾಕ್ಡೌನ್ ಶುರುವಾಯಿತು. ಗೃಹಪ್ರವೇಶ ಮುಂದೂಡಬೇಕಾಯಿತು. ಇತಿ ್ತಚೆಗಷ್ಟೆ ಎಲ್ಲ ಕೆಲಸ ಮುಗಿಸಿ "ಮುಕ್ತ'ರಾಗಿದ್ದೇವೆ.