ಐದು ವರ್ಷದ ಬಾಲೆಯ ರೇಪ್‌, ಮರ್ಡರ್‌- ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಯುವಕ

chappal
Published on

ಗಾಂಧಿನಗರ (ಗುಜರಾತ್‌): ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಎಸಗಿ ನಂತರ ಆಕೆಯ ಕೊಲೆ ಮಾಡಿರುವ 27 ವರ್ಷದ ಯುವಕನಿಗೆ ಗುಜರಾತ್‌ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯನ್ನು ಪ್ರಕಟ ಮಾಡುತ್ತಿದ್ದಂತೆಯೇ ಯುವಕ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ!

ಮಧ್ಯಪ್ರದೇಶದ ಅಪರಾಧಿ ಯುವಕನ ಹೆಸರು ಸುಜಿತ್‌ ಸಾಕೇಟ್‌, ಈತ ತನಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಪಿ.ಎಸ್‌.ಕಾಳ ಅವರ ಮೇಲೆ ಚಪ್ಪಲಿ ಎಸೆದಿದ್ದಾನೆ. ಆದರೆ ಅದೃಷ್ಟವಶಾತ್‌ ಚಪ್ಪಲಿ ಗುರಿತಪ್ಪಿ ಅಲ್ಲಿರುವ ಕಟಕಟೆಯ ಬಾಕ್ಸ್‌ನಲ್ಲಿ ಬಿದ್ದಿದೆ.

ಈತ ಕಳೆದ ಏಪ್ರಿಲ‌ 30 ರಂದು ಐದು ವರ್ಷದ ವಲಸೆ ಕಾರ್ಮಿಕರ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಬಾಲಕಿಯ ಪಾಲಕರು ಕೆಲಸಕ್ಕೆಂದು ಹೋಗಿದ್ದ ವೇಳೆ ಚಾಕೊಲೇಟ್‌ ಕೊಡಿಸುವ ಆಸೆ ತೋರಿಸಿ ಬಾಲಕಿಯನ್ನು ಅಪಹರಿಸಿದ್ದ. ನಂತರ ದೂರದ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದ.

ಈತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್‌ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net