

ಉತ್ತರ: ವಿಚ್ಛೇದನದ ನಂತರ ಪತ್ನಿ ಮತ್ತೊಂದು ಮದುವೆ ಆದರೆ ನಿಮ್ಮಿಂದ ಜೀವನಾಂಶ ಕೇಳುವಂತಿಲ್ಲ. ಇದು ಕೆಲಸಕ್ಕೆ ಅನ್ವಯ ಆಗುತ್ತದೆ. ಆಕೆಗೆ ಕೆಲಸ ಸಿಕ್ಕರೆ ಜೀವನಾಂಶ ಕೊಡಬೇಕೆಂದು ಇಲ್ಲ.
ನಿಮ್ಮಿಂದ ವಿಚ್ಛೇದನ ಪಡೆದು , ನಂತರ ನಿಮ್ಮಿಂದ ಜೀವನಾಂಶ ಕೇಳಿ, ನೀವು ಕೊಡುತ್ತಾ ಬಂದರೂ, ಆಕೆ ಮರುಮದುವೆ ಆಗಿರುವುದು, ಅಥವಾ ಆಕೆ ಕೆಲಸಕ್ಕೆ ಸೇರಿದ ವಿಷಯ ತಿಳಿದ ತಕ್ಷಣ ಈ ಮಾಹಿತಿಯನ್ನು ನೀವು ನ್ಯಾಯಾಲಯದ ಗಮನಕ್ಕೆ ತಂದರೆ , ಆಕೆ ಮರು ಮದುವೆ ಆದಾಗಲಿನಿಂದ ಅಥವಾ ಕೆಲಸಕ್ಕೆ ಸೇರಿದಾಗಲಿನಿಂದ ನೀವು ಜೀವನಾಂಶ ಕೊಡಬೇಕಿಲ್ಲ ಎನ್ನುವ ಆದೇಶವನ್ನು ನ್ಯಾಯಾಲಯ ನಿಮ್ಮ ಪರವಾಗಿ ಕೊಡುತ್ತದೆ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್ ಮೇಲೆ ಕ್ಲಿಕ್ ಮಾಡಿ.