ಡಿವೋರ್ಸ್​ ಕೇಸ್​ ಹಾಕಿದವರೇ ವಾದ ಮಂಡಿಸಲು ಅವಕಾಶವಿದೆಯೆ?

nyayadevate
Published on
ಪ್ರಶ್ನೆ: ಒಪ್ಪಿಗೆಯಿಂದ ವಿಚ್ಛೇದನ ಪಡೆಯಬೇಕೆಂದುಕೊಂಡಿದ್ದೇವೆ. ಇದಕ್ಕೆ ವಕೀಲರ ಸಹಾಯ ಪಡೆಯಲೇ ಬೇಕೇ? ಅಥವಾ ನಾವಿಬ್ಬರೇ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದೇ? ವಿಚ್ಛೇದನ ಆದ ನಂತರ ನನ್ನ ಹೆಂಡತಿ ನನ್ನ ಮೇಲೆ, ಮುಂದೆ, ಶಾಶ್ವತ ಜೀವನಾಂಶ ಕೇಳಿ ಪ್ರಕರಣ ದಾಖಲಿಸಬಹುದೇ?ಅವಳು ಮತ್ಯಾರನ್ನಾದರೂ ಮದುವೆ ಆದರೂ ನಾನು ಅವಳಿಗೆ ಆಲಿಮೊನಿ ಕೊಡಬೇಕಾಗುತ್ತದೆಯೇ?

ಉತ್ತರ: ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ವಕೀಲರ ಸಹಾಯ ಪಡಯಲೇ ಬೇಕೆಂದು ಇಲ್ಲ. ನೀವಿಬ್ಬರೇ ಸೇರಿ ಹಾಕಬಹುದು.

ಆದರೆ, ನ್ಯಾಯಾಲಯದ ಪ್ರಕ್ರಿಯೆಯ ಬಗ್ಗೆ ಮತ್ತು ಕಾನೂನು ಅಂಶಗಳ ಬಗ್ಗೆ ತಿಳಿವಳಿಕೆ ಇದ್ದರೆ ಒಳ್ಳೆಯದು. ಹಾಗೆ ಇಲ್ಲದವರು, ವಕೀಲರನ್ನು ನೇಮಕ ಮಾಡಿಕೊಳ್ಳುತ್ತಾರೆ. ಹೀಗೆ ನೇಮಕ ಮಾಡಿಕೊಳ್ಳಲು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ, ಮತ್ತು ಕೌಟುಂಬಿಕ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ.

ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net