

ಟ್ರಾನ್ಸ್ಲೇಷನಲ್ ಹೆಲ್ತ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಇನ್ಸ್ಟಿಟ್ಯೂಟ್ (ಟಿಎಚ್ಎಸ್ಟಿಐ) ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಬಯೋಟೆಕ್ನಾಲಜಿ ವಿಭಾಗದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ರಿದಾಬಾದ್ ಟಕದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹುದ್ದೆ ವಿವರ
* ಸ್ಟಾಫ್ ನರ್ಸ್ - 4
* ರಿಸರ್ಚ್ ಅಸಿಸ್ಟೆಂಟ್ - 1
* ಲ್ಯಾಬ್ ಟೆಕ್ನಿಷಿಯನ್ - 3
* ಟೆಕ್ನಿಷಿಯನ್ - 2
* ಫೀಲ್ಡ್ ವರ್ಕರ್/ ಟೆಲಿಕೌನ್ಸೆಲರ್ - 6
* ಮೆಸ್ಸೆಂಜರ್ - 2
* ಟೆಕ್ನಿಕಲ್ ಅಸಿಸ್ಟೆಂಟ್ - 2
* ಸೀನಿಯರ್ ರೆಸಿಡೆಂಟ್ (ಗೈನಕಾಲಜಿಸ್ಟ್) - 1
* ಸೀನಿಯರ್ ಮೆಡಿಕಲ್ ಆಫೀಸರ್ - 1
* ಪ್ರಾಜೆಕ್ಟ್ ಟೆಕ್ನಿಕಲ್ ಆಫೀಸರ್ - 1
ವಿದ್ಯಾರ್ಹತೆ: ಪ್ರೌಢ ಶಿಕ್ಷಣ, ನರ್ಸಿಂಗ್/ ಮಿಡ್ವೈಫರಿಯಲ್ಲಿ ಡಿಪ್ಲೊಮಾ, ಯಾವುದೇ ಪದವಿ, ವಿಜ್ಞಾನ, ಲೈ್ ಸೈನ್ಸ್ನಲ್ಲಿ ಪದವಿ/ ಸ್ನಾತಕೋತ್ತರ ಪದವಿ, ಬಿಎಸ್ಸಿ/ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ 3 ವರ್ಷದ ಡಿಪ್ಲೊಮಾ, ಪೀಡಿಯಾಟ್ರಿಕ್ಸ್/ ಗೈನಕಾಲಜಿಯಲ್ಲಿ ಎಂಡಿ ಮಾಡಿರುವ ಅಭ್ಯರ್ಥಿಗಳು ಅರ್ಹರು.
ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 25, 30, 35 ರಿಂದ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮಿಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.
ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 18,000 ರೂ. ನಿಂದ 1,00,000 ರೂ. ವೇತನ ನಿಗದಿಪಡಿಸಿದ್ದು, ಆಯ್ದ ಹುದ್ದೆಗಳಿಗೆ ಶೇ.16 ಮನೆ ಬಾಡಿಗೆ ಭತ್ಯೆ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ಮುಂದಿನ ಆಯ್ಕೆ ಪ್ರಕ್ರಿಯೆಗೆ ಆಹ್ವಾನಿಸಲಾಗುವುದು.
ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 200 ರೂ., ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 7.7.2021
ಅಧಿಸೂಚನೆಗೆ: https://bit.ly/3vY2tOw
ಮಾಹಿತಿಗೆ: thsti.in