ಪಿಯುಸಿ ಆದವರಿಗೆ ಮೈಸೂರು ಸಿಎಫ್‌ಟಿಆರ್​ಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

udyoga-mysore
Published on

ಕೌನ್ಸಿಲ್​ ಆಫ್‌​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ (ಸಿಎಸ್​ಐಆರ್​) ಅಧೀನದಲ್ಲಿ ಕಾರ್ಯನಿರ್ವಹಿಸುವ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ (ಸಿಎಫ್‌ಟಿಆರ್​ಐ) ವಿವಿಧ ಹುದ್ದೆಗೆ ಅರ್ಜಿ ಅಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: 12

ಸಿಎಫ್‌ಟಿಆರ್​ಐನ ವಿವಿಧ ವಿಭಾಗಳಲ್ಲಿ ಜೂನಿಯರ್​ ಸೆಕ್ರೇಟರಿಯೇಟ್​ ಅಸಿಸ್ಟೆಂಟ್​ ಹಾಗೂ ಜೂನಿಯರ್​ ಸ್ಟೆನೋಗ್ರಾಫರ್​ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳ ದಾಖಲೆಗಳು ಇಂಗ್ಲಿಷ್​ ಅಥವಾ ಹಿಂದಿ ಹೊರತಾಗಿ ಬೇರೆ ಭಾಷೆಯಲ್ಲಿದ್ದರೆ ಅದನ್ನು ಹಿಂದಿ ಅಥವಾ ಇಂಗ್ಲಿಷ್​ಗೆ ತರ್ಜುಮೆ ಮಾಡಿಸಿ ಗೆಜೆಟೆಡ್​ ಅಧಿಕಾರಿಯ ಸಹಿ ಪಡೆದು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಟೈಪಿಂಗ್​ ಪರೀಕ್ಷೆ/ ಲಿಖಿತ ಪರೀಕ್ಷೆ/ ಶಾರ್ಟ್​ಹ್ಯಾಂಡ್​ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಮೈಸೂರು ಟಕಕ್ಕೆ ಅಥವಾ ಇದರ ಇತರ ಟಕಗಳಿರುವ ಲಖನೌ, ಹೈದರಾಬಾದ್​, ಮುಂಬೈ ಅಥವಾ ದೇಶದಲ್ಲಿರುವ ಇತರ ಪ್ರಯೋಗಾಲಯಗಳಿಗೆ ನೇಮಕ ಮಾಡಬಹುದು.

ಹುದ್ದೆ ವಿವರ

* ಜೂನಿಯರ್​ ಸೆಕ್ರೇಟರಿಯೇಟ್​ ಅಸಿಸ್ಟೆಂಟ್​ (ಜನರಲ್​ ಅಡ್ಮಿನಿಸ್ಟ್ರೆಷನ್​ -3, ಫೈನಾನ್ಸ್​ ಆ್ಯಂಡ್​ ಅಕೌಂಟ್ಸ್​-3, ಸ್ಟೋರ್​ ಆ್ಯಂಡ್​ ಪರ್ಚೇಸ್​-3) - 9

* ಜೂನಿಯರ್​ ಸ್ಟೆನೋಗ್ರಾರ್​ - 3 (ಬ್ಯಾಕ್​ಲಾಗ್​ ಹುದ್ದೆಗಳು)

ವಿದ್ಯಾರ್ಹತೆ: ದ್ವಿತೀಯ ಪಿಯುಸಿ/ ತತ್ಸಮಾನ ಶಿಕ್ಷಣ ಪಡೆದಿದ್ದು, ಕಂಪ್ಯೂಟರ್​ ಜ್ಞಾನದ ಜತೆ ಪ್ರತಿ ನಿಮಿಷಕ್ಕೆ 35 ಪದ ಇಂಗ್ಲಿಷ್​ ಹಾಗೂ 30 ಪದ ಹಿಂದಿ ಟೈಪ್​ ಮಾಡಲು ತಿಳಿದಿರಬೇಕು.

ವಯೋಮಿತಿ: ಜೂ. ಸೆಕ್ರೆಟರಿಯೇಟ್​ ಅಸಿಸ್ಟೆಂಟ್​ಗೆ ಗರಿಷ್ಠ 28 ವರ್ಷ, ಸ್ಟೆನೋಗ್ರಾಫರ್​ಗೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಜೂ. ಸೆಕ್ರೆಟರಿಯೇಟ್​ ಅಸಿಸ್ಟೆಂಟ್​ಗೆ 19,900- 63,200 ರೂ. ವೇತನಶ್ರೇಣಿ ಅನ್ವಯವಾಗಲಿದೆ. ಜೂ.ಸ್ಟೆನೋಗ್ರಾಫರ್​ಗೆ 25,500-81,100 ರೂ. ವೇತನ ಶ್ರೇಣಿ ನಿಗದಿಯಾಗಿದೆ.

ಅರ್ಜಿಶುಲ್ಕ:ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ, ಸಿಎಸ್​ಐಆರ್​ನ ಸಿಬ್ಬಂದಿ ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು.

ಸೂಚನೆ: 23.8.2021ರ ಒಳಗಾಗಿ ಆನ್​ಲೈನ್​ನಲ್ಲಿ ಸಲ್ಲಿಸಲಾದ ಅರ್ಜಿಯ ಪ್ರತಿಯನ್ನು ಅಗತ್ಯ ದಾಖಲೆಯೊಂದಿಗೆ Recruitment Cell (E-I section),, CSIR-Central Food Technological Research Institute, Cheluvamba Mansion, Mysore- 570020 ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 30.7.2021

ಅಧಿಸೂಚನೆಗೆ: https://bit.ly/3qDgP5W

ಮಾಹಿತಿಗೆ: http://cftri.res.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net