ಮಾರಣಹೋಮಕ್ಕೆ ಸಿದ್ಧರಾಗಿದ್ದ ನಕ್ಸಲರು! ರೈಲು ಹಳಿ ಸ್ಫೋಟ; ಹೌರಾ- ಮುಂಬೈ ಸ್ತಬ್ಧ

railway
Published on

ರಾಂಚಿ: ಮುಂಬೈ- ಹೌರಾ ರೈಲು ಹಳಿಯನ್ನು ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗಿದ್ದ ನಕ್ಸಲರು ಅಪಾರ ಮಂದಿಯ ಸಾವು-ನೋವಿಗೆ ಸನ್ನರಾಗಿದ್ಧ ಆಘಾತಕಾರಿ ಘಟನೆ ನಡೆದಿದೆ.

ನಿನ್ನೆ (ಭಾನುವಾರ) ರಾತ್ರಿ ಜಾರ್ಖಂಡ್ ರಾಜ್ಯದ ಚಕ್ರಧರ್ಪುರ ವ್ಯಾಪ್ತಿಯ ಲೊಟಾಪಹಾಡ್ ಬಳಿಯಲ್ಲಿ ಈ ಘಟನೆ ನಡೆದಿದೆ. ಮುಂಬೈ- ಹೌರಾ ಮಾರ್ಗದ ರೈಲ್ವೇ ಹಳಿಯನ್ನು ಇವರು ಸ್ಫೋಟಿಸಿದ್ದಾರೆ. ಇದು ಮುಂಚೆಯೇ ತಿಳಿದುಬಂದ ಹಿನ್ನೆಲೆಯಲ್ಲಿ ಮಾರ್ಗದ ಎಲ್ಲಾ ರೈಲುಗಳನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಭಾರಿ ಅನಾಹುತವನ್ನು ತಪ್ಪಿಸಲಾಗಿದೆ.

ನಕ್ಸಲರು ಅಜಾದ್‌ಹಿಂದ್ ಎಕ್ಸ್‌ಪ್ರೆಸ್‌ ರೈಲನ್ನು ಗುರಿಯಾಗಿಸಿಕೊಂಡಿದ್ದರು ಎಂದಿದ್ದಾರೆ. ನಕ್ಸಲರ ನಿರ್ಮೂಲನೆಗಾಗಿ ಸರ್ಕಾರ ಕೈಗೊಂಡಿರುವ ಆಪರೇಷನ್ ಪ್ರಹಾರಕ್ಕೆ ವಿರೋಧ ವ್ಯಕ್ತಪಡಿಸಿ ಇಂಥದ್ದೊಂದು ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.

ಈ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಿ ಬಿಡಲಾಯಿತು. ಇದರಿಂದಾಗಿ ಚಕ್ರಧರ್ಪುರ, ಟಾಟಾ ನಗರ, ಸಿನಿ, ಸುನೋ, ಗೊಯಿಲೆಕೆರಾ, ಮನೋಹರ್‍ಪುರ ನಿಲ್ದಾಣದಲ್ಲಿಯೇ ರೈಲುಗಳು ನಿಂತಿದ್ದು, ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.

ಹಳಿಯ ಜೋಡಣೆ ಕಾರ್ಯವನ್ನ ಸಿಬ್ಬಂದಿ ಆರಂಭಿಸಿದ್ದು, ಮಾರ್ಗದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net