ಕಾರಿನ ಮೇಲೆ ನಾಲ್ಕು ಬೆರಳಿನ ವಿಚಿತ್ರ ಹೆಜ್ಜೆ ಗುರುತು: ಉತ್ತರ ಸಿಗದ ಪ್ರಶ್ನೆಗಳು..!

car
Published on

ಸ್ಕಾರ್ಥೊ (ಇಂಗ್ಲೆಂಡ್​): ಕೆಲವೊಮ್ಮೆ ಯಾರ ಊಹೆಗೂ ನಿಲುಕದ ನಿಗೂಢಗಳು ನಡೆಯುತ್ತವೆ. ಅಂಥದ್ದೇ ಒಂದು ನಿಗೂಢ ನಡೆದಿರುವುದು ದೂರದ ಇಂಗ್ಲೆಂಡ್​ನ ಸ್ಕಾರ್ಥೊದಲ್ಲಿ. ಆದರೆ ಸಾಮಾಜಿಕ ಜಾಲತಾಣದಿಂದಾಗಿ ಇದೀಗ ವೈರಲ್​ ಆಗಿದ್ದು, ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದಟ್ಟ ಮಂಜಿನಿಂದ ಆವರಿಸಿರುವ ಸ್ಕಾರ್ಥೊದಲ್ಲಿ ಮನೆಯ ಮೇಲೆ ನಿಲ್ಲಿಸಿರುವ ಕಾರುಗಳ ಮೇಲೆ ವಿಚಿತ್ರ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಚಿಕ್ಕ ಮಕ್ಕಳಂತೆ ತೋರುವ ಈ ಹೆಜ್ಜೆ ಗುರುತಿನಲ್ಲಿ ನಾಲ್ಕೇ ಬೆರಳುಗಳು ಇವೆ. ಆದ್ದರಿಂದ ಇದು ಮನುಷ್ಯರ ಹೆಜ್ಜೆಯಲ್ಲ ಎನ್ನುವುದು ಸಾಬೀತಾಗಿದೆ.

ಮಾತ್ರವಲ್ಲದೇ ಕೊರೆಯುವ ಚಳಿಯಲ್ಲಿ, ಅದೂ ಕಾರಿನ ಮೇಲುಗಡೆ, ಅದರಲ್ಲಿಯೂ ಬರಿಗಾಲಿನಲ್ಲಿ ನಡೆಯುವುದು ಅಸಾಧ್ಯವೇ ಸರಿ. ಇದು ಯಾವುದೇ ಮನುಷ್ಯರ ಹೆಜ್ಜೆ ಅಲ್ಲ ಎನ್ನುವುದು ದಿಟ. ಹಾಗಿದ್ದರೆ ಕಾರುಗಳ ಮೇಲೆ ಮೂಡಿರುವ ಹೆಜ್ಜೆ ಯಾರದ್ದು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

ಮನೆಯ ಮುಂದೆ ನಿಲ್ಲಿಸಿರುವ ಕೆಲವು ಕಾರುಗಳ ಮೇಲೆ ಈ ರೀತಿ ಹೆಜ್ಜೆ ಗುರುತು ಮೂಡಿವೆಯಂತೆ. ಈ ಕುರಿತು ಅಲಿಸಿಯಾ ಸ್ಮಿತ್​ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್​ ಮಾಡಿದ್ದಾರೆ. ಇದು ಮನುಷ್ಯದ ಹೆಜ್ಜೆಯಲ್ಲ, ಹಾಗಿದ್ದರೆ ಇದೇನು ಎಂದು ಅವರು ಪ್ರಶ್ನಿಸಿದ್ದಾರೆ.

ಮನುಷ್ಯರದ್ದು ಅಲ್ಲ ಎಂದ ಮೇಲೆ ಪ್ರಾಣಿಗಳದ್ದು ಇರಬಹುದು ಎಂಬ ಸಂದೇಹ ಮೂಡುವುದು ಸಹಜ. ಆದರೆ ಸಿಸಿಟಿವಿಯಲ್ಲಿ ಪರಿಶೀಲನೆ ಮಾಡಿದಾಗ ಯಾವುದೇ ಪ್ರಾಣಿಗಳು ಅತ್ತ ಹಾದು ಬಂದಿರುವುದು ತಿಳಿದಿಲ್ಲ ಎನ್ನುತ್ತಾರೆ ಅಲಿಸಿಯಾ ಸ್ಮಿತ್​.

ನಾನು ಈ ಮೊದಲು ಇಂತಹ ಹೆಜ್ಜೆ ಗುರುತನ್ನ ಎಲ್ಲಿಯೂ ಕಂಡಿಲ್ಲ. ಇದು ವಿಚಿತ್ರ ಆಕಾರ ಹಾಗೂ ನಾಲ್ಕು ಕಾಲ್ಬೆರಳನ್ನ ಹೊಂದಿದೆ. ಇದು ಮಗುವಿನ ಹೆಜ್ಜೆಯೋ ಇಲ್ಲ ವಯಸ್ಕರದ್ದೋ ಅನ್ನೋದು ನಮಗೆ ಖಚಿತವಿಲ್ಲ. ಅಲ್ಲದೇ ಈ ಹವಾಮಾನದಲ್ಲಿ ಯಾರಾದರೂ ಬರಿಗಾಲಲ್ಲಿ ನಡೆಯೋಕೆ ಸಾಧ್ಯವೇ ಇಲ್ಲ. ಪ್ರಾಣಿಗಳದ್ದಾಗಿದ್ದರೆ ಅವುಗಳ ಬಗ್ಗೆ ಎಲ್ಲಿಯೂ ತಿಳಿಯುತ್ತಿಲ್ಲ. ಹಾಗಿದ್ದರೆ ಇದು ಯಾವುದರ ಹೆಜ್ಜೆ ಎಂದು ನಿಮಗೆ ಗೊತ್ತಿದ್ದರೆ ತಿಳಿಸಿ ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net