More

    ಅರ್ಚಕರ ಮದುವೆಯಾಗುವ ವಧುಗಳಿಗೆ ಸಿಗಲಿದೆ ಭರ್ಜರಿ ಮೊತ್ತ- ನಾಳೆ ಸಿಎಂ ಚಾಲನೆ

    ಬೆಂಗಳೂರು: ಅರ್ಚಕರು ಹಾಗೂ ಪೌರೋಹಿತ್ಯ ಮಾಡುವ ಯುವಕರನ್ನು ಮದುವೆಯಾಗಲು ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಭರ್ಜರಿ ಯೋಜನೆಯನ್ನು ರೂಪಿಸಿದೆ.

    ಅರ್ಚಕರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಮೂರು ಲಕ್ಷ ರೂಪಾಯಿ ಬಾಂಡ್​ ವಿತರಿಸಲಾಗುತ್ತದೆ.

    ಇದಕ್ಕಾಗಿ ‘ಮೈತ್ರಿ’ ಎಂಬ ಯೋಜನೆಯನ್ನು ರೂಪಿಸಲಾಗಿದೆ. ಬಾಂಡ್‌ನ ಹಣವನ್ನು ಮೂರು ವರ್ಷಗಳ ಬಳಿಕ ಫಲಾನುಭವಿಗಳು ಪಡೆಯಬಹುದು. ಯೋಜನೆಗೆ ನಾಳೆ (ಜ.6) ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ.

    ಅರ್ಚಕರ ಮದುವೆಯಾಗುವ ವಧುಗಳಿಗೆ ಸಿಗಲಿದೆ ಭರ್ಜರಿ ಮೊತ್ತ- ನಾಳೆ ಸಿಎಂ ಚಾಲನೆ

    ಈ ಕುರಿತು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಎಚ್‌. ಸಚ್ಚಿದಾನಂದ ಮಾಹಿತಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ‘ಮೈತ್ರಿ’ ಯೋಜನೆಯಡಿ ವಧುಗಳಿಗೆ ಮೂರು ಲಕ್ಷ ರೂಪಾಯಿ ಬಾಂಡ್​ ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಅರ್ಚಕರನ್ನು ಮತ್ತು ಪೌರೋಹಿತ್ಯ ಮಾಡುವವರ ಪೈಕಿ ಹೆಚ್ಚಿನವರು ಮದುವೆಯಾಗದೇ ಅವಿವಾಹಿತರಾಗಿದ್ದಾರೆ. ಹೆಣ್ಣುಮಕ್ಕಳು ಇಂಥವರನ್ನು ಮದುವೆಯಾಗಲು ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

    ಇದೇ ರೀತಿ ಬಡ ಹೆಣ್ಣುಮಕ್ಕಳ ಮದುವೆಗೆ 25 ಸಾವಿರ ರೂಪಾಯಿ, ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ಬೋರ್‌ವೆಲ್‌, ಟ್ರ್ಯಾಕ್ಟರ್‌ ಖರೀದಿ ಮತ್ತು ಹೈನುಗಾರಿಕೆಗೆ ಧನ ಸಹಾಯ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಕಗ್ಗತ್ತಲಿನಲಿ ಮಂಗಳೂರಿನ ದಾರಿಮೇಲೆ ಕಂಡುಬಂದ ‘ಭೂತ’: ವಿಡಿಯೋ ವೈರಲ್​

    ಒಬ್ಬನ ಅಂತ್ಯಸಂಸ್ಕಾರಕ್ಕೆ ಬಂದು ಹೆಣವಾದ 16 ಮಂದಿ: ₹10 ಲಕ್ಷ ಪರಿಹಾರ, ಉದ್ಯೋಗದ ಭರವಸೆ

    ಒಬ್ಬನ ಅಂತ್ಯಸಂಸ್ಕಾರಕ್ಕೆ ಬಂದು ಹೆಣವಾದ 16 ಮಂದಿ: ₹10 ಲಕ್ಷ ಪರಿಹಾರ, ಉದ್ಯೋಗದ ಭರವಸೆ

    ಹುಟ್ಟುಹಬ್ಬಕ್ಕೆಂದು ದುಬೈನಿಂದ ಬಂದು ಪೊಲೀಸ್​ ಕೇಸ್​ನಲ್ಲಿ ಸಿಲುಕಿಕೊಂಡ ಸಲ್ಮಾನ್​ ಸಹೋದರರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts