ಒಂದು ರೂ.ದಿಂದ 25 ಸಾವಿರ ಕೋಟಿ ರೂ. ವಹಿವಾಟುವರೆಗೆ... ‘ಪದ್ಮಶ್ರೀ’ ಉದ್ಯಮಿಯಿಂದ ಮೋದಿಗೆ ವಿಶೇಷ ಸೀರೆ ಗಿಫ್ಟ್‌

saree
Published on

ನವದೆಹಲಿ: ಕೆಲ ವರ್ಷಗಳಿಂದ ಪದ್ಮ ಪ್ರಶಸ್ತಿಗೆ ಭಾಜನರಾಗುವ ವ್ಯಕ್ತಿಗಳು ಭಾರಿ ಚರ್ಚೆಗೆ ಒಳಗಾಗುತ್ತಿದ್ದಾರೆ. ತೆರೆಮರೆಯಲ್ಲಿಯೇ ಇದ್ದುಕೊಂಡು ಸಾಧನೆ ಮಾಡಿ, ಯಾವುದೇ ಪ್ರಶಸ್ತಿಗೂ ಹಂಬಲಿಸದೇ ಇರುವ ಮಹಾನ್‌ ತಾರೆಯವರೇ ಪದ್ಮ ಪ್ರಶಸ್ತಿಯ ಪಟ್ಟಿಯಲ್ಲಿ ಇರುವುದೇ ಇಂಥದ್ದೊಂದು ಚರ್ಚೆಗೆ ಕಾರಣವಾಗಿದೆ. ಇದೇ ರೀತಿ ಉದ್ಯಮಿಯೊಬ್ಬರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದು, ಅವರೀಗ ಪ್ರಧಾನಿ ಮೋದಿಗೆ ವಿಶೇಷ ಸೀರೆಯೊಂದನ್ನು ಗಿಫ್ಟ್‌ ನೀಡಿದ್ದಾರೆ.

ಇವರ ಹೆಸರು ಬಿರೇನ್​ ಕುಮಾರ್​ ಬಸಕ್​. ಬಂಗಾಳದವರು. 1970 ರ ದಶಕದಲ್ಲಿ, ಬಿರೇನ್ ಕುಮಾರ್ ಬಸಾಕ್ ತನ್ನ ಸಹೋದರನೊಂದಿಗೆ ಕೋಲ್ಕತಾದಲ್ಲಿ ಮನೆ-ಮನೆಗೆ ಹೋಗಿ ಸೀರೆ ಮಾರಾಟ ಮಾಡುತ್ತಿದ್ದರು. 1 ರೂಪಾಯಿಯಿಂದ ಇವರ ವಹಿವಾಟು ಆರಂಭವಾಗಿತ್ತು. ಒಂದು ಇವರು 25 ಕೋಟಿ ರೂಪಾಯಿಯ ವಹಿವಾಟು ನಡೆಸುತ್ತಿರುವುದು ಮಾತ್ರವಲ್ಲದೇ 5,000 ನೇಕಾರರಿಗೆ ಉದ್ಯೋಗ ಕೊಟ್ಟಿದ್ದಾರೆ. ಇವರ ಈ ಸಾಧನೆ ಇಂದಿನ ಯುವಜನತೆಗೆ ಮಾದರಿ ಎನ್ನುವ ಕಾರಣಕ್ಕೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಇದರಿಂದ ತುಂಬಾ ಸಂತೋಷಗೊಂಡಿರುವ ಬಿರೇನ್‌ ಕುಮಾರ್‌, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ವಿವಿಧ ಅಂಶಗಳನ್ನು ಚಿತ್ರಿಸಿರರುವ ಸೀರೆ ಕೊಟ್ಟಿದ್ದಾರೆ. ಇದರಲ್ಲಿ ತಮ್ಮ ಮತ್ತು ಪ್ರಧಾನಿ ಮೋದಿಯವರ ಚಿತ್ರವನ್ನೂ ಚಿತ್ರಿಸಿದ್ದಾರೆ. ಈ ಸೀರೆಯನ್ನು ಪಡೆದುಕೊಂಡಿರುವ ಪ್ರಧಾನಿ ಬಿರೇನ್‌ ಅವರಿಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

ಅಂದಹಾಗೆ, ಬಿರೇನ್​ ಕುಮಾರ್​ ಬಸಕ್​ ಅಪ್ಪಟ ಮೋದಿ ಅಭಿಮಾನಿ ಕೂಡ. ಈ ಹಿಂದೆ ಸೂರತ್ ಟೆಕ್ಸ್‌ಟೈಲ್ ಮಾರುಕಟ್ಟೆದಾರರು ಮೋದಿ ಸೀರೆ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದರು. ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಮತ ಚಲಾಯಿಸುವಂತೆ ಪ್ರಚಾರ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net