ಮೂಗು, ಬಾಯಿ ಮುಚ್ಕೊಳಯ್ಯಾ ಎಂದ್ರೆ ಕಣ್ಣಿಗೆ ಕಟ್ಟಿಕೊಂಡು ನಿದ್ದೆ ಮಾಡ್ದ- ಈಗ ವೈರಲ್‌ ಆದ...

train
Published on

ಮುಂಬೈ : ಮಾಸ್ಕ್‌ ಕಡ್ಡಾಯ ಮಾಡಿ ವರ್ಷವೇ ಉರುಳುತ್ತಾ ಬಂದಿದೆ. ಮಾಸ್ಕ್‌ ಧರಿಸದವರ ಭಾರಿ ಪ್ರಮಾಣದ ದಂಡ ಹಾಕುವುದೂ ನಡೆದೇ ಇದೆ. ಆದರೆ ಅನೇಕ ಕಾರಣಗಳಿಂದ ಈಗೀನ ಮಾಸ್ಕ್‌ಗಳನ್ನು ಅನೇಕ ಮಂದಿ ಮೂಗು ಮುಚ್ಚುವಂತೆ ಕಟ್ಟಿಕೊಳ್ಳುತ್ತಿಲ್ಲ. ಪೊಲೀಸರು ಕಂಡೊಡನೆ ಮಾಸ್ಕ್‌ ಏರಿಸುವವರೇ ಹೆಚ್ಚು.

ಅದೇನೇ ಇರಲಿ. ಇಲ್ಲೊಬ್ಬ ಯುವಕ ಮಾತ್ರ ಮೂಗು- ಬಾಯಿ ಮುಚ್ಚಿಕೊಳ್ಳುವ ಬದಲು ಮಾಸ್ಕ್‌ ಅನ್ನು ಕಣ್ಣಿಗೆ ಕಟ್ಟಿಕೊಂಡಿದ್ದಾನೆ. ಅದೂ ಕರೊನಾ ಹೆಚ್ಚಾಗಿ ಹರಡುವ ಭೀತಿ ಇರುವ ರೈಲಿನಲ್ಲಿ. ಕಣ್ಣಿಗೆ ಮಾಸ್ಕ್‌ ಕಟ್ಟಿಕೊಂಡು ನಿದ್ದೆಗೆ ಜಾರಿದ್ದಾನೆ. ಈ ಲೋಕದ ಅರಿವೇ ಇಲ್ಲದಂತೆ ಕನಸಿನ ಲೋಕದಲ್ಲಿ ವಿಶ್ರಮಿಸುತ್ತಿದ್ದಾನೆ.

ಆತನ ಫೋಟೋ ಅನ್ನು ಯಾರೋ ತೆಗೆದು ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವೈರಲ್ ಫೋಟೋಗಳನ್ನು ಟ್ವಿಟರ್‌ನಲ್ಲಿ ಆಗಾಗ್ಗೆ ಪೋಸ್ಟ್‌ ಮಾಡುವ ಉದ್ಯಮಿ ಆನಂದ್ ಮಹೀಂದ್ರಾ ಈ ಫೋಟೋ ಅನ್ನು ಶೇರ್‌ ಮಾಡಿದ್ದಾರೆ.

ಅಕ್ಕಪಕ್ಕದಲ್ಲಿ ಜನ ಇದ್ದರೂ ಮೂಗು, ಬಾಯಿಗೆ ಮಾಸ್ಕ್‌ ಹಾಕಿಕೊಳ್ಳದೇ ಕಣ್ಣಿಗೆ ಕಟ್ಟಿಕೊಂಡು ಮಲಗಿರುವುದು ಇಲ್ಲಿ ಕಾಣಬಹುದಾಗಿದೆ. 'ಮುಂಬೈನಲ್ಲಿ ಇತ್ತೀಚಿನ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿಂದಿನ ಕಾರಣಗಳನ್ನು ನೀವು ಹುಡುಕಲು ಪ್ರಾರಂಭಿಸಿದಾಗ ಈ ಕಾರಣ ಕೂಡ ಆಗಿದೆ ಎಂದು ಅವರು ಕಮೆಂಟ್ ಮಾಡಿ ಈ ಫೋಟೋ ಹಂಚಿಕೊಂಡಿದ್ದಾರೆ.

ಜನರಿಗೆ ರೋಗದ ಬಗ್ಗೆ ಹೆದರಿಕೆ, ಸರ್ಕಾರದ ನಿಯಮ ಪಾಲಿಸುವ ಕಳಕಳಿ ಇಲ್ಲದಿದ್ದರೆ ಕೋವಿಡ್‌ ಅತಿರೇಕಕ್ಕೆ ಹೋಗಬಹುದು ಎನ್ನುವ ಕಳಕಳಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net