ಪ್ರೇಮಿಗಳ ದಿನದಂದು ನಡೆಯಲಿದೆ ಈ ವಿಶೇಷ ಜೋಡಿಯ ಮದುವೆ! ಅದರಲ್ಲೇನು ಸ್ಪೆಷಲ್‌ ಅಂತೀರಾ?

lovers
Published on

ತಿರುವನಂತಪುರ: ಈ ಚಿತ್ರದಲ್ಲಿ ಕಾಣಿಸುತ್ತಿರುವವರ ಹೆಸರು ಪ್ರಭಾ ಮತ್ತು ಮನು ಕಾರ್ತಿಕಾ. ಇವರಿಬ್ಬರ ಮದುವೆ ಇದೇ 14ರಂದು ಅಂದರೆ ಪ್ರೇಮಿಗಳ ದಿನದಂದು ನಡೆಯಲಿದೆ.

ಸಾವಿರಾರು ಜೋಡಿಗಳು ಪ್ರೇಮಿಗಳ ದಿನದಂದು ಮದುವೆಯಾದರೆ ಈ ಜೋಡಿಯ ವಿಶೇಷ ಏನು ಎನ್ನುತ್ತೀರಾ? ಅಸಲಿಗೆ ಅಲ್ಲಿಯೇ ಇರುವುದು ವಿಶೇಷ. ಇಲ್ಲಿ ಕಾಣಿಸುತ್ತಿರುವ ಪ್ರಭಾಳ ಮೂಲ ಹೆಸರು ಶ್ಯಾಮ್‌. ಶ್ಯಾಮ್‌ ಇದೀಗ ಪ್ರಭಾ ಆಗಿ ಪರಿವರ್ತನೆಗೊಂಡಿದ್ದಾರೆ. ಈ ಟ್ರಾನ್ಸ್‌ಜೆಂಡರ್‌ ಮದುವೆ ಪ್ರೇಮಿಗಳ ದಿನಂದು ನಡೆಯಲಿದೆ.

ತಿರುವನಂತಪುರಂಮನಲ್ಲಿ ದಾಂಪತ್ಯ ಜೀವನಕ್ಕೆ ಇವರು ಕಾಲಿಡಲಿದ್ದಾರೆ. ವಿಶೇಷ ವಿವಾಹ ಕಾಯ್ದೆಯಡಿ ಕೇರಳ ಹೈಕೋರ್ಟ್​​ನಲ್ಲಿ ತಮ್ಮ ಮದುವೆ ನೋಂದಣಿ ಮಾಡಿಕೊಳ್ಳಲು ಇವರು ತಯಾರಿ ನಡೆಸಿದ್ದಾರೆ. ಐಡಿ ಕಾರ್ಡ್​​ಗಳಲ್ಲಿ ಪುರುಷ ಮತ್ತು ಮಹಿಳೆ ಎಂದು ಗುರುತು ಪಡೆದಿರುವ ಈ ಜೋಡಿ ಕುಟುಂಬದ ಆಶೀರ್ವಾದದೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಅಂದಹಾಗೆ ಇವರಿಬ್ಬರೂ 2017ರಿಂದ ಪರಿಚಿತರು. ಇಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net