More

    VIDEO: ಬುರ್ಕಾಧಾರಿ ಹಿಂದೆ ಹೋದ ಎಸ್‌ಪಿ ಕಾರ್ಯಕರ್ತ ಮಾಡಿದ್ದೇನು ನೋಡಿ! ಜಾಲತಾಣದಲ್ಲಿ ಆಕ್ರೋಶ

    ಲಖನೌ: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಆದರೆ ಮತಪ್ರಚಾರದ ವೇಳೆ ನಡೆದ ಕೆಲವು ಘಟನೆಗಳ ವಿಡಿಯೋ ಇದೀಗ ವೈರಲ್‌ ಆಗುತ್ತಿವೆ.

    ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, ಜಾಲತಾಣದಲ್ಲಿ ಥಹರೇವಾರಿ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.

    ಅದೇನೆಂದರೆ, ಬುರ್ಕಾ, ಹಿಜಾಬ್‌ ಧರಿಸಿದ ಯುವತಿಯೊಬ್ಬಳು ದಾರಿಯಲ್ಲಿ ಹೋಗುತ್ತಿದ್ದರೆ, ಅದೇ ವೇಳೆ ವ್ಯಕ್ತಿಯೊಬ್ಬ ಆಕೆಯ ಬೆನ್ನಿಗೆ ಸಮಾಜವಾದಿ ಪಕ್ಷದ ಪೋಸ್ಟರ್‌ ಅಂಟಿಸಿದ್ದಾನೆ. ಹಿನ್ನೆಲೆಯಿಂದ ವ್ಹಾ ಭಯ್ಯಾ, ವ್ಹಾ ಭಯ್ಯಾ ಎಂದು ಹೇಳಿರುವ ಮಾತುಗಳು ಕೇಳಿಬರುತ್ತಿವೆ. ಆ ಯುವತಿ ನಂತರ ಬೆನ್ನನ್ನು ಮುಟ್ಟಿ ನೋಡಿಕೊಂಡಿದ್ದು, ಮುಂದಕ್ಕೆ ಹೋಗಿ ಅಲ್ಲಿ ಬರುತ್ತಿದ್ದವರೊಬ್ಬರಿಗೆ ಬೆನ್ನನ್ನು ತೋರಿಸಿದ್ದಾಳೆ. ಇಷ್ಟು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ತಮ್ಮ ಟ್ವೀಟರ್ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕೆಂಪು ಟೋಪಿ ಧರಿಸಿರುವ ಸಮಾಜವಾದಿ ಪಕ್ಷದ ಕಾರ್ಯಕರ್ತರನೋರ್ವ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಚುನಾವಣಾ ಪ್ರಚಾರದ ಪರಿ ಇದು ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

    ಈ ವಿಡಿಯೋ ಭಾರಿ ವೈರಲ್‌ ಆಗಿ, ಸಮಾಜವಾದಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ಇದಕ್ಕೆ ಆ ವ್ಯಕ್ತಿ ಪ್ರತಿಕ್ರಿಯೆ ಕೊಟ್ಟಿದ್ದು, ‘ನಾವು ಅಣ್ಣ-ತಂಗಿ. ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದೆವು. ಅದನ್ನು ನಾನು ತಮಾಷೆಗಾಗಿ ಮಾಡಿದ್ದೇನೆ. ಪಕ್ಷದ ಇಮೇಜ್​ ಹಾಳು ಮಾಡುವ ಉದ್ದೇಶದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಲಾಗಿದೆ’ ಎಂದಿದ್ದಾರೆ.

    ಇದಕ್ಕೂ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಾಗಿದ್ದರೆ ಪಾಪ ಆ ಹೆಣ್ಣುಮಗಳಿಗೆ ತನ್ನ ಅಣ್ಣ ಎದುರು ಬಂದರೂ ಗೊತ್ತಾಗಲಿಲ್ಲವಾ? ಆಕೆಯ ಪ್ರತಿಕ್ರಿಯೆ ನೋಡಿದರೆ ಎದುರಿಗೆ ಬಂದವ ಅಣ್ಣ ಎಂದು ಎನಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

    ವಿಡಿಯೋ ಇಲ್ಲಿದೆ ನೋಡಿ:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts