More

    VIDEO: ಹಿಜಾಬ್‌ ವಿವಾದ- ಗಲಾಟೆ ಮಾಡ್ಬೇಡಿ ಎಂದು ಶಿಕ್ಷಕಿ ಮನವಿ ಮಾಡಿದ್ರೆ, ಈ ವಿದ್ಯಾರ್ಥಿನಿ ಹೇಳಿದ್ದು…

    ಕಾರ್ಕಳ: ಕಳೆದ ಕೆಲ ದಿನಗಳಿಂದ ರಾಜ್ಯದ ಕೆಲವು ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಈಗ ಒಂದೊಂದೇ ವಿಡಿಯೋ, ಸಾಕ್ಷ್ಯಾಧಾರಗಳು ಹೊರಬರುತ್ತಿವೆ. ಏಕಾಏಕಿ ಭುಗಿಲೆದ್ದಿರುವ ಈ ವಿವಾದದ ಹಿಂದಿನ ಕೈವಾಡ ಯಾವುದು ಎಂಬ ಬಗ್ಗೆ ಆರೋಪ, ಪ್ರತ್ಯಾರೋಪಗಳು ಕೇಳಿಬರುತ್ತಿರುವ ನಡುವೆಯೇ ಕಾರ್ಕಳದ ಕಾಲೇಜೊಂದರಲ್ಲಿ ನಡೆದ ಗಲಾಟೆಯ ವಿಡಿಯೋ ಇದೀಗ ವೈರಲ್‌ ಆಗಿದೆ.

    ಮಂಗಳವಾರ (ಫೆ.8) ಎಂಜಿಎಂ ಕಾಲೇಜಿನಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಏನೆಂದರೆ, ಹಿಜಾಬ್‌, ಬುರ್ಖಾ ಹಾಕಿಕೊಂಡು ಬಂದ ಕೆಲ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ನಯನಾ ಎಂಬ ಶಿಕ್ಷಕಿ ಮಕ್ಕಳನ್ನು ತಣ್ಣಗಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾರೂ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಈ ಸಂದರ್ಭದಲ್ಲಿ ಅಲ್ಲಿಯೇ ಕೂಗಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಮುಟ್ಟಿ ಗಲಾಟೆ ಮಾಡಬೇಡಿ ಎಂದಿದ್ದಾರೆ. ಅದಕ್ಕೆ ಸಿಟ್ಟಿಗೆದ್ದ ಆ ವಿದ್ಯಾರ್ಥಿನಿ, ‘ಬುಲ್ ಶಿಟ್’ ಎಂದು ಶಬ್ದ ಪ್ರಯೋಗ ಮಾಡಿದ್ದೂ ಅಲ್ಲದೇ, ‘ಡೋಂಟ್‌ ಟಚ್‌’ ಎಂದು ಶಿಕ್ಷಕಿಗೆ ಹೇಳಿದ್ದಾಳೆ. ತಾವು ಶಿಕ್ಷಣ ನೀಡುತ್ತಿರುವ ವಿದ್ಯಾರ್ಥಿನಿ ಈ ರೀತಿಯ ಕೆಟ್ಟ ಪ್ರಯೋಗ ಉಪಯೋಗಿಸಿದ್ದು, ಒಂದು ಕ್ಷಣ ಶಿಕ್ಷಕಿಯನ್ನು ವಿಚಲಿತರನ್ನಾಗಿ ಮಾಡಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ವಿದ್ಯಾರ್ಥಿನಿಯ ಈ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣ ನೀಡುವ ಗುರುಗಳಿಗೆ ಗೌರವ ಕೊಡದ ನಿಮ್ಮದ್ದೇನು ಸಂಸ್ಕಾರ ಎಂದು ಹಲವರು ತರಾಟೆ ತೆಗೆದುಕೊಂಡಿದ್ದರೆ, ಹೀಗೆ ಹೇಳಲು ಹೇಳಿಕೊಟ್ಟವರಾರು ಎಂದು ಇನ್ನು ಹಲವರು ಅಸಮಾಧಾನ ಹೊರಹಾಕಿದ್ದಾರೆ. ಹಿಜಾಬ್ ವಿವಾದದಿಂದಾಗಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಸಂಬಂಧ ಹದಗೆಡುತ್ತಿರುವ ಬಗ್ಗೆ ಹಲವರು ಬೇಸರಿಸಿ ಕಮೆಂಟ್‌ ಮಾಡಿದ್ದಾರೆ.

    ಇಲ್ಲಿದೆ ನೋಡಿ ವಿಡಿಯೋ:

    ಹಿಜಾಬ್‌ ಧರಿಸಿ ಪೋರ್ನ್‌ ವಿಡಿಯೋ ಶೂಟಿಂಗ್‌: ನೀಲಿಚಿತ್ರ ತಾರೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ

    ’ಹಿಜಾಬ್, ಕೇಸರಿ ಶಾಲಾ ಕ್ಯಾಂಪಸ್‌ ಒಳಗೆ ಸಲ್ಲ: ಎಲ್ಲವೂ ಕಾಂಗ್ರೆಸ್‌ ಷಡ್ಯಂತ್ರ ಎನ್ನುವುದು ತಿಳಿದಿದೆ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts