

ಮಂಡ್ಯ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳಿಗೆ ಮೆರಿಟ್ ಕಂ ರೋಸ್ಟರ್ ಆಧಾರದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 17
ರಾಷ್ಟ್ರೀಯ ಆರೋಗ್ಯ ಅಭಿಯಾನದ ತಾಯಿ ಆರೋಗ್ಯ, ಆರ್ಎನ್ಟಿಸಿಪಿ, ಆರ್ಬಿಎಸ್ಕೆ, ಇ-ಹಾಸ್ಪಿಟಲ್ ಕಾರ್ಯಕ್ರಮಗಳಡಿ ಮಂಡ್ಯದ ನಗರ ಪ್ರಾದೇಶಿಕ ಆರೋಗ್ಯಕೇಂದ್ರ, ಎಸ್ಎನ್ಸಿಯು, ಕೆಆರ್ಪೇಟೆ, ಎಫ್ಆರ್ಯುಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆ ವಿವರ
* ಪ್ರಸೂತಿ ತಜ್ಞರು - 1
* ಅರಿವಳಿಕೆ ತಜ್ಞರು - 1
* ವೈದ್ಯರು - 7
* ಕಿರಿಯ ಮಹಿಳಾ ಆರೋಗ್ಯ ಸಹಾಯಕಿ - 6
* ನೇತ್ರ ಸಹಾಯಕರು - 1
* ಇ-ಹಾಸ್ಪಿಟಲ್ ಪ್ರೋಗ್ರಾಮರ್/ ಆಪರೇಶನ್ ಮ್ಯಾನೇಜರ್ - 1
ಶೈಕ್ಷಣಿಕ ಅರ್ಹತೆ: ಎಂಡಿ, ಒಬಿಜಿ, ಡಿಎನ್ಬಿ, ಡಿಜಿಒ, ಡಿಎ, ಡಿಪ್ಲೊಮಾ, ಎಂಬಿಬಿಎಸ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ತರಬೇತಿ ಪಡೆದಿದ್ದು, ಸ್ಟೇಟ್ ಪ್ಯಾರಾಮೆಡಿಕಲ್ ಬೋರ್ಡ್ನಲ್ಲಿ ನೋಂದಾಯಿತರಾಗಿರಬೇಕು, ಬಿಇ, ಬಿಟೆಕ್, ಎಂಟೆಕ್, ಎಂಸಿಎ. ಎನ್ಪಿಸಿಬಿ ಹಾಗೂ ಕಂಪ್ಯೂಟರ್ ತರಬೇತಿ ಅವಶ್ಯ.
ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 45 ರಿಂದ 70 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ತಜ್ಞರಿಗೆ 1,10,000 ರೂ., ವೈದ್ಯರಿಗೆ 45,000 ರೂ., ಕಿರಿಯ ಮಹಿಳಾ ಆರೋಗ್ಯ ಸಹಾಯಕಿಗೆ 11,500 ರೂ., ನೇತ್ರ ಸಹಾಯಕರಿಗೆ 12,600 ರೂ., ಇ-ಹಾಸ್ಪಿಟಲ್ ಪ್ರೋಗ್ರಾಮರ್ಗೆ 29,000 ರೂ. ಮಾಸಿಕ ವೇತನ ನೀಡಲಾಗುವುದು.
ಅರ್ಜಿ ಸಲ್ಲಿಕೆ ವಿಧಾನ: ಆಸಕ್ತ, ಅರ್ಹ ಅಭ್ಯರ್ಥಿಗಳು 21.5.2021ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ಒಳಗೆ ಅರ್ಜಿ ಪಡೆದು ಭತಿರ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅಂದು ಮಧ್ಯಾಹ್ನ 3 ಗಂಟೆ ಒಳಗೆ ಸಲ್ಲಿಸುವುದು. ನಂತರ 24.5.2021ರಂದು ಬೆಳಗ್ಗೆ 10 ಗಂಟೆಯಿಂದ ಆರಂಭವಾಗುವ ಮೂಲದಾಖಲೆ ಪರಿಶೀಲನೆಗೆ ಹಾಜರಾಗಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 21.5.2021
ಸಂದರ್ಶನ ನಡೆಯುವ ದಿನಾಂಕ: 24.5.2021
ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ, ಮಂಡ್ಯ ಜಿಲ್ಲೆ.
ಅಧಿಸೂಚನೆಗೆ: https://bit.ly/2RiQBYZ
ಮಾಹಿತಿಗೆ: 08232-224027