More

    ವೈದ್ಯಕೀಯ ಪದವೀಧರರಿಗೆ ಭರ್ಜರಿ ಅವಕಾಶ: 184 ಹುದ್ದೆಗಳಿಗೆ ಆಹ್ವಾನ- ಎರಡೂವರೆ ಲಕ್ಷ ರೂ ಸಂಬಳ

    ಕೊಡಗು ಜಿಲ್ಲೆಯ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ಅಧೀನದ ಕೋವಿಡ್​ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 6 ತಿಂಗಳ ಅವಧಿಗೆ ಅಥವಾ ಕೋವಿಡ್​ ಪರಿಸ್ಥಿತಿ ಸುಧಾರಿಸುವ ವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

    ಒಟ್ಟು ಹುದ್ದೆಗಳು: 184

    ಹುದ್ದೆ ವಿವರ
    ಫಿಜಿಷಿಯನ್ಸ್​ 6, ಪಲ್ಮೊನೊಲಾಜಿಸ್ಟ್​ 3, ಕಾಡಿರ್ಯಾಲಜಿಸ್ಟ್​ 1, ನೆಪ್ರೊಲಾಜಿಸ್ಟ್​1, ಅನಸ್ತೇಷಿಯಾಲಾಜಿಸ್ಟ್​ 10, ಬಯೋಮೆಡಿಕಲ್​ ಇಂಜಿನಿಯರ್ಸ್​ 1, ನಸಿರ್ಂಗ್​ ಆಫೀಸರ್ಸ್​ 100, ಫಾರ್ಮಸಿಸ್ಟ್​ 4, ಜೂನಿಯರ್​/ ಸೀನಿಯರ್​ ಲ್ಯಾಬ್​ ಟೆಕ್ನೀಷಿಯನ್​ 12, ಎಮರ್ಜೆನ್ಸಿ ಮೆಡಿಸಿನ್​/ ಇಂಟೆಂನ್ಸಿವಿಸ್ಟ್​ 4, ರೆಸ್ಪಿರೇಟರಿ ಕೇರ್​ ಟೆಕ್ನೀಷಿಯನ್​ 4, ವೆಂಟಿಲೇಟರ್​ ಟೆಕ್ನೀಷಿಯನ್ಸ್​ 4, ಐಸಿಯು ಟೆಕ್ನೀಷಿಯನ್ಸ್​/ ಒಟಿ ಟೆಕ್ನೀಷಿಯನ್ಸ್​ 8, ಆಕ್ಸಿಜೆನ್​ ಪ್ಲಾಂಟ್​ ಆ್ಯಂಡ್​ ಅದರ್​ ಮೆಡಿಕಲ್​ ಎಕ್ವಿಪ್​ಮೆಂಟ್ಸ್​ ಮೆಂಟೇನೆನ್ಸ್​ ಇಂಜಿನಿಯರ್​/ ಟೆಕ್ನೀಷಿಯನ್​ 4, ಸ್ವಾಬ್​ ಕಲೆಕ್ಟರ್ಸ್​ 6, ಫಿಜಿಯೋಥೆರಪಿಸ್ಟ್​ 3, ಡಯಾಲಿಸಿಸ್​ ಟೆಕ್ನೀಷಿಯನ್ಸ್​ 3, ಇಕೋ ಟೆಕ್ನೀಷಿಯನ್ಸ್​ 2, ಡೇಟಾ ಎಂಟ್ರಿ ಆಪರೇಟರ್​ 8

    ಶೈಕ್ಷಣಿಕ ಅರ್ಹತೆ: ಅನಸ್ತೇಷಿಯಾ ಕೇರ್​ ಟೆಕ್ನಾಲಜಿ/ ಡಿಒಟಿಟಿ, ಮೆಕ್ಯಾನಿಕಲ್​, ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ / ಇಆ್ಯಂಡ್​ಇ ಟೆಕ್ನಾಲಜಿ, ಫಿಜಿಯೋಥೆರಪಿಸ್ಟ್​, ಡಯಾಲಿಸಿಸ್​ ಟೆಕ್ನಾಲಜಿ, ಇಸಿಎಚ್​ಒ ಟೆಕ್ನಾಲಜಿ/ ಅನಸ್ತೇಷಿಯಾ ಕೇರ್​, ಬಯೋಮೆಡಿಕಲ್​ನಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ಶಿಕ್ಷಣ, ಪದವಿ, ಬಿ ಫಫಾರ್ಮಾ/ ಡಿ ಫಾರ್ಮಾ, ಡಿಎಂಎಲ್​ಟಿ/ ಬಿಎಸ್ಸಿ ಎಂಎಲ್​ಟಿ, ಬಿಎಸ್ಸಿ, ಎಂಡಿ, ಡಿಎನ್​ಬಿ, ಡಿಎಂ ಮಾಡಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.

    ವೇತನ: ಫಿಜಿಷಿಯನ್​, ಪುಲ್ಮೋನೊಲಾಜಿಸ್ಟ್​, ಕಾಡಿರ್ಯಾಲಾಜಿಸ್ಟ್​, ನೆಪ್ರೋಲಾಜಿಸ್ಟ್​, ಅಸ್ತೇಷಿಯಾಲಜಿಸ್ಟ್​ ಹುದ್ದೆಗಳಿಗೆ ಮಾಸಿಕ 2,50,000 ರೂ., ಬಯೋ ಮೆಡಿಕಲ್​ ಇಂಜಿನಿಯರ್​ಗೆ ಮಾಸಿಕ 35,000 ರೂ., ಡೇಟಾ ಎಂಟ್ರಿ ಆಪರೇಟರ್​ಗೆ ಮಾಸಿಕ 14,000 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 20,000 ರೂ. ವೇತನ ನಿಗದಿಪಡಿಸಲಾಗಿದೆ.

    ಸೂಚನೆ: ಕೋವಿಡ್​ ನಿಮಿತ್ತ ಕರ್ತವ್ಯಕ್ಕೆ ನೇಮಕಗೊಳ್ಳುವ ಸಿಬ್ಬಂದಿ ಸರ್ಕಾರದ ಆರೋಗ್ಯ ವಿಮೆಗೆ ಒಳಪಡುತ್ತಾರೆ. ಹಾಗೂ ಸಿಬ್ಬಂದಿಗೆ ಕೋವಿಡ್​ ಲಸಿಕೆ ನೀಡಲಾಗುವುದು.

    ಸಂದರ್ಶನಕ್ಕ ಹಾಜರಾಗುವ ದಿನ: 10.5.2021 ರಿಂದ 15.5.2021ರ ವರೆಗೆ
    ಸಂದರ್ಶನ ನಡೆಯುವ ಸ್ಥಳ: ಕೌನ್ಸಿಲ್​ ಸಭಾಂಗಣ, ಎ ಬ್ಲಾಕ್​, ಕೊಡಗು ವೈದ್ಯಕಿಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ.

    ಅಧಿಸೂಚನೆಗೆ: https://bit.ly/3f7olAy
    ಮಾಹಿತಿಗೆ: ದೂ. ಸಂ. 08272 298220/ ಇ.ಮೇಲ್​ [email protected]

    ಇಂಜಿನಿಯರಿಂಗ್‌ ಪದವೀಧರರಿಗೆ ಐಐಟಿಯಲ್ಲಿ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಪದವಿ ಯಾವುದೇ ಇರಲಿ… ಜಲ ಅಭಿವೃದ್ಧಿ ಸಂಸ್ಥೆಯಲ್ಲಿವೆ ಉದ್ಯೋಗಾವಕಾಶ: 62 ಹುದ್ದೆಗಳಿಗೆ ಆಹ್ವಾನ

    ವಿಜ್ಞಾನ ಪದವೀಧರರಿಗೆ ಬಿಎಚ್‌ಇಎಲ್‌ನಲ್ಲಿ ಉದ್ಯೋಗಾವಕಾಶ- ನಾಲ್ಕೇ ದಿನಗಳು ಬಾಕಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts