More

    ಪದವಿ ಯಾವುದೇ ಇರಲಿ… ಜಲ ಅಭಿವೃದ್ಧಿ ಸಂಸ್ಥೆಯಲ್ಲಿವೆ ಉದ್ಯೋಗಾವಕಾಶ: 62 ಹುದ್ದೆಗಳಿಗೆ ಆಹ್ವಾನ

    ನ್ಯಾಷನಲ್​ ವಾಟರ್​ ಡೆವಲಪ್​ಮೆಂಟ್​ ಏಜೆನ್ಸಿ (ಎನ್​ಡಬ್ಲುಡಿಎ) ಕೇಂದ್ರ ಜಲಶಕ್ತಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಸಂಸ್ಥೆಯ ಮುಖ್ಯ ಕಚೇರಿ ಹಾಗೂ ದೇಶಾದ್ಯಂತ ಇರುವ ವಿವಿಧ ಶಾಖೆಗಳಲ್ಲಿ ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಭಾರತೀಯ ಅಭ್ಯರ್ಥಿಗಳಿಂದ ಅಜಿರ್ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 62

    ಹುದ್ದೆ ವಿವರ
    * ಜೂನಿಯರ್​ ಇಂಜಿನಿಯರ್​ (ಸಿವಿಲ್​) – 16
    * ಹಿಂದಿ ಟ್ರಾನ್ಸ್​ಲೇಟರ್​ – 1
    * ಜೂನಿಯರ್​ ಅಕೌಂಟ್​ ಆಫೀಸರ್​ – 5
    * ಅಪ್ಪರ್​ ಡಿವಿಷನ್​ ಕ್ಲರ್ಕ್​- 12
    * ಸ್ಟೆನೋಗ್ರಾರ್​ ಗ್ರೇಡ್​-ಐಐ – 5
    * ಲೋವರ್​ ಡಿವಿಷನ್​ ಕ್ಲರ್ಕ್​- 23

    ಶೈಕ್ಷಣಿಕ ಅರ್ಹತೆ: ದ್ವಿತೀಯ ಪಿಯುಸಿ, ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ/ ಪದವಿ, ಹಿಂದಿ ಅಥವಾ ಇಂಗ್ಲಿಷ್​ ಕಡ್ಡಾಯ ವಿಷಯವಾಗಿ ಸ್ನಾತಕೋತ್ತರ ಪದವಿ, ಕಾಮರ್ಸ್​ ಪದವಿ, ಯಾವುದೇ ಪದವಿ ಜತೆ ಕಂಪ್ಯೂಟರ್​ ಜ್ಞಾನ ಅವಶ್ಯ.

    ವಯೋಮಿತಿ: ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ ನಿಗದಿಯಾಗಿದ್ದು, ಹಿಂದಿ ಟ್ರಾನ್ಸ್​ಲೇಟರ್​ ಹಾಗೂ ಜೂನಿಯರ್​ ಅಕೌಂಟ್​ ಆಫೀಸರ್​ಗೆ ಗರಿಷ್ಠ 30 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 27 ವರ್ಷ ನಿಗದಿಯಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ವೇತನ: ಜೂನಿಯರ್​ ಇಂಜಿನಿಯರ್​, ಹಿಂದಿ ಟ್ರಾನ್ಸ್​ಲೇಟರ್​, ಜೂ.ಅಕೌಂಟ್​ ಆಫೀಸರ್​ಗೆ ಮಾಸಿಕ 35,400-1,12,400 ರೂ. ವೇತನ ಇದೆ, ಅಪ್ಪರ್​ ಡಿವಿಷನ್​ ಕ್ಲರ್ಕ್​ ಹಾಗೂ ಸ್ಟೆನೋಗ್ರಾರ್​ಗೆ ಮಾಸಿಕ 25,500-81,100 ರೂ., ಲೋವರ್​ ಡಿವಿಷನ್​ ಕ್ಲರ್ಕ್​ಗೆ 19,900-63,200 ರೂ. ವೇತನ ನೀಡಲಾಗುವುದು.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 33 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 9, ಎಸ್ಸಿಗೆ 10, ಎಸ್​ಟಿಗೆ 4, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 5 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಶೇ.4 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಆನ್​ಲೈನ್​ ಪರೀೆಗೆ ಆಹ್ವಾನಿಸಲಾಗುವುದು. ಸ್ಟೆನೋಗ್ರ್ರಾರ್​ ಹಾಗೂ ಲೋವರ್​ ಡಿವಿಷನ್​ ಕ್ಲರ್ಕ್​ ಹುದ್ದೆಗೆ ಕೌಶಲ ಪರೀೆ (ಶಾರ್ಟ್​ಹ್ಯಾಂಡ್​/ ಟೈಪಿಂಗ್​) ನಡೆಸಲಾಗುವುದು. ಪರೀಕ್ಷೆಯು ಇಂಗ್ಲಿಷ್​/ ಹಿಂದಿ ಭಾಷೆಯಲ್ಲಿರಲಿದೆ.

    ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು 840 ರೂ. ಹಾಗೂ ಎಸ್ಸಿ, ಎಸ್ಟಿ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು, ಅಂಗವಿಕಲ, ಮಹಿಳಾ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 25.6.2021
    ಅಧಿಸೂಚನೆಗೆ: https://bit.ly/3wafKnN
    ಮಾಹಿತಿಗೆ: http://www.nwda.gov.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ವಿವಿಧ ಪದವೀಧರರಿಗೆ ಬ್ಯಾಂಕ್​ ನೋಟ್​ ಪ್ರೆಸ್​ನಲ್ಲಿ 135 ಹುದ್ದೆಗಳು: ಲಕ್ಷದವರೆಗೂ ಸಂಬಳ

    ಕೃಷಿ ವಿಷಯದ ವಿವಿಧ ವಿಭಾಗಗಳಲ್ಲಿ ಪದವಿ ಪಡೆದಿರುವಿರಾ? ಇಲ್ಲಿವೆ ವಿವಿಧ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts