More

    ಕೃಷಿ ವಿಷಯದ ವಿವಿಧ ವಿಭಾಗಗಳಲ್ಲಿ ಪದವಿ ಪಡೆದಿರುವಿರಾ? ಇಲ್ಲಿವೆ ವಿವಿಧ ಉದ್ಯೋಗಾವಕಾಶ

    ಕೃಷಿ ಇಲಾಖೆಯ ಬೆಳೆ ವಿಮಾ ಯೋಜನೆಯಡಿ ಅನುಷ್ಠಾನಗೊಳಿಸಿರುವ ರಾಜ್ಯ ಮಟ್ಟದ ತಾಂತ್ರಿಕ ಉತ್ತೇಜನ ಘಟಕಕ್ಕೆ 2021-22ನೇ ಆಥಿರ್ಕ ಸಾಲಿನ ಅಂತ್ಯದವರೆಗೆ ಮಾತ್ರ ಎಂಬ ಷರತ್ತಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ ವಿವರ:
    ರಾಜ್ಯ ತಾಂತ್ರಿಕ ಘಟಕದ ಮುಖ್ಯಸ್ಥರು, ಕಾರ್ಯಕ್ರಮ ಸಂಯೋಜಕರು, ಸಂವಹನ ಅಧಿಕಾರಿ, ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣಾ ವ್ಯವಸ್ಥೆ ತಜ್ಞರು, ದತ್ತಾಂಶ ವಿಶ್ಲೇಷಕರು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ತಜ್ಞರು, ತೋಟಗಾರಿಕಾ ತಜ್ಞರು, ಗುಮಾಸ್ತ, ಡೇಟಾ ಎಂಟ್ರಿ ಆಪರೇಟರ್​ ಗಳಲ್ಲಿ ತಲಾ ಒಂದೊಂದು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಹುದ್ದೆಗಳಿಗೆ ಅನುಗುಣವಾಗಿ ತತ್ಸಮಾನ ವಿದ್ಯಾರ್ಹತೆ ಹಾಗೂ ಅನುಭವ ಇರುವ ಅಭ್ಯರ್ಥಿಗಳು ಅರ್ಜಿಯನ್ನು ನೇರವಾಗಿ ಅಥವಾ ಅಂಚೆ ಮೂಲಕ ಅಥವಾ ದಾಖಲೆಗಳನ್ನು ಪಿಡಿಎಫ್‌ ಫಾರ್ಮ್ಯಾಟ್‌​ನಲ್ಲಿ ಇಮೇಲ್​- [email protected] ಅರ್ಜಿ ಸಲ್ಲಿಸಬಹುದು. ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: 17.5.2021
    ಅರ್ಜಿ ಸಲ್ಲಿಕೆ ವಿಳಾಸ: ಕೃಷಿ ಆಯುಕ್ತರು, ಕೃಷಿ ಆಯುಕ್ತಾಲಯ, ಶೇಷಾದ್ರಿರಸ್ತೆ, ಬೆಂಗಳೂರು-560001

    ಅಧಿಸೂಚನೆಗೆ: https://bit.ly/3euaLYM
    ಮಾಹಿತಿಗೆ: https://karnataka.gov.in A¥ÜÊÝ 080&22074188

    ಬೋಧಕರ ಹುದ್ದೆಗೆ ಆಹ್ವಾನ: 

    ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಧಾರವಾಡ ಮತ್ತು ನಿಪ್ಪಾಣಿಯಲ್ಲಿರುವ ಕೃಷಿ ಕಾಲೇಜಿನಲ್ಲಿ ಡಿಪ್ಲೊಮಾ ಕೃಷಿ ವಿದ್ಯಾಥಿರ್ಗಳಿಗೆ ಕೋರ್ಸ್​ಗಳ ಬೋಧನೆಗೆ ಇಬ್ಬರು ಅರೆಕಾಲಿಕ ಉಪನ್ಯಾಸಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಅನಿಮಲ್​ ಸೈನ್ಸ್​/ ವೆರ್ಟನರಿ ಸೈನ್ಸ್​ ವಿಷಯಗಳಲ್ಲಿ ಎಂಎಸ್ಸಿ/ ಎಂವಿಎಸ್ಸಿ/ ಪಿಎಚ್​ಡಿ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರೆಕಾಲಿಕ ಉಪನ್ಯಾಸಕರನ್ನು 2020-21ರ ಸೆಮಿಸ್ಟಾರ್​ ಅವಧಿ 179 ದಿನಗಳ ಅವಧಿಗೆ ಮೀರದಂತೆ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುವುದು. ಮಾಸಿಕ 40,000 ರೂ. ದಾಟದಂತೆ ಪ್ರತಿ ಬೋಧನಾ ಅವಧಿಗೆ 2000 ರೂ. ವೇತನ ನೀಡಲಾಗುವುದು. ಸಂದರ್ಶನವನ್ನು ಡೀನ್​ (ಸ್ನಾತಕೋತ್ತರ) ಕಚೇರಿ, ಕೃವಿವಿ, ಧಾರವಾಡದಲ್ಲಿ ಆನ್​ಲೈನ್​ ಮೂಲಕ ನಡೆಸಲಾಗುವುದು. ಸಂದರ್ಶನದ ಆನ್​ಲೈನ್​ ಜೂಮ್​ ಲಿಂಕ್​ ಐಡಿಯನ್ನು ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಮೇ18ರ ಸಂಜೆ 5 ಗಂಟೆ ಒಳಗೆ ಕಳುಹಿಸಲಾಗುವುದು. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಬಯೋಡೇಟಾ, ವೃತ್ತಿ ಅನುಭವ ಹಾಗೂ ಇತರ ಅಗತ್ಯ ದಾಖಲೆಗಳನ್ನು ಮೇ 18ರ ಬೆಳಗ್ಗೆ 10 ಗಂಟೆ ಒಳಗಾಗಿ ಇಮೇಲ್​ – ಛಛಿಚ್ಞಟಜಠಃ್ಠಚಠಛ.ಜ್ಞಿ ಗೆ ಕಳುಹಿಸಬೇಕು.

    ಅರ್ಜಿ ಸಲ್ಲಿಸಲು ಕೊನೇದಿನ: 18.5.2021
    ಸಂದರ್ಶನ ನಡೆಯುವ ದಿನಾಂಕ: 19.5.2021

    ಅಧಿಸೂಚನೆಗೆ: https://bit.ly/2RAM3x8
    ಮಾಹಿತಿಗೆ: http://www.uasd.edu

    ಇಂಜಿನಿಯರ್‌ ಪದವೀಧರರಿಗೆ ಎನ್‌ಎಚ್‌ಎಐನಲ್ಲಿ ಉದ್ಯೋಗಾವಕಾಶ: 41 ಹುದ್ದೆಗಳಿಗೆ ಆಹ್ವಾನ

    ಮಿಲಿಟರಿ ಇಂಜಿನಿಯರಿಂಗ್​ ಸರ್ವೀಸ್​ನಲ್ಲಿ 502 ಡ್ರಾಫ್ಟ್‌ಮನ್‌, ಸೂಪರ್​ವೈಸರ್​ ಹುದ್ದೆಗಳಿಗೆ ಆಹ್ವಾನ

    ಕರೊನಾ ವಾರಿಯರ್​ ಆಗಲು ರೆಡಿನಾ? 1061 ಹುದ್ದೆಗಳ ನೇರ ಸಂದರ್ಶನ: 2.50 ಲಕ್ಷ ರೂ ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts