More

    ಕರೊನಾ ವಾರಿಯರ್​ ಆಗಲು ರೆಡಿನಾ? 1061 ಹುದ್ದೆಗಳ ನೇರ ಸಂದರ್ಶನ: 2.50 ಲಕ್ಷ ರೂ ವರೆಗೆ ಸಂಬಳ

    ಬಳ್ಳಾರಿ ಜಿಲ್ಲಾಡಳಿತದಿಂದ ಕೋವಿಡ್​ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್​ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೋವಿಡ್​ ಕೇರ್​ ಆಸ್ಪತ್ರೆಗಳನ್ನು ತೆರೆಯಲಾಗುತ್ತಿದ್ದು, ಸದರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ ಅಭ್ಯಥಿರ್ಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 1061

    ಜಿಲ್ಲಾ ಸದರಿ ಆಸ್ಪತ್ರೆಗಳಲ್ಲಿ
    ಹುದ್ದೆ — ಸಂಖ್ಯೆ — ವೇತನ
    * ಫಿಜಿಷಿಯನ್​ — 21 — 2,50,000
    * ಅನಸ್ತೇಷಿಯಸ್ಟ್​ — 16 — 2,50,000
    * ಒಬಿಜಿ — 1 2,50,000
    * ಸ್ಪೆಷಲಿಸ್ಟ್​ (ಮೆಡಿಸನ್​/ ಅನಸ್ತೇಷಿಯಾ/ ರೆಸ್ಪಿರೇಟರಿ ಮೆಡಿಸನ್​/ ಇಎನ್​ಟಿ) — 20 — 2,50,000
    * ಫಿಜಿಕ್ಸ್​ ಥೆರಫಿಸ್ಟ್​ — 6 — 30,000
    * ಸ್ಟಾಫ್​ ನರ್ಸ್​ — 146 — 25,000
    * ಲ್ಯಾಬ್​ ಟೆಕ್ನಿಷಿಯನ್ಸ್​ — 30 — 20,000
    * ಫಾರ್ಮಸಿಸ್ಟ್​ — 12 — 20,000
    * ಎಕ್ಸ್​ರೇ ಟೆಕ್ನಿಷಿಯನ್ಸ್​ — 13 — 20,000
    * ಗ್ರೂಪ್​ ಡಿ — 141 — 15,000
    * ಡ್ರೈವರ್​ — 4 — 15,000

    ಜಿಂದಾಲ್​ ಸಂಜೀವಿನಿ 1000 ಹಾಸಿಗೆಗಳ ಆಸ್ಪತ್ರೆಯಲ್ಲಿ
    * ಫಿಜಿಷಿಯನ್​/ಅನಸ್ತೇಷಿಯಾಲಾಜಿಸ್ಟ್​/ ಇನ್​ಟೆನ್ಸಿವಿಸಿಟ್ಸ್​ (ಸ್ಪೆಷಲಿಸ್ಟ್​) — 31 — 2,50,000
    * ಡಾಕ್ಟರ್ಸ್​ — 75 — 50,000 —
    * ನರ್ಸ್​ — 155 — 20,000+5,000 ಇನ್​ಸೆಂಟೀವ್ಸ್​
    * ನಸಿರ್ಂಗ್​ ಸೂಪರ್​ವೈಸರ್​ — 19 — 25,000
    * ರೇಡಿಯಾಲಜಿ ಟೆಕ್ನಿಷಿಯನ್​ — 12 — 25,000
    * ಫಿಜಿಯೋಥೆರಪಿಸ್ಟ್​ — 12 — 25,000+5000 ಇನ್​ಸೆಂಟೀವ್ಸ್​
    * ಲ್ಯಾಬ್​ ಟೆಕ್ನಿಷಿಯನ್​ — 12 — 22,000
    * ಗ್ರೂಪ್​ ಡಿ — 300 — 15,000+3,000 ಇನ್​ಸೆಂಟೀವ್ಸ್​
    * ಫಾರ್ಮಸಿಸ್ಟ್​ — 6 — 22,000
    * ಸ್ಟೋರ್​ ಕೀಪರ್ಸ್​ — 4 — 20,000
    * ಸೈಕಾಲಜಿಕಲ್​ ಕೌನ್ಸಿಲರ್​ — 6 — 25,000
    * ಬಯೋಮೆಡಿಕಲ್​ ಇಂಜಿನಿಯರ್ಸ್​ — 5 — 22,000
    * ಡಯೆಟೀಷಿಯನ್​ — 5 — 20,000

    ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ ಮಾಡಿರುವ ಅಭ್ಯಥಿರ್ಗಳು ಸಂದರ್ಶನಕ್ಕೆ ಹಾಜರಾಗಬಹುದು.

    ಎಲ್ಲೆಲ್ಲಿ ಉದ್ಯೋಗಾವಕಾಶ?
    ಬಳ್ಳಾರಿ, ಹಡಗಲಿ, ಹೊಸಪೇಟೆ, ಎಚ್​ಪಿ ಹಳ್ಳಿ, ಕೂಡ್ಲಿಗಿ, ಸಿರಗುಪ್ಪ, ಸಂಡೂರು, ಎಚ್​ಬಿ ಹಳ್ಳಿ, ಕೊಟ್ಟೂರು, ಕುರುಗೋಡು, ಕಂಪ್ಲಿ ತಾಲೂಕುಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಸೂಚನೆ: ಸಂದರ್ಶನಕ್ಕೆ ಹಾಜರಾಗುವ ಅಭ್ಯಥಿರ್ಗಳು ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಗುತ್ತಿಗೆ ಅವಧಿಯು 3 ತಿಂಗಳದ್ದಾಗಿದ್ದು, ಇನ್ನೂ 3 ತಿಂಗಳು ವಿಸ್ತರಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯಥಿರ್ಗಳು ಬಳ್ಳಾರಿ ಜಿಲ್ಲೆಯ ಯಾವುದೇ ತಾಲೂಕಿನಲ್ಲಾದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

    ಊಟ, ವಸತಿ ವ್ಯವಸ್ಥೆ: ಜಿಂದಾಲ್​ ಸಂಜೀವಿನಿ 1000 ಹಾಸಿಗೆಗಳ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಊಟ ಮತ್ತು ವಸತಿ ಉಚಿತವಾಗಿ ಕಲ್ಪಿಸಲಾಗುವುದು. ಜಿಲ್ಲಾ ಆಸ್ಪತ್ರೆ, ವಿಮ್ಸ್​ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶುಶ್ರೂಷಕರಿಗೆ ಹಾಗೂ ಪ್ಯಾರಾಮೆಡಿಕಲ್​ ಸಿಬ್ಬಂದಿಗೆ ಅವಶ್ಯಕತೆ ಇದ್ದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಪರಿಗಣಿಸಲಾಗುವುದು.

    ಸಂದರ್ಶನ ನಡೆಯುವ ದಿನಾಂಕ: 4.5.2021ರಿಂದ ಆರಂಭವಾಗಿದ್ದು, 11.5.2021ರ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ.
    ಸಂದರ್ಶನ ನಡೆಯುವ ಸ್ಥಳ: ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರ ಕಚೇರಿಯಲ್ಲಿ ನಡೆಸಲಾಗುವುದು.

    ಅಧಿಸೂಚನೆಗೆ: https://bit.ly/3nOyeHb
    ಮಾಹಿತಿಗೆ: (080) 392277100

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಸಿವಿಲ್‌, ಮೆಕ್ಯಾನಿಕಲ್‌, ಇಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಪದವೀಧರರಿಂದ ಅರ್ಜಿ ಆಹ್ವಾನ

    ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌: ಎಸ್‌ಬಿಐನಲ್ಲಿ 5121 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts