ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

1 Min Read
ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಹಿರೇಕೆರೂರ: ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ನಾಗರಾಜ ಪರಮೇಶಪ್ಪ ದೂದಿಹಳ್ಳಿ (26) ಮೃತಪಟ್ಟ ರೈತ. ತಂದೆಯ ಹೆಸರಿನಲ್ಲಿರುವ ಜಮೀನು ಮತ್ತು ಬೇರೆ ಜಮೀನುಗಳನ್ನು ಲಾವಣಿ ಪಡೆದು, ಅದರಲ್ಲಿ ಕಳೆದ ವರ್ಷ ಬೆಳೆ ಬೆಳೆಯಲು ಹಿರೇಕೆರೂರಿನ ಕೆವಿಜಿ ಬ್ಯಾಂಕ್​ನಲ್ಲಿ 40 ಸಾವಿರ ರೂ., ಸಂಘ-ಸಂಸ್ಥೆಗಳಲ್ಲಿ 8 ರಿಂದ 10 ಲಕ್ಷ ರೂ. ಸಾಲ ಪಡೆದಿದ್ದರು. ಮಳೆ ಸರಿಯಾಗಿ ಬಾರದೇ ಬರಗಾಲ ಬಂದಿದ್ದರಿಂದ, ಬೆಳೆ ಕೈಕೊಟ್ಟಿತು. ಆಗ ಮಾಡಿದ ಸಾಲ ಹೇಗೆ ತೀರಿಸಬೇಕು ಎಂದು ಮನನೊಂದು ತನ್ನ ವಾಸದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ರೈತರ ಆತ್ಮಹತ್ಯೆಗೆ ಪಿಣರಾಯಿ ವಿಜಯನ್ ಸರ್ಕಾರವೇ ಹೊಣೆ: ಕೇಂದ್ರ ಸಚಿವೆ ಶೋಭಾ
Share This Article