More

    ಮಿಲಿಟರಿ ಇಂಜಿನಿಯರಿಂಗ್​ ಸರ್ವೀಸ್​ನಲ್ಲಿ 502 ಡ್ರಾಫ್ಟ್‌ಮನ್‌, ಸೂಪರ್​ವೈಸರ್​ ಹುದ್ದೆಗಳಿಗೆ ಆಹ್ವಾನ

    ಪುಣೆಯ ಮಿಲಿಟರಿ ಇಂಜಿನಿಯರಿಂಗ್​ ಸರ್ವೀಸ್​ನಲ್ಲಿ ಡ್ರಾಫ್ಟ್‌​ಮನ್​ ಹಾಗೂ ಸೂಪರ್​ವೈಸರ್​ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.12 ಕೊನೇ ದಿನ ಎಂದು ಈ ಮೊದಲು ತಿಳಿಸಲಾಗಿತ್ತು. ಈಗ ಅರ್ಜಿ ಸಲ್ಲಿಕೆ ಅವಧಿ ವಿಸ್ತಿರಿಸಿದ್ದು, ಮೇ 17ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿ ನೇಮಕ ಆಗುವ ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಾದರೂ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು.

    ಒಟ್ಟು ಹುದ್ದೆ: 502

    ಆಕಿರ್ಟೆಕ್ಚರಲ್​ ಅಸಿಸ್ಟ್ಟೆಂಟ್​ಷಿಪ್​ನಲ್ಲಿ 3 ವರ್ಷದ ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಅಥವಾ ಆಟೋಕ್ಯಾಡ್​, ಜೆರಾಕ್ಸ್​ ಯಂತ್ರ, ಪ್ರಿಂಟಿಂಗ್​ ಹಾಗೂ ಲ್ಯಾಮಿನೇಷನ್​ ಯಂತ್ರಗಳ ನಿರ್ವಹಣೆ ಮಾಡಿರುವ ಅನುಭವ ಇರುವವರು ಅರ್ಜಿ ಸಲ್ಲಿಸಬಹುದು.

    * ಸೂಪರ್​ವೈಸರ್​ – 450
    ಎಕನಾಮಿಕ್ಸ್​/ ಕಾಮರ್ಸ್​/ ಸ್ಟ್ಯಾಟಿಸ್ಟಿಕ್ಸ್​/ ಬಿಜಿನೆಸ್​ ಸ್ಟಡಿಸ್​/ ಪಬ್ಲಿಕ್​ ಅಡ್ಮಿನಿಸ್ಟ್ರೆಷನ್​ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸ್ಟೋರ್​ ಕೀಪಿಂಗ್​ ಅಕೌಂಟ್ಸ್​ ಅನ್ನು ನಿರ್ವಹಿಸಿರುವ ಅನುಭವ ಇರುವವರಿಗೆ ಆದ್ಯತೆ. ಮೆಟಿರಿಯಲ್ಸ್​ ಮ್ಯಾನೇಜ್​ಮೆಂಟ್​/ ವಾಟರ್​ಹೌಸಿಂಗ್​ ಮ್ಯಾನೇಜ್​ಮೆಂಟ್​ನಲ್ಲಿ ಡಿಪ್ಲೊಮಾ ಮಾಡಿದವರೂ ಅರ್ಜಿ ಸಲ್ಲಿಸಬಹುದು.

    ವಯೋಮಿತಿ: ಎರಡೂ ಹುದ್ದೆಗೆ ಕನಿಷ್ಠ ವಯೋಮಿತಿ 18 ವರ್ಷ, ಗರಿಷ್ಠ ವಯೋಮಿತಿ 30 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

    ವೇತನ: ಪೇ ಲೆವೆಲ್​ 6 ಅನ್ವಯ ಮಾಸಿಕ 35,400 ರೂ. ನಿಂದ 1,12,400 ರೂ. ವೇತನ ನಿಗದಿಪಡಿಸಲಾಗಿದೆ.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 204, ಎಸ್ಸಿಗೆ 77, ಎಸ್ಟಿಗೆ 37, ಇತರ ಹಿಂದುಳಿದ ವರ್ಗಕ್ಕೆ 134, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 50 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 20 ಸ್ಥಾನವನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀೆಗೆ ಆಹ್ವಾನಿಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇದಿನ: 17.5.2021
    ಅಧಿಸೂಚನೆಗೆ: https://bit.ly/3eSHPZy
    ಅವಧಿ ವಿಸ್ತರಿಸಿರುವ ಅಧಿಸೂಚನೆ: https://bit.ly/3eXWeUa
    ಮಾಹಿತಿಗೆ: http://www.mesgovonline.com

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:
    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಕರೊನಾ ವಾರಿಯರ್​ ಆಗಲು ರೆಡಿನಾ? 1061 ಹುದ್ದೆಗಳ ನೇರ ಸಂದರ್ಶನ: 2.50 ಲಕ್ಷ ರೂ ವರೆಗೆ ಸಂಬಳ

    ಪದವೀಧರರಿಗೆ ಭರ್ಜರಿ ಗುಡ್‌ನ್ಯೂಸ್‌: ಎಸ್‌ಬಿಐನಲ್ಲಿ 5121 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts