ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಅರ್ಚಕರ ಕೊಲೆ ಆರೋಪಿಗಳಿಗೆ ಗುಂಡೇಟು

mandya murder
Published on

ಮಂಡ್ಯ: ಮಂಡ್ಯದ ಹೊರವಲಯದ ಶ್ರೀ ಅರ್ಕೇಶ್ವರ ದೇವಾಲಯದ ಆವರಣದಲ್ಲಿ ಇದೇ 11ರಂದು ನಡೆದಿದ್ದ ತ್ರಿಬ್ಬಲ್​ ಮರ್ಡರ್​ ಕೇಸ್​ನ ಕೊಲೆ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಆಂಧ್ರ ಪ್ರದೇಶ ಮೂಲದ ವಿಜಿ (25), ಮದ್ದೂರಿ ಅರೆಕಲ್ ದೊಡ್ಡಿಯ ಗಾಂಧಿ (28) ಹಾಗೂ ತೊಪ್ಪನಹಳ್ಳಿಯ ಮಂಜು (30) ಆರೋಪಿಗಳು.

ಗಣೇಶ, ಪ್ರಕಾಶ್​, ಆನಂದ್​ ಎಂಬ ಅರ್ಚಕರ ಕೊಲೆ ಪ್ರಕರಣ ಇದಾಗಿದೆ. ದೇಗುಲದ ಗೋಪುರ ಮುಖ್ಯದ್ವಾರದ ಸಮೀಪದಲ್ಲಿ ಪ್ರಾಂಗಣದಲ್ಲಿ ಮಲಗಿದ್ದವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.

ಮದ್ದೂರು ತಾಲೂಕಿನ ಸಾದೊಳಲು ಗೇಟ್ ಬಳಿ ಆರೋಪಿಗಳನ್ನು ಬಂಧಿಸಲು ಮುಂದಾಗಿದ್ದಾಗ ಆರೋಪಿಗಳು ಇರುವ ಖಚಿತ ಮಾಹಿತಿಯ ಮೇಲೆ ಪೊಲೀಸರು ಬಂಧಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಚಾಕು, ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಪಿಎಸ್ಐ ಶರತ್ ಕುಮಾರ್, ಕಾನ್​ಸ್ಟೆಬಲ್​ಗಳಾದ ಅನಿಲ್ ಕುಮಾರ್ ಹಾಗೂ ಕೃಷ್ಣಕುಮಾರ್ ಅವರಿಗೆ ಗಾಯಗಳಾಗಿವೆ. ಬಂಧಿತ ಆರೋಪಿಗಳಿಗೆ ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಶುಕ್ರವಾರ ದೇವಾಲಯದ ಕಾಂಪೌಂಡ್ ಪಕ್ಕದಲ್ಲಿರುವ ಮರವನ್ನೇರಿ ದೇವಾಲಯದ ಒಳಗೆ ಪ್ರವೇಶಿಸಿರುವ ದರೋಡೆಕೋರರು ಮೊದಲು ಮೂವರನ್ನು ಕೊಲೆ ಮಾಡಿದ್ದರು. ನಂತರ ದೇವಾಲಯದ ಹುಂಡಿಯನ್ನು ಎತ್ತಿಕೊಂಡು ಹೋಗಿದ್ದರು. ಹಣಕ್ಕಾಗಿ ಈ ಕೊಲೆ ನಡೆದಿತ್ತು. ಮಾರನೆಯ ದಿನವೇ ಸರ್ಕಾರದ ವತಿಯಿಂದ ಮೃತ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿತ್ತು.

ಸ್ಥಳಕ್ಕೆ ಮಂಡ್ಯ ಎಸ್ ಪಿ ಪರಶುರಾಮ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net