ಭಾರತಕ್ಕೂ ಕಾಲಿಟ್ಟೇಬಿಡ್ತು ಬ್ರಿಟನ್​ ಸೋಂಕು! ಪ್ರವಾಸ ಕೈಗೊಂಡಿದ್ದ ಚೆನ್ನೈ ವ್ಯಕ್ತಿಗೆ ಪಾಸಿಟಿವ್​

britain virus
Published on

ಚೆನ್ನೈ: ಚೀನಾದ ಕರೊನಾ ವೈರಸ್​ನಿಂದ ಕ್ಷಣ ಕ್ಷಣಕ್ಕೂ ಆತಂಕಪಡುತ್ತಿರುವ ಭಾರತೀಯರಿಗೆ ಇದೀಗ ಇನ್ನೊಂದು ದೊಡ್ಡ ಶಾಕ್​ ಎದುರಾಗಿದೆ. ಇದಾಗಲೇ ಬ್ರಿಟನ್ನಿಗರ ನಿದ್ದೆಗೆಡಿಸಿರುವ ಹೊಸ ಕರೊನಾ ವೈರಸ್​ ಭಾರತಕ್ಕೂ ಕಾಲಿಟ್ಟೇಬಿಟ್ಟಿದೆ!

ವಿದೇಶ ಪ್ರಯಾಣದಿಂದ ಮರಳಿದವರ ಪೈಕಿ ಬಹುತೇಕದಿಂದಲೇ ಕರೊನಾ ವೈರಸ್​ ದೇಶಾದ್ಯಂತ ಹರಡಿದ್ದು ಹೊಸ ವಿಷಯವೇನಲ್ಲ. ಆದರೆ ಈಗ ಬ್ರಿಟನ್​ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದಂಥ ವ್ಯಕ್ತಿಗೆ ಈ ಹೊಸ ಸೋಂಕು ತಗುಲಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.

ಬ್ರಿಟನ್​ನಲ್ಲಿ ಈ ಹೊಸ ಕೋವಿಡ್​ ಸೋಂಕು ಮಿತಿಮೀರಿದ್ದು ಅಲ್ಲಿಯ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಈ ಸೋಂಕು ಬೇರೆ ದೇಶಗಳಿಗೆ ಹರಡದಂತೆ ಭಾರತ, ಬ್ರಿಟನ್ ವಿಮಾನ ಹಾರಾಟ ರದ್ದು ಮಾಡಲಾಗಿದೆ. ಭಾರತದಿಂದ ಬ್ರಿಟನ್ ಗೆ ತೆರಳುವ ವಿಮಾನ ಸಂಚಾರವನ್ನೂ ಕೂಡಾ ಈ ಸಂದರ್ಭದಲ್ಲಿ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ.

ಆದರೆ ಈ ನಡುವೆಯೇ ಚೆನ್ನೈ ಮೂಲದ ವ್ಯಕ್ತಿ ಬ್ರಿಟನ್​ ಪ್ರವಾಸದಲ್ಲಿದ್ದರು. ಇದೇ ಸಂದರ್ಭದಲ್ಲಿ ಬ್ರಿಟನ್​ನಲ್ಲಿ ಈ ಹೊಸ ಕರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲಿಂದ ಪುನಃ ತಮ್ಮ ಊರಿಗೆ ಈ ವ್ಯಕ್ತಿ ಬಂದಿದ್ದಾರೆ. ಇದೀಗ ಹಳೆಯ ಕರೊನಾ ಸೋಂಕಿನೊಟ್ಟಿಗೆ ಹೊಸ ಸೋಂಕಿನ ಪತ್ತೆಯನ್ನೂ ವಿಮಾನ ನಿಲ್ದಾಣಗಳಲ್ಲಿ ಮಾಡಲಾಗುತ್ತಿದೆ.

ಬ್ರಿಟನ್​ನಿಂದ ಬರುವ ಪ್ರಯಾಣಿಕರಿಗೆ ಆರ್​ಟಿ ಪಿಸಿಆರ್ ಪರೀಕ್ಷೆಗೆ ಒಳಪಡಿಸಿ ಈ ಸೋಂಕು ತಗುಲಿದೆಯೇ ಎಂಬುದನ್ನು ಪತ್ತೆ ಹಚ್ಚುತ್ತಾರೆ. ಈ ಸಂದರ್ಭದಲ್ಲಿ ಚೆನ್ನೈ ವ್ಯಕ್ತಿಗೆ ಈ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಹೊಸ ಕರೊನಾ ಆತಂಕ ಸೃಷ್ಟಿಸಲು ಶುರು ಮಾಡಿದಂತಾಗಿದೆ.

ಈ ವ್ಯಕ್ತಿಯ ಮೇಲೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ. ಚಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net