

ನವದೆಹಲಿ: ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಕ್ಷರತಾ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ.
ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾಕ್ಷರತೆಯ ಪ್ರಮಾಣ ಕುರಿತು ರಾಜ್ಯವಾರು ಮಾಹಿತಿಯನ್ನು ಈ ಪಟ್ಟಿಯಲ್ಲಿ ನೀಡಲಾಗುತ್ತದೆ.
ಈ ಪಟ್ಟಿಯಲ್ಲಿ ಕೇರಳ ಪುನಃ ನಂ.1 ಸ್ಥಾನ ಪಡೆದುಕೊಂಡಿದೆ. ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇ.96.2ರಷ್ಟಿದ್ದು, ಶೇ.66.4ರಷ್ಟು ಸಾಕ್ಷರತೆ ಹೊಂದಿರುವ ಆಂಧ್ರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಈ ಸಮೀಕ್ಷೆಯ ಪ್ರಕಾರ ದೇಶದ ಸಾಕ್ಷರತಾ ಪ್ರಮಾಣ ಶೇಕಡಾ 77.7 ರಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 73.5 ಹಾಗೂ ನಗರ ಪ್ರದೇಶಗಳಲ್ಲಿ ಶೇ 87.7 ರಷ್ಟು ಸಾಕ್ಷತರಾ ಪ್ರಮಾಣವಿದೆ.
ಇದನ್ನೂ ಓದಿ: ಆನ್ಲೈನ್ ಅವಾಂತರ- ಪ್ಯಾಂಟ್ ಹಾಕದ ಅಪ್ಪ, ನಾನೂ ಹಾಕಿಲ್ಲ ಎಂದು ತೋರಿಸಿದ ಮತ್ತೊಬ್ಬ!
ರಾಷ್ಟ್ರಮಟ್ಟದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ 84.7 ರಷ್ಟಿದ್ದರೆ, ಮಹಿಳೆಯರ ಪ್ರಮಾಣ 70.3 ರಷ್ಟಿದೆ. ಎಲ್ಲಾ ರಾಜ್ಯಗಳಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಮಹಿಳೆಯರಿಗಿಂತ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
15ನೇ ಸ್ಥಾನದಲ್ಲಿರುವ ಕರ್ನಾಟಕದ ಸಾಕ್ಷರತಾ ಪ್ರಮಾಣ ಶೇಕಡಾ 77.2 ರಷ್ಟಿದೆ.
ವಿವಿಧ ರಾಜ್ಯಗಳ ಸಾಕ್ಷರತೆ ಪ್ರಮಾಣ ಹೀಗಿದೆ (ಶೇಕಡಾವಾರು)
ಕೇರಳ 96.2
ದೆಹಲಿ 88.7
ಉತ್ತರಾಖಂಡ 87.6
ಹಿಮಾಚಲ ಪ್ರದೇಶ 86.6
ಅಸ್ಸಾಂ 85.9
ಮಹಾರಾಷ್ಟ್ರ 84.8
ಪಂಜಾಬ್ 83.7
ಗುಜರಾತ್ 82.4
ತಮಿಳುನಾಡು 82.9
ಪಶ್ಚಿಮ ಬಂಗಾಳ 80.5
ಹರಿಯಾಣ 80.4
ಒಡಿಶಾ 77.3
ಜಮ್ಮು ಮತ್ತು ಕಾಶ್ಮೀರ 77.3
ಛತ್ತೀಸಗಢ 77.3
ಕರ್ನಾಟಕ 77.2
ಜಾರ್ಖಂಡ 74.7
ಮಧ್ಯಪ್ರದೇಶ 73.7
ಉತ್ತರ ಪ್ರದೇಶ 73
ತೆಲಂಗಾಣ 72.8,
ಬಿಹಾರ 70.9,
ರಾಜಸ್ಥಾನ 69.7
ಆಂಧ್ರಪ್ರದೇಶ 66.4