

ಇತ್ತ ಬಿಳಿ ಹುಲಿ, ಅತ್ತ ಸಾಮಾನ್ಯ ಬಣ್ಣದ ಹುಲಿ. ಇವೆರಡಕ್ಕೂ ಮಕ್ಕಳಿಗೆ ಬಾಟಲಿಯಲ್ಲಿ ಹಾಲುಣಿಸುವಂತೆ ಹಾಲು ನೀಡುತ್ತಿರುವ ಯುವಕ. ಇಂಥದ್ದೊಂದು ಮೈ ಝುಂ ಎನಿಸುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಕೆಲ ವರ್ಷಗಳ ಹಿಂದಿನ ವಿಡಿಯೋ ಇದಾಗಿದ್ದು, ಪುನಃ ಇದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 27 ಸೆಕೆಂಡ್‌ಗಳ ಈ ಕ್ಲಿಪ್ ಅನ್ನು ಆಬ್ಸೊಲ್ಯೂಟ್ ಯುನಿಟ್ಸ್ ಹೆಸರಿನ ಟ್ವಿಟರ್ ಖಾತೆಯೊಂದು ಶೇರ್ ಮಾಡಿದೆ.
ಜಾಲತಾಣದಲ್ಲಿ ಶೇರ್ ಮಾಡಿದ 20 ಗಂಟೆಗಳ ಒಳಗೆ ಈ ವಿಡಿಯೋಗೆ ಮೂರು ಲಕ್ಷ ವೀವ್ಸ್‌ಗಳನ್ನು ಈ ವಿಡಿಯೋ ಕಂಡಿದೆ. ಬಾಟಲಿಯಿಂದ ಅತ್ತ ಇತ್ತ ಹಾಲನ್ನು ಕುಡಿಯುತ್ತಾ ಯುವಕನ ಮೈಮೇಲೆ ಹುಲಿಗಳು ಎಗರುವುದನ್ನು ನೋಡಿದಾಗ ನೋಡುಗರಿಗೆ ಮೈ ಝುಂ ಎನಿಸಿದರೂ ಯುವಕ ಮಾತ್ರ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಇದು ಎಲ್ಲಿಯ ವಿಡಿಯೋ ಎಂದು ತಿಳಿಯದಿದ್ದರೂ ಸಕತ್ ವೈರಲ್ ಆಗುತ್ತಿದೆ.
ನೀವೂ ನೋಡಿ ವಿಡಿಯೋ: