More

    ಮದುವೆಯಾಗೋ ಭರವಸೆ ಕೊಟ್ಟರೆ ಮಾತ್ರ ಯುವತಿಯರು ದೈಹಿಕ ಸಂಪರ್ಕ ಬೆಳೆಸ್ತಾರೆ ಎಂದ ಹೈಕೋರ್ಟ್​

    ಭೋಪಾಲ್: ಭಾರತ ಸಂಪ್ರದಾಯವಾದಿ ಸಮಾಜ. ಆದ್ದರಿಂದ ಯುವಕನ ಜತೆ ದೈಹಿಕ ಸಂಪರ್ಕವನ್ನು ಆಕೆ ಬೆಳೆಸಿದ್ದಾಳೆ ಎಂದರೆ ಯುವಕ ಮದುವೆಯ ಭರವಸೆ ಕೊಟ್ಟೇ ಇರುತ್ತಾನೆ ಎಂಬುದು ಸ್ಪಷ್ಟ. ವಿವಾಹದ ಭರವಸೆ ಇಲ್ಲದೆಯೇ ಭಾರತದ ಯಾವ ಹೆಣ್ಣೂ ದೈಹಿಕ ಸಂಪರ್ಕ ಬೆಳೆಸುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್​ ಹೇಳಿದೆ.

    ಅತ್ಯಾಚಾರ ಆರೋಪಿಯ ಜಾಮೀನು ಅರ್ಜಿಯೊಂದನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ವಿದೇಶದಲ್ಲಿ ಅವಿವಾಹಿತ ಹೆಣ್ಣುಮಕ್ಕಳು, ಅವರ ಧರ್ಮವನ್ನು ಲೆಕ್ಕಿಸದೆ, ಕೇವಲ ಮೋಜಿಗಾಗಿ ಹುಡುಗರೊಂದಿಗೆ ಶಾರೀರಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇಲ್ಲಿಯ ಹೆಣ್ಣುಮಕ್ಕಳು ಮೋಜಿಗಾಗಿ ದೈಹಿಕ ಸಂಪರ್ಕ ಬೆಳೆಸುವುದಿಲ್ಲ ಎಂದಿದ್ದಾರೆ.

    ಈ ಪ್ರಕರಣದಲ್ಲಿ ಯುವತಿ ಯುವಕನೊಬ್ಬನ ವಿರುದ್ಧ ಕೇಸ್​ ದಾಖಲು ಮಾಡಿದ್ದಳು. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ, ನಂತರ ಮೋಸ ಮಾಡಿದ್ದಾನೆ ಎನ್ನುವುದು ಅವಳ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಅವನನ್ನು ಬಂಧಿಸಲಾಗಿತ್ತು. ಜಾಮೀನು ಕೋರಿ ಆತ ಅರ್ಜಿ ಸಲ್ಲಿಸಿದ್ದ. ಯುವಕನ ಪರವಾಗಿ ವಾದಿಸಿದ್ದ ವಕೀಲರು, ಯುವತಿ ಸ್ವಇಚ್ಛೆಯಿಂದ ದೈಹಿಕ ಸಂಪರ್ಕ ಬೆಳೆಸಿದ್ದಾಳೆ ಮತ್ತು ಇಬ್ಬರೂ ಅನ್ಯಧರ್ಮೀಯರಾಗಿರುವುದರಿಂದ ಆಕೆಯ ಪೋಷಕರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದರಲ್ಲಿ ಯುವಕನ ತಪ್ಪು ಇಲ್ಲ ಎಂದರು.

    ಇದನ್ನು ಮಾನ್ಯ ಮಾಡದ ಕೋರ್ಟ್​, ಭಾರತದ ಅವಿವಾಹಿತೆಯರು ಕೇವಲ ಮೋಜಿಗಾಗಿ ಹುಡುಗರೊಂದಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮಟ್ಟವನ್ನು ಭಾರತ ತಲುಪಿಲ್ಲ. ಈ ಪ್ರಕರಣದಲ್ಲಿ ಮದುವೆ ನಿರಾಕರಿಸಿದ್ದರಿಂದ ಯುವತಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದಾಳೆ ಎಂದ ಮೇಲೆ ಅದರಲ್ಲಿ ಯುವಕನದ್ದೇ ತಪ್ಪು. 2018ರಿಂದ ಆತ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಲೇ ಬಂದಿದ್ದಾನೆ. ಈ ಸಮಯದಲ್ಲಿ ಯುವತಿ ಅಪ್ರಾಪ್ತೆ ಕೂಡ ಆಗಿದ್ದಳು. ಆದ್ದರಿಂದ ಜಾಮೀನು ನೀಡಲಾಗದು ಎಂದು ಹೇಳಿದ ಕೋರ್ಟ್​ ಜಾಮೀನು ಕೋರಿದ್ದ ಅರ್ಜಿಯನ್ನು ವಜಾ ಮಾಡಿದೆ.

    ಅವಳು ಅಫ್ಘಾನಿಸ್ತಾನಿ, ಇವನು ಫ್ರಾನ್ಸ್​ ಕುವರ: ಭಾರತದಲ್ಲಿ ಪ್ರೀತಿ- ಅಪರೂಪದ ಲವ್​ ಸ್ಟೋರಿಗೆ ಕೋರ್ಟ್​ನಿಂದ ಅಂಕಿತ

    ಬಲವಂತದ ಸಂಭೋಗದಿಂದ ಪಾರ್ಶ್ವವಾಯುವಿಗೆ ತುತ್ತಾದ ಪತ್ನಿ: ಪತಿಗೆ ಹಕ್ಕಿದೆ ಎಂದ ಕೋರ್ಟ್​!

    s

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts