ಮಳೆ ಬಂತೆಂದು ಮರದ ಕೆಳಗೆ ನಿಂತವರ ಮೇಲೆ ಎರಗಿದ ಸಿಡಿಲು: ಭಯಾನಕ ವಿಡಿಯೋ ವೈರಲ್​

sidilu
Published on

ಗುರುಗ್ರಾಮ: ಮಳೆ ಬರುವ ಸಂದರ್ಭದಲ್ಲಿ ಅದರಲ್ಲಿಯೂ ಗುಡುಗು, ಸಿಡಿಲು ಆರ್ಭಟಿಸುತ್ತಿರುವ ವೇಳೆ ಮರದ ಕೆಳಗೆ ನಿಲ್ಲುವುದು ಬಹು ಅಪಾಯಕಾರಿ ಎಂದು ಹಲವಾರು ಬಾರಿ ಸಾಬೀತಾಗಿದೆ. ಅದರಲ್ಲಿಯೂ ಸುತ್ತಲೂ ಖಾಲಿ ಜಾಗವಿದ್ದು, ಒಂದೇ ಒಂದು ಮರವಿದ್ದರೆ, ಅಂಥ ಸಂದರ್ಭಗಳಲ್ಲಿ ಆ ಮರಕ್ಕೆ ಸಿಡಿಲು ಬಡಿಯುವುದು ಮಾಮೂಲು.

ಆದರೆ ಇದನ್ನು ಅರಿಯದೇ ಮಳೆಗಾಗಿ ಮರದ ಕೆಳಗೆ ಆಸರೆ ಪಡೆದ ನಾಲ್ವರು ವ್ಯಕ್ತಿಗಳ ಮೇಲೆ ಸಿಡಿಲು ಬಡಿದು, ಅದರ ವಿಡಿಯೋ ಇದೀಗ ವೈರಲ್​ ಆಗಿದೆ. ಇವರನ್ನು ಅಲಿಗಂಜ್ ನಿವಾಸಿ ಶಿವದತ್, ಲಾಲಿ, ರಾಮ್ ಪ್ರಸಾದ್ ಸುಂದರ್ ಮತ್ತು ಅವರ ಸೂಪರ್​ವೈಸರ್ ಅನಿಲ್ ಎಂದು ಗುರುತಿಸಲಾಗಿದೆ.

ಇಂಥದ್ದೊಂದು ದುರದೃಷ್ಟಕರ ಘಟನೆ ನಡೆದಿರುವುದು ಗುರುಗ್ರಾಮದಲ್ಲಿ ನಡೆದಿದೆ. ಮಳೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಾಟಿಕಾ ಸಿಗ್ನೇಚರ್ ವಿಲ್ಲಾಗಳಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ತೋಟಗಾರಿಕಾ ಸಿಬ್ಬಂದಿ ಒಂದು ಮರದ ಕೆಳಗೆ ಆಶ್ರಯಕ್ಕೆ ತೆರಳಿದ್ದಾರೆ. ಈ ವೇಳೆ ಸಿಡಿಲು ಬಡಿದಿದೆ.

ತಕ್ಷಣವೇ ಅವರೆಲ್ಲರೂ ಕೆಳಕ್ಕೆ ಬಿದ್ದಿದ್ದು, ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಇವರೆಲ್ಲವೂ ತೋಟಗಾರಿಕೆ ಸಿಬ್ಬಂದಿ ಎನ್ನಲಾಗಿದೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ಯಾರೂ ಬದುಕುಳಿದಂತೆ ಕಾಣಿಸುತ್ತಿಲ್ಲ. ಆದರೆ ಕೂಡಲೇ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇವರ ಪೈಕಿ ಮೂವರ ಸ್ಥಿತಿ ಸಾಮಾನ್ಯವಾಗಿದ್ದು, ಅಪಾಯದಿಂದ ಹೊರ ಬಂದಿದ್ದು, ಇನ್ನೊಬ್ಬರ ಸ್ಥಿತಿ ಚಿಂತಜನಕವಾಗಿರುವುದಾಗಿ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net