More

    ಆ ಹುಡುಗಿ ಬೇಡ ಕಣೋ ಎಂದ್ರೂ ಕೇಳ್ದೆ ಮದ್ವೆಯಾಗಿ ಪಡಬಾರದ ಕಷ್ಟ ಪಡ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    ಆ ಹುಡುಗಿ ಬೇಡ ಕಣೋ ಎಂದ್ರೂ ಕೇಳ್ದೆ ಮದ್ವೆಯಾಗಿ ಪಡಬಾರದ ಕಷ್ಟ ಪಡ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿನಾನು ವಿದ್ಯಾವಂತ ಹುಡುಗ. ನಮ್ಮ ಹಿರಿಯರೇ ನನಗೊಂದು ಬಡಹುಡುಗಿಯನ್ನು ನೋಡಿ, ಮದುವೆಯ ಸಮಸ್ತ ಖರ್ಚನ್ನೂ ನಾವೇ ಹಾಕಿಕೊಳ್ಳುವುದಾಗಿ ತಿಳಿಸಿ ಮದುವೆ ನಿಶ್ಚಯಿಸಿದರು. ನನಗೂ ಹುಡುಗಿ ಇಷ್ಟವಾಗಿದ್ದರಿಂದ ಒಪ್ಪಿಕೊಂಡೆ. ನಿಶ್ಚಿತಾರ್ಥವೂ ಆಯಿತು. ಮದುವೆಯ ದಿನ ನಿಶ್ಚಯ ಮಾಡುವುದರಲ್ಲಿ ಹುಡುಗಿಯ ಅಣ್ಣ ತನ್ನ ಹೆಂಡತಿಯನ್ನು ಕೊಂದು ಜೈಲಿಗೆ ಹೋದ.
    ನಮ್ಮ ಹಿರಿಯರು `ಅವರ ಕುಲ ಸರಿ ಇಲ್ಲ. ಈ ಹುಡುಗಿ ಬೇಡ’ ಎಂದರು. ವಿಷಯ ತಿಳಿದ ಹುಡುಗಿ ನನಗೆ ಫೋನ್​ ಮಾಡಿ ಬಹಳ ಅತ್ತು, ನನ್ನ ಅಣ್ಣ ಮಾಡಿದ ತಪ್ಪಿಗೆ ನನಗೇಕೆ ಶಿಕ್ಷೆ’ ಎಂದು ಕೇಳಿದಳು. ನನಗೂ ಅವಳ ಮಗ್ಗೆ ಮರುಕ ಹುಟ್ಟಿತು. ಅವಳ ಅಣ್ಣನಿಗೆ ಮೂರುವರ್ಷ ಕಾರಾಗೃಹ ಶಿಕ್ಷೆಯಾಯಿತು. ನನ್ನ ಹಿರಿಯರನ್ನು ನಾನೇ ಒಪ್ಪಿಸಿ, ಅವಳ ಅಪೇಕ್ಷೆಯಂತೆ ಮದುವೆಯನ್ನು ಮೂರುವರ್ಷ ಮುಂದೆ ಹಾಕಿದೆ.

    ಅವಳಿನ್ನೂ ದ್ವಿತೀಯ ಪದವಿಯಲ್ಲಿ ಓದುತ್ತಿದ್ದಳು. ಅಲ್ಲಿಂದ ಶುರುವಾಯಿತು ನನಗೆ ಕಷ್ಟಗಳ ಪರಂಪರೆ. ಅವಳು ತನ್ನ ಬಡತನದ ಕಾರಣವನ್ನು ಮುಂದಿಟ್ಟುಕೊಂಡು ತನ್ನವಿದ್ಯಾಭ್ಯಾಸದ ಖರ್ಚು, ಮಾಸ್ಟರ್ ಡಿಗ್ರಿ ಓದಲು ಹಣ , ಆಗಾಗ್ಗೆ ದುಬಾರಿ ಬಟ್ಟೆಬರೆಗಳು, ಸಣ್ಣಪುಟ್ಟ ಒಡವೆಗಳು, ಹೀಗೆ ಲಕ್ಷಾಂತರ ರೂಪಾಯಿಗಳನ್ನು ನನ್ನಿಂದ ಖರ್ಚು ಮಾಡಿಸಿದಳು. ಮದುವೆ ಇನ್ನೂ ಎರಡೂ ತಿಂಗಳಿದೆ ಎನ್ನುವಾಗ, ಕಲ್ಯಾಣಮಂಟಪವನ್ನೂ ನಾವೇ ಬುಕ್ ಮಾಡಿಸಿದ್ದಾಗ, `ನನ್ನ ಖರ್ಚಿಗಾಗಿ ಐವತ್ತುಸಾವಿರ ರೂ. ಕೊಡು’ ಎಂದಳು.

    ನನಗೆ ಕಾರಣಾಂತರಗಳಿಂದ ತಕ್ಷಣ ಹಣ ಕೊಡಲಾಗಲಿಲ್ಲ. ಸ್ವಲ್ಪ ವಿಳಂಬವಾಯಿತು. ಅಷ್ಟಕ್ಕೇ ಕೋಪಗೊಂಡು `ನನಗೆ ನೀನು ಬೇಡ, ನನ್ನ ಬದುಕಿನಲ್ಲಿ ಈಗಾಗಲೇ ಐದುಜನ ಬಂದುಹೋಗಿದ್ದಾರೆ, ನೀನು ಆರನೆಯವನು. ನನಗೆ ನಿನ್ನ ಕಂಡರೆ ಇಷ್ಟವಿಲ್ಲ’ ಎಂದು ಹೇಳಿ ಹೊರೆಟೇ ಹೋದಳು.

    ಈಗ ಹೇಳಿ ಮೇಡಂ, ವರದಕ್ಷಿಣೆಗಾಗಿ ಹಲವು ಮದುವೆ ಮಾಡಿಕೊಳ್ಳುವ ಗಂಡಸರನ್ನು ಕಾನೂನಿನಡಿಯಲ್ಲಿ ಶಿಕ್ಷಿಸಲಾಗುತ್ತದೆ. ಇಂಥ ಹೆಣ್ಣುಮಕ್ಕಳಿಗೆ ಶಿಕ್ಷೆಯಿಲ್ಲವೇ? ನನ್ನ ಅಮೂಲ್ಯವಾದ ಮೂರುವರ್ಷ ಇವಳಿಗಾಗಿ ಕಾದು ಹಾಳಾಯಿತಲ್ಲ? ಅದನ್ನು ಯಾರು ವಾಪಾಸ್ ಕೊಡುತ್ತಾರೆ? ಕಲ್ಯಾಣಮಂಟಪ, ಅಡುಗೆಯವರಿಗೆ ಅಡ್ವಾನ್ಸ್, ಒಡವೆ, ಸೀರೆ ಇತ್ಯಾದಿಗಳಿಗೆ ಲಕ್ಷಾಂತರ ಹಣ ಖರ್ಚಾಗಿದೆಯಲ್ಲ? ಇದನ್ನು ಯಾರು ಕೊಡುತ್ತಾರೆ?

    ಉತ್ತರ: ನಿಮ್ಮ ಮಾತು ನಿಜ. ಹೆಣ್ಣುಮಕ್ಕಳ ಹಿತಕ್ಕಾಗಿ ಕಾನೂನಿನಲ್ಲಿ ಅವರ ಪರವಾಗಿ ಅನೇಕ ಅನುಕೂಲಗಳನ್ನು ಮಾಡಲಾಗಿದೆ. ಅಂದಮಾತ್ರಕ್ಕೆ ಅವರು ಮಾಡಿದ ದ್ರೋಹಕ್ಕೆ ಶಿಕ್ಷೆಯಿಲ್ಲವೆಂದಿಲ್ಲ. ನಿಮ್ಮ ಲಗ್ನಪತ್ರಿಕೆಯಾದ ದಿನದ ಕಾಗದ ಪತ್ರಗಳು, ಆ ದಿನ ಬಂದಿದ್ದ ನಿಮ್ಮ ನೆಂಟರ ಸಾಕ್ಷಿಗಳು, ಅವಳು ನಿಮಗೆ ಕಳಿಸಿದ ಮೆಸೇಜ್‍ಗಳು, ನಿಮ್ಮ ಮನೆಯವರು ಮದುವೆಗಾಗಿ ಮಾಡಿದ ಖರ್ಚುಗಳ ಬಗ್ಗೆ ಇರುವ ರಸೀದಿಗಳು ಇವುಗಳನ್ನೆಲ್ಲ ಸೇರಿಸಿ ಒಳ್ಳೆಯ ಲಾಯರ್ ನೋಡಿ ಹುಡುಗಿಯ ತಂದೆತಾಯಿಗಳ ಮೇಲೆ ಮತ್ತು ಹುಡುಗಿಯ ಮೇಲೂ ನೀವು ಕೇಸ್ ಹಾಕಬಹುದು. ಇವೆಲ್ಲ ದಾಖಲೆಗಳನ್ನು ನೀವು ಜೋಪಾನವಾಗಿ ಇಟ್ಟಿರಬೇಕು ಅಷ್ಟೆ.

    ಇಲ್ಲಿ ತಪ್ಪುಗಳು ಎರಡೂ ಕಡೆಯಿಂದ ಆಗಿವೆ ಎನ್ನುವುದನ್ನು ಗಮನಿಸಿ. ಹುಡುಗಿಯ ಅಣ್ಣ ಕೊಲೆಯಂಥ ಸಮಾಜಬಾಹಿರ ಕೆಲಸವನ್ನು ಮಾಡಿದ್ದಾಗ, ನಿಮ್ಮ ಹಿರಿಯರು ಹೇಳಿದಂತೆ ನೀವು ಆ ಹುಡುಗಿಯನ್ನು, ಅವಳ ಸ್ವಭಾವಗಳನ್ನು ಕೂಲಂಕಷವಾಗಿ ವಿಚಾರಿಸಬೇಕಿತ್ತು ಮತ್ತು ಗಮನಿಸಬೇಕಿತ್ತು. ಅವಳು ಮದುವೆಯನ್ನು ಮೂರುವರ್ಷ ಮುಂದೆ ಹಾಕಲು ಕೇಳಿದಾಗ ಒಪ್ಪಬಾರದಿತ್ತು.

    `ಶುಭಸ್ಯ ಶೀಘ್ರಂ’ ಎಂದು ಹಿರಿಯರು ಯಾಕೆ ಹೇಳಿದ್ದಾರೆಂದುಕೊಂಡಿರಿ? ಲಗ್ನ ಪತ್ರಿಕೆಯಾಗಿ ಮದುವೆಯಾಗದಿದ್ದರೆ ಹೀಗೆ ಮನಸ್ಸುಗಳು
    ಮದುವೆಗೆ ಬದಟಛಿವಾಗಿರುವುದನ್ನು ತಪ್ಪಿಸಲೂಬಹುದು. ಇನ್ನು ಅವಳು ಕೇಳಿದಳೆಂದು ಅಷ್ಟೊಂದು ಹಣ ಅವಳಿಗಾಗಿ ವ್ಯಯಮಾಡಿದ್ದೂ ತಪ್ಪಲ್ಲವೇ? ನಿಮ್ಮ ಈ ದುರ್ಬಲ ಮನಸ್ಸನ್ನು ಅವಳು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾಳೆ.

    ಈಗ ಒಂದಿಷ್ಟು ಸಕಾರಾತ್ಮಕವಾಗಿ ಯೋಚಿಸಿ. ಇದುವರೆಗೆ ಒಂದಿಷ್ಟು ಹಣ ಹಾಳಾಗಿದೆ. ಆದರೆ ಮದುವೆಯಾದ ಮೇಲೆ ಅವಳು ಇಂಥ ಉಪದ್ವಾಪವನ್ನು ಮಾಡಿದ್ದಿದ್ದರೆ ಇಡೀ ಬದುಕು ನರಕವಾಗುತ್ತಿತ್ತಲ್ಲ? ಅದು ತಪ್ಪಿದ್ದಕ್ಕೆ ನೀವು ಅವಳಿಗೂ ಮತ್ತು ದೇವರಿಗೂ ವಂದನೆ ತಿಳಿಸಿ . ಹಣ ಮತ್ತೆ ಗಳಿಸಬಹುದು.ಕೆಟ್ಟುಹೋದ ಬಾಳನ್ನು ಮತ್ತೆ ಗಳಿಸಲಾದೀತೆ? ನಿಜ ನಿಮ್ಮ ಮೂರುವರ್ಷಗಳು ಬರಡಾಗಿ ಹೋಗಿವೆ. ಆದರೆ ನಿಮ್ಮ ಮುಂದೆ ಇಡೀ ಬದುಕು ಹಾಸಿಕೊಂಡಿದೆಯಲ್ಲ? ನೀವಿನ್ನೂ ಮುದುಕರಾಗಿಲ್ಲವಲ್ಲ? ಸಭ್ಯಮನೆತನದ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿ ಬದುಕು ಮುಂದುವರಿಸಿ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಮಗನಿಗೆ ಯಾವುದಕ್ಕೂ ಕಮ್ಮಿ ಮಾಡಿರಲಿಲ್ಲ… ಆತ್ಮಹತ್ಯೆ ಮಾಡಿಕೊಂಡುಬಿಟ್ಟಾ… ಹುಚ್ಚಿಯಾಗ್ತಿದ್ದೀನಿ, ಏನು ಮಾಡಲಿ ಮೇಡಂ?

    ಅವಳೇ ನನ್‌ ಹೆಂಡ್ತಿ ಎಂದು ಹೈಸ್ಕೂಲ್‌ನಿಂದ್ಲೂ ಓದಿಸಿದ್ರೆ ಮೊದಲ ರಾತ್ರಿಯೇ ಹೀಗೆ… ಏನ್‌ ಮಾಡ್ಲಿ ಮೇಡಂ?

    ಅವಳೇ ನನ್‌ ಹೆಂಡ್ತಿ ಎಂದು ಹೈಸ್ಕೂಲ್‌ನಿಂದ್ಲೂ ಓದಿಸಿದ್ರೆ ಮೊದಲ ರಾತ್ರಿಯೇ ಹೀಗೆ… ಏನ್‌ ಮಾಡ್ಲಿ ಮೇಡಂ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts