More

    ನಾನು ತುಂಬಾ ಸುಳ್ಳು ಹೇಳ್ತೇನೆ, ಅದು ತುಂಬಾ ಖುಷಿ ಕೊಡುತ್ತೆ- ಅದರಿಂದ ಹೇಗೆ ಹೊರ ಬರಲಿ?

    ನಾನು ತುಂಬಾ ಸುಳ್ಳು ಹೇಳ್ತೇನೆ, ಅದು ತುಂಬಾ ಖುಷಿ ಕೊಡುತ್ತೆ- ಅದರಿಂದ ಹೇಗೆ ಹೊರ ಬರಲಿ?ನಾನು 10ನೇ ತರಗತಿಯಲ್ಲಿ ಶೇ. 85 ಅಂಕ ತೆಗೆದುಕೊಂಡು ಉತ್ತೀರ್ಣನಾಗಿ ಪಿ.ಯು.ಸಿ ಓದಲು ಸಿಟಿಗೆ ಬಂದೆ. ಮೊದಲ ವರ್ಷವೇ ಅನುತ್ತೀರ್ಣನಾದೆ. ಮತ್ತೆ ಪರೀಕ್ಷೆ ಕಟ್ಟುತ್ತೇನೆಂದು ನನ್ನ ತಾಯಿ-ತಂದೆಯ ಹತ್ತಿರ ದುಡ್ಡು ತೆಗೆದುಕೊಂಡು ಕಾಲೇಜಿಗೆ ಹೋಗದೆ, ಸ್ನೇಹಿತರ ಜತೆ ತಿರುಗಾಡುತ್ತ ಸಮಯ ಮತ್ತು ಹಣ ಎರಡನ್ನೂ ಹಾಳು ಮಾಡಿದೆ. ನನ್ನ ತಂದೆ ನೀನು ಸಿಟಿಯಲ್ಲಿದ್ದದ್ದು ಸಾಕು ಊರಿಗೆ ಬಾ ಎನ್ನುತ್ತಿದ್ದಾರೆ. ನನಗೆ ಅಲ್ಲಿಗೆ ಹೋಗಲು ಇಷ್ಟವಿಲ್ಲ. ಅದಕ್ಕೇ ಅವರ ಹತ್ತಿರ ಜಗಳವಾಡಿ ಮತ್ತೆ ಸಿಟಿಗೆ ಬಂದಿದ್ದೇನೆ. ನಾನು ತುಂಬ ಸುಳ್ಳು ಹೇಳುತ್ತೇನೆ. ಅದು ನನಗೆ ಖುಷಿ ಕೊಡುತ್ತದೆ..

    ಏನಾದರೂ ಕೆಲಸ ಮಾಡಿಕೊಂಡು ನನ್ನ ಬದುಕನ್ನು ಚೆನ್ನಾಗಿ ನಾನೇ ಕಟ್ಟಿಕೊಳ್ಳಬೇಕೆಂಬ ಆಸೆ. ಆದರೆ ನಾನೇ ನನ್ನ ಕಾಲಮೇಲೆ ಕಲ್ಲು ಹಾಕಿಕೊಂಡು ವಿದ್ಯೆಯನ್ನು ಹಾಳುಮಾಡಿಕೊಂಡೆ. ಹೆತ್ತವರಿಗೆ ಒಳ್ಳೆ ಮಗನಾಗಲಿಲ್ಲವಲ್ಲ ಎಂದು ಈಗ ಕೊರಗುತ್ತಿದ್ದೇನೆ. ನನ್ನ ವಯಸ್ಸು ಹತ್ತೊಂಬತ್ತು ವರ್ಷ. ಈಗ ನಾನೇನು ಮಾಡಲಿ?

    ಉತ್ತರ: ಬದುಕಿನ ಒಂದು ಹಂತವನ್ನಷ್ಟೇ ಹತ್ತಿದ್ದೀರಿ ನೀವು. ಇನ್ನೂ ನಿಮ್ಮ ಮುಂದೆ ಜೀವನ ವಿಶಾಲವಾಗಿ ಹರಡಿದೆ. ಜಾಣರಾಗಿ ನಿಮ್ಮ ತಪ್ಪುಗಳನ್ನು ಗುರುತಿಸಿಕೊಂಡಿದ್ದೀರಿ. ಅದೂ ಸಹ ಮನುಷ್ಯನಿಗೆ ಒಳ್ಳೆಯ ದಾರಿಗೆ ಹೋಗಲು ದಾರಿ ದೀಪವಾಗುತ್ತದೆ. ಕೆಲವರಿರುತ್ತಾರೆ, ನಮ್ಮ ಕಣ್ಣಮುಂದೆ ತಪ್ಪುಗಳನ್ನು ಮಾಡುತ್ತಿರುತ್ತಾರೆ. `ನೀನು ಹೀಗೆ ಮಾಡಿದ್ದು ತಪ್ಪಲ್ಲವೇ’? ಎಂದು ಯಾರಾದರೂ ಹಿರಿಯರು ಕೇಳಿದರೆ `ಏನಿಲ್ಲ ನಾನು ಮಾಡಿದ್ದೇ ಸರಿ’ ಎಂದೇ ವಾದಿಸುತ್ತಾರೆ. ನಿಮ್ಮ ಮನಸ್ಸು ನಿಜವಾಗಲೂ ಸಕಾರಾತ್ಮಕವಾಗಿದೆ. ಬಹುಶಃ ನಿಮ್ಮ ಗೆಳೆಯರ ಗುಂಪು ಸರಿಯಾಗಿರಲಿಲ್ಲವೆಂದು ಭಾವಿಸುತ್ತೇನೆ. ಅವರಲ್ಲಿ ಯಾರಾದರೂ ಒಬ್ಬರು ವಿವೇಕವಂತರಾಗಿದ್ದರೆ, ನಿಜವಾಗಿ ನಿಮ್ಮನ್ನು ಇಷ್ಟ ಪಡುವವರಾಗಿದ್ದಿದ್ದರೆ,’ ಹೀಗೆಲ್ಲ ಸಮಯ ಮತ್ತು ಹಣವನ್ನು ವ್ಯರ್ಥವಾಗಿ ಖರ್ಚು ಮಾಡಬೇಡ , ಓದಿಕೊಂಡು ಜಾಣನಾಗು’ ಎಂದೇ ಹೇಳುತ್ತಿದ್ದರು. ಇನ್ನಾದರೂ ಇಂಥವರ ಸಹವಾಸವನ್ನು ಬಿಟ್ಟುಬಿಡಿ. ನಿಮಗಿನ್ನೂ 19 ವರ್ಷ. ಇಷ್ಟು ಚಿಕ್ಕವಯಸ್ಸಿಗೇ ಯಾವುದೋ ಸಣ್ಣ ಚಾಕರಿ ಹಿಡಿದು ದೇಹ ಮತ್ತು ಕಾಲವನ್ನು ವ್ಯರ್ಥ ಮಾಡುವುದಕ್ಕಿಂತ ನಿಮ್ಮ ತಂದೆ-ತಾಯಿಯರ ಹತ್ತಿರವೇ ಇದ್ದು, ದೂರ ಶಿಕ್ಷಣದ ಮುಖಾಂತರ ಪದವಿಯನ್ನು ಪಡೆದು ಒಳ್ಳೆಯ ಉದ್ಯೋಗಕ್ಕೆ ಪ್ರಯತ್ನಿಸಬಹುದು.

    ಅನಗತ್ಯ ಸುಳ್ಳು ಮಾತಾಡುವುದನ್ನು ನಿಯಂತ್ರಿಸಲು ಒಂದು ಸಣ್ಣ ಚಟುವಟಿಕೆಯನ್ನು ಹೇಳುತ್ತೇನೆ. ಅದನ್ನು ತಪ್ಪದೇ ಮಾಡಿದರೆ ನಿಮ್ಮ ಸುಳ್ಳಿನ ಚಟ ತಾನಾಗಿಯೇ ಬಿಟ್ಟುಹೋಗುತ್ತದೆ. 1. ಸುಳ್ಳು ಹೇಳಿದಾಗ ನನಗೆಷ್ಟು ಖುಷಿ ಸಿಗುತ್ತದೆ? ಎನ್ನುವ ಪ್ರಶ್ನೆಯನ್ನು ಬರೆದು ಅದಕ್ಕೆ ನಿಮಗೆ ತೋಚುವ ಉತ್ತರಗಳನ್ನು ಬರೆಯಿರಿ. 2. ಪ್ರತಿದಿನ ರಾತ್ರಿ ಮಲಗುವಾಗ `ಇವತ್ತೆಷ್ಟು ಸುಳ್ಳು ಹೇಳಿದೆ? ಅದಕ್ಕೆ ನನಗೆ ಸಿಕ್ಕ ಖುಷಿ ಎಷ್ಟು?’ ಪ್ರಶ್ನೆಯನ್ನು ಹಾಕಿಕೊಂಡು ಉತ್ತರ ಬರೆಯಿರಿ. ಇಂಥ ಪ್ರಶ್ನೆ ಮತ್ತು ಉತ್ತರಗಳನ್ನು ಒಂದು ವಾರ ಬರೆಯಿರಿ. ಈಗ ವಾರದ ಕೊನೆಗೆ ಸುಳ್ಳಿನಿಂದ ನಿಮಗೆ ಸಿಗುವ ಖುಷಿಯ ಪ್ರಮಾಣ ಕಡಿಮೆಯಾಗಿದೆಯೇ ಪರೀಕ್ಷಿಸಿ.

    ಅದೇನಾದರೂ ಕಮ್ಮಿಯಾಗಿದ್ದರೆ, ನಿಮ್ಮ ಮನಸ್ಸು ಸುಳ್ಳಿನಿಂದ ವಿಮುಖವಾಗುತ್ತಿದೆ ಎಂದು ಅರ್ಥ. ಈಗ ಮತ್ತೊಂದು ಹಾಳೆಯಲ್ಲಿ `ಸುಳ್ಳಿನ ಬದಲು ಮತ್ತೆ ಯಾವ ಒಳ್ಳೆ ನಡವಳಿಕೆಗಳಿಂದ ನನಗೆ ಖುಷಿ ಸಿಗುತ್ತದೆ?’ ಎನ್ನುವ ಪ್ರಶ್ನೆ ಹಾಕಿಕೊಂಡು ಅದಕ್ಕೆ ಉತ್ತರವನ್ನು ಒಂದು ವಾರ ಬೇರೆ ಬೇರೆ ರೀತಿಯಲ್ಲಿ ಬರೆಯಿರಿ. ಆ ನಂತರ ನಿಮಗೆ ಸುಳ್ಳು ಹೇಳುವ ಚಟ ತಾನಾಗಿಯೇ ಬಿಟ್ಟು ಹೋಗುತ್ತದೆ.

    ಒಂದು ವೇಳೆ ಸಂಖ್ಯೆ 1 ಮತ್ತು 2ಕ್ಕೆ ನೀವು ಒಂದು ವಾರ ಉತ್ತರ ಬರೆದಮೇಲೂ ನಿಮಗೆ ಸುಳ್ಳಿನಿಂದ ಸಿಗುವ ಖುಷಿಯ ಪ್ರಮಾಣ ಕಡಮೆಯಾಗಿಲ್ಲ ಅಥವಾ ಜಾಸ್ತಿಯೇ ಆಗಿದೆ ಎಂದು ಅನಿಸಿದರೆ, ನಿಮಗೆ ಮನೋವೈದ್ಯರ ಅಗತ್ಯವಿದೆ ಎಂದರ್ಥ. ಅವರು ಹಲವಾರು ಥೆರಪಿಗಳಿಂದ ನಿಮಗೆ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವ ಸಕಾರಾತ್ಮಕ ಚಿಂತನೆ ಬೆಳೆಯುವುದಕ್ಕೆ ಅನುವು ಮಾಡಿಕೊಡುತ್ತಾರೆ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಅವಳು ಇವ್ರ ಮೊದಲ ಲವ್‌ ಅಂತೆ: ಎರಡು ಮಕ್ಕಳಾದ್ರೂ ಅವಳನ್ನು ನೋಡಿದ್ರೆ ಏನೇನೋ ಆಗತ್ತಂತೆ- ನಾನೇನು ಮಾಡ್ಲಿ?

    ಒಂದೆಡೆ ನನ್ನ ಹುಡುಗ… ಇನ್ನೊಂದೆಡೆ ಪ್ರೀತಿಯ ಬಲೆಗೆ ಬಿದ್ದ ಅಮ್ಮ… ಡೋಲಾಯಮಾನವಾದ ಬದುಕಿಗೆ ದಾರಿ ತೋರಿ…

    ರೂಮಿನಲ್ಲಿ ಒಬ್ಬಳೇ ಚಿಲಕ ಹಾಕಿಕೊಂಡು ಮಲಗುವವಳ ಜತೆ ಹೇಗೆ ಸಂಸಾರ ಮಾಡ್ಲಿ? ಪ್ಲೀಸ್‌ ದಾರಿ ತೋರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts