More

    ಕಾಲು ಶತಮಾನದ ನಂತರ ಇತಿಹಾಸ ಬರೆದ ಕೇರಳದ ಮುಸ್ಲೀಂ ಲೀಗ್​- ಮಹಿಳೆಗೆ ಸಿಕ್ಕಿತು ಸ್ಥಾನ

    ಮಲಪ್ಪುರಂ: ದೇಶದ ಕೆಲವು ರಾಜ್ಯಗಳಲ್ಲೀಗ ಚುನಾವಣಾ ಭರಾಟೆ. ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಲು ಬಿರುಸಿನಿಂದ ಸಾಗಿದೆ.

    ಅದೇ ರೀತಿ ಕೇರಳದಲ್ಲಿರುವ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ಇಲ್ಲಿಯ ಚುನಾವಣೆ ಇದೀಗ ಗಮನ ಸೆಳೆದಿದೆ. ಅದಕ್ಕೆ ಕಾರಣ, ಅಪರೂಪ ಎಂಬಂತೆ ಮಹಿಳೆಯೊಬ್ಬರಿಗೆ ಇಲ್ಲಿ ಟಿಕೆಟ್​ ದೊರೆತಿದೆ. ಮಹಿಳೆಗೆ ಚುನಾವಣೆಯಲ್ಲಿ ಟಿಕೆಟ್​ ನೀಡುವುದು ಹೊಸವಿಷಯವೇನಲ್ಲ. ಆದರೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಮಹಿಳೆಗೆ ಟಿಕೆಟ್​ ನೀಡಿರುವುದು ಇಷ್ಟೆಲ್ಲಾ ಸುದ್ದಿಗೆ ಕಾರಣವಾಗಿದೆ.

    ಏಕೆಂದರೆ 25 ವರ್ಷಗಳ ನಂತರ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆ ಸ್ಥಾನಗಿಟ್ಟಿಸಿಕೊಂಡಿದ್ದಾರೆ! ಹಾಲಿ ಶಾಸಕ ಕೆ.ಎಂ. ಮುನೀರ್ ಅವರ ಕ್ಷೇತ್ರವಾಗಿರುವ ಕೋಯಿಕ್ಕೋಡ್ ದಕ್ಷಿಣ ಚುನಾವಣಾ ಕ್ಷೇತ್ರದಲ್ಲಿ ನೂರ್​ಬಿನಾ ರಷೀದ್​ ಅವರಿಗೆ ಟಿಕೆಟ್​ ನೀಡಲಾಗಿದ್ದು, ಕಾಲು ಶತಮಾನದ ನಂತರ ಮಹಿಳೆಗೆ ಸ್ಥಾನ ಸಿಕ್ಕಿದೆ.

    ಅಂದಹಾಗೆ ಈ ಹಿಂದೆ ಮುಸ್ಲಿಂ ಲೀಗ್ ಮಹಿಳಾ ಅಭ್ಯರ್ಥಿಗೆ ಟಿಕೆಟ್​ ನೀಡಿದ್ದು 1996ರಲ್ಲಿ . ಅದು ಕೇರಳದಲ್ಲಿ ಈ ಪಕ್ಷದಿಂದ ಮಹಿಳೆಗೆ ಸಿಕ್ಕ ಮೊದಲ ಟಿಕೆಟ್​ ಆಗಿತ್ತು. ಕೋಯಿಕ್ಕೋಡ್ ದಕ್ಷಿಣ ಕ್ಷೇತ್ರದಲ್ಲಿ ರಾಜ್ಯ ಸಾಮಾಜಿಕ ಕ್ಷೇಮ ಮಂಡಳಿ ಅಧ್ಯಕ್ಷೆಯಾಗಿದ್ದ ಖಮರುನ್ನಿಸಾ ಅನ್ವರ್ ಎಂಬುವವರು ಆಗ ಸ್ಪರ್ಧಿಸಿದ್ದರು.

    ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಅವರು ಪರಾಭವಗೊಂಡದ್ದರು. ನಂತರ ಮುಂದಿನ 25 ವರ್ಷ ಮಹಿಳೆಗೆ ಈ ಪಕ್ಷದಿಂದ ಸ್ಥಾನವೇ ಸಿಕ್ಕಿರಲಿಲ್ಲ. ಇದಕ್ಕೆ ಕಾರಣ, ಮಹಿಳೆಯೊಬ್ಬರಿಗೆ ಟಿಕೆಟ್​ ನೀಡಿದ್ದಕ್ಕೆ ಪಕ್ಷದಲ್ಲಿನ ಭಿನ್ನಮತ ಸ್ಫೋಟವಾಗಿತ್ತು. ಇದರಿಂದಲೇ ಖಮರುನ್ನಿಸಾ ಪರಾಭವಗೊಂಡಿದ್ದರು ಎನ್ನಲಾಗಿದೆ.

    ಒಟ್ಟಿನಲ್ಲಿ ಈಗ ಮಹಿಳಾ ಪ್ರಾತಿನಿಧ್ಯದ ಕೂಗು ಹೆಚ್ಚಾಗುತ್ತಿದ್ದಂತೆಯೇ ಸ್ಥಾನ ನೀಡಲಾಗಿದೆ. ಒಟ್ಟೂ 25 ಅಭ್ಯರ್ಥಿಗಳ ಪಟ್ಟಿಯನ್ನು ಮುಸ್ಲಿಂ ಲೀಗ್ ಬಿಡುಗಡೆ ಮಾಡಿದೆ.

    ಆ ಹುಡುಗಿ ಬೇಡ ಕಣೋ ಎಂದ್ರೂ ಕೇಳ್ದೆ ಮದ್ವೆಯಾಗಿ ಪಡಬಾರದ ಕಷ್ಟ ಪಡ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ- ಪೊಲೀಸರನ್ನೇ ಯಾಮಾರಿಸಿದ್ದ ಟಿಕ್​ಟಾಕ್​ ಸುಂದರಿ- ಇಲ್ಲಿವೆ ಈಕೆಯ ಕಲರ್​ಫುಲ್​ ವಿಡಿಯೋ…

    ನಿರೂಪಕನ ಮೇಲೆ ಕಳಚಿ ಬಿದ್ದ ಸ್ಟುಡಿಯೊ ಗೋಡೆ! ನೇರ ಪ್ರಸಾರದಲ್ಲಿ ಅವಘಡ- ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts