ಕಂಗನಾಗೆ ವಿಷ್​ ಮಾಡಿ ತಕ್ಷಣ ಪೋಸ್ಟ್​ ಡಿಲೀಟ್​ ಮಾಡಿದ ಅಮಿತಾಭ್! ಎಲ್ಲರಿಗೂ ಶಾಕ್​... ಅಷ್ಟಕ್ಕೂ ಆಗಿದ್ದೇನು?

kangana
Published on

ಮುಂಬೈ: ಬಾಲಿವುಡ್​ ನಟಿ ಕಂಗನಾ ಒಂದಲ್ಲೊಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಈಗ ಮತ್ತೊಮ್ಮೆ ಇವರು ಸುದ್ದಿಯಲ್ಲಿದ್ದಾರೆ. ಅದ್ಯಾಕೆ ಅಂದರೆ ಅಮಿತಾಭ್​ ಬಚ್ಚನ್​ ಕಾರಣಕ್ಕಾಗಿ!

ಅಷ್ಟಕ್ಕೂ ಆಗಿದ್ದೇನೆಂದರೆ, ಕಂಗನಾ ಅವರು ನಟಿಸಿರುವ ‘ಧಾಕಡ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ‘ಧಾಕಡ್’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಇದು ಭಾರಿ ಜನಪ್ರಿಯತೆ ಪಡೆಯುತ್ತಿದೆ. ಚಿತ್ರ ರಸಿಕರಷ್ಟೇ ಅಲ್ಲದೇ ಸಿನಿ ತಾರೆಯರು ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಟ್ರೈಲರ್​ಗೆ ಬಾಲಿವುಡ್​ ಬಿಗ್​-ಬಿ ಅಮಿತಾಭ್​ ಬಚ್ಚನ್​ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಕಂಗನಾಗೆ ಶುಭ ಹಾರೈಸಿದ್ದರು.

ಇಷ್ಟೇ ಆಗಿದ್ದರೆ ಇದು ಸುದ್ದಿಯಾಗುತ್ತಿರಲಿಲ್ಲ. ಹೀಗೆ ಶುಭ ಹಾರೈಸಿ ಅವರು ಪೋಸ್ಟ್​ ಮಾಡಿದ ಕೆಲವೇ ನಿಮಿಷಗಳಲ್ಲಿ ಅದನ್ನು ಡಿಲೀಟ್​ ಮಾಡಿಬಿಟ್ಟಿದ್ದೇ ಈಗ ಭಾರಿ ಸುದ್ದಿಯಾಗಿದೆ.

ಇದರಿಂದ ಭಾರಿ ಅಸಮಾಧಾನ ವ್ಯಕ್ತಪಡಿಸಿರುವ ಕಂಗನಾ, ’ಎಲ್ಲರಿಗೂ ವೈಯಕ್ತಿಕ ಅಭದ್ರತೆಗಳಿವೆ. ತಾವು ಉದ್ಯಮದಿಂದ ಬಹಿಷ್ಕಾರಕ್ಕೆ ಒಳಗಾಗುತ್ತೇವೆ ಎಂದು ಕೆಲವರು ಹಿಂದೆ ಸರಿಯಬಹುದು ಎಂದು ನಾನು ಭಾವಿಸುವುದಿಲ್ಲ. ಆದರೆ, ಅಮಿತಾಭ್ ಬಚ್ಚನ್ ಅವರು ಪೋಸ್ಟ್ ಹಾಕಿ 5-10 ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ. ಅವರಂತಹ ದೊಡ್ಡ ನಟರಿಗೆ ಯಾವ ಪ್ರೆಷರ್ ಇರುತ್ತದೆ? ನನಗಂತೂ ಗೊತ್ತಿಲ್ಲ. ಇದು ಕೊಂಚ ವಿಚಿತ್ರವಾಗಿದೆ ಎಂದಿದ್ದಾರೆ. ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ಧಾಕಡ್’ ಚಿತ್ರದ ಕುರಿತು ನಡೆದ ಸಂದರ್ಶನವೊಂದರಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಈ ನಡುವೆ ನಟ ಸಲ್ಮಾನ್ ಖಾನ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ಚಿತ್ರತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ಸಲ್ಮಾನ್​ ಖಾನ್​ ಅವರ ಪೋಸ್ಟ್‌ಅನ್ನು ರೀ-ಶೇರ್ ಮಾಡಿಕೊಂಡು, ‘’ನನ್ನ ದಬಂಗ್ ಹೀರೋಗೆ ಧನ್ಯವಾದ. ಚಿತ್ರರಂಗದಲ್ಲಿ ನಾನು ಒಂಟಿ ಎಂದು ಇನ್ಯಾವತ್ತೂ ಹೇಳುವುದಿಲ್ಲ. ಇಡೀ ‘ಧಾಕಡ್’ ಚಿತ್ರತಂಡದಿಂದ ನಿಮಗೆ ಥ್ಯಾಂಕ್ಸ್’’ ಎಂದಿದ್ದಾರೆ. ಇನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಕಂಗನಾಗೆ ಶುಭ ಹಾರೈಸಿದ್ದು, ‘’ಟೈಗರ್ ಶ್ರಾಫ್ ಮತ್ತು ಹೃತಿಕ್ ರೋಷನ್ ಅವರುಗಳನ್ನು 10 ಬಾರಿ ಗುಣಿಸಿದಂತೆ ಕಂಗನಾ ರನೌತ್ ಕಾಣುತ್ತಿದ್ದಾರೆ’’ ಎಂದು ಟ್ವೀಟ್​ನಲ್ಲಿ ಹಾಡಿ ಹೊಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net