ಧಾರವಾಡ ಜೈಲಲ್ಲಿ ಪಾಕ್​ ಉಗ್ರನ ಹುಚ್ಚಾಟ: ಬೇಡಿಕೆ ಇಟ್ಟು ಒಂದ್ವಾರ ಉಪವಾಸ: ಬಿರಿಯಾನಿ ಕೊಟ್ಟಾಗ ಹೀಗ್​ ಮಾಡ್ದ...

jail
Published on

ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏಳು ದಿನದಿಂದ ಪಾಕಿಸ್ತಾನದ ಉಗ್ರನೊಬ್ಬ ಧಾರವಾಡದ ಜೈಲಿನಲ್ಲಿ ಉಪವಾಸವಿದ್ದು ಹುಚ್ಚಾಟ ಮೆರೆದಿರುವ ಘಟನೆ ನಡೆದಿದೆ.

ಮೊಹಮ್ಮದ್ ಫಹಾದ್ ಎಂಬ ಉಗ್ರ ಈತನಾಗಿದ್ದು, ಕೆಆರ್ ಎಸ್ ಜಲಾಶಯ ಸೇರಿದಂತೆ ದೇಶ ವಿವಿಧ ಕಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದಾನೆ. ಇವನನ್ನು 2006ರ ಅಕ್ಟೋಬರ್​ನಲ್ಲಿ ಮೈಸೂರಿನ ಪೊಲೀಸರು ಬಂಧಿಸಿದ್ದರು. ಮೈಸೂರು ಜೈಲಿನಲ್ಲಿದ್ದ ಆತನನ್ನು 2021ರಲ್ಲಿ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಈತನಿಗೆ 14 ವರ್ಷ ಶಿಕ್ಷೆ ವಿಧಿಸಲಾಗಿದೆ. ಇನ್ನೂ ಕೆಲವು ಕೇಸ್​ಗಳ ವಿಚಾರಣೆ ನಡೆಯುತ್ತಿದೆ.

ಜೈಲಿನಲ್ಲಿ ಹುಚ್ಚಾಟ ಮೆರೆದಿದ್ದ ಮೊಹಮ್ಮದ್ ಫಹಾದ್, ತನ್ನ ವಿರುದ್ಧದ ಪ್ರಕರಣಗಳ ತನಿಖೆಯನ್ನು ಶೀಘ್ರ ಮುಗಿಸಬೇಕು. ತನ್ನ ಸಹಚರರು ಇರುವ ಬೆಂಗಳೂರು ಅಥವಾ ಕಾಶ್ಮೀರದ ಜೈಲಿಗೆ ತನ್ನನ್ನೂ ಸ್ಥಳಾಂತರಿಸಬೇಕು. ಸಹ ಕೈದಿಗಳ ಜೊತೆ ಬೆರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದ. ಇಷ್ಟೆಲ್ಲಾ ಆಗಿದ್ದರೆ ನಾನು ಉಪವಾಸ ಇರುತ್ತೇನೆ ಎಂದು ಉಪವಾಸವನ್ನೂ ಕೈಗೊಂಡಿದ್ದ.

ಇದರಿಂದ ಏಳು ದಿನಗಳ ನಂತರ ಆತ ನಿತ್ರಾಣನಾಗಿದ್ದ. ಊಟ ಸೇವಿಸುವಂತೆ ಹೇಳಿದರೂ ಆತ ಕೇಳಲಿಲ್ಲ ಎನ್ನಲಾಗಿದೆ. ಇದೀಗ ಉಪವಾಸದಿಂದ ನಿತ್ರಾಣಗೊಂಡಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ಉಪವಾಸ ಮಾಡದಂತೆ ವೈದ್ಯರು ಮನವೊಲಿಸಲಾಗಿದ್ದರು. ಬೆಳಗ್ಗೆ ಉಪಹಾರಕ್ಕೆಂದು ಇಡ್ಲಿ - ಸಾಂಬಾರ ತಿಂದ. ಮಧ್ಯಾಹ್ನ ಬಿರಿಯಾನಿ ತಂದ ಮೇಲೆ ತೃಪ್ತನಾದ ಈ ಉಗ್ರ ಅದನ್ನು ತಿಂದು ಉಪವಾಸ ಕೈಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net