ಮತ್ತೊಮ್ಮೆ ಮದುಮಗನಾದ ಸುಪ್ರೀಂಕೋರ್ಟ್​ ಜಡ್ಜ್​: ಪತ್ನಿಯ ಜತೆ ಪುನಃ ನೆರವೇರಿತು ಮದುವೆ

UUlalith
Published on

ವಿಶಾಖಪಟ್ಟಣ (ಆಂಧ್ರಪ್ರದೇಶ): ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ಯು.ಯು ಲಲಿತ್​​ ಅವರು ಮತ್ತೊಮ್ಮೆ ಮದುಮಗ ಆಗಿದ್ದಾರೆ. ತಮ್ಮ ಪತ್ನಿಯ ಜತೆ ಮತ್ತೊಮ್ಮೆ ವಿವಾಹವಾಗಿದ್ದಾರೆ. ಆಂಧ್ರಪ್ರದೇಶದ ಅರಕು ಕಣಿವೆ ಸೌಂದರ್ಯ ವೀಕ್ಷಣೆ ಮಾಡಲು ಬಂದಿದ್ದ ನ್ಯಾಯಮೂರ್ತಿಗಳು ಇಲ್ಲಿಯ ಸಂಪ್ರದಾಯಕ್ಕೆ ಮನಸೋತು ಪತ್ನಿ ಅಮಿತಾ ಅವರ ಜತೆ ಇನ್ನೊಮ್ಮೆ ಬುಡಕಟ್ಟು ಸಮುದಾಯದ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ಈ ದಂಪತಿ ಅರಕು ಕಣಿವೆಯ ಸೌಂದರ್ಯ ವೀಕ್ಷಣೆಗೆ ವಿಶಾಖಪಟ್ಟಣಕ್ಕೆ ಬಂದಿದ್ದರು. ಇವರ ಜತೆ ಆಂಧ್ರಪ್ರದೇಶ ಹೈಕೋರ್ಟ್​​​ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಅಮಾನುಲ್ಲಾ ಖಾನ್​ ಸಹ ಸಾಥ್​ ನೀಡಿದ್ದರು.

ಈ ಸಂದರ್ಭದಲ್ಲಿ ಬುಡಕಟ್ಟು ಸಂಪ್ರದಾಯಕ್ಕೆ ಅವರು ಮನಸೋತು ಮತ್ತೆ ಮದುವೆಯಾಗಿದ್ದಾರೆ. ಪೆಡಲಬೂಡು ಸರಪಂಚ್ ಪೆಟ್ಟೇಲಿ ದಾಸುಬಾಬು ನೇತೃತ್ವದಲ್ಲಿ ವಿವಾಹ ನೆರವೇರಿತು. ಬುಡಕಟ್ಟು ಸಮುದಾಯದ ಆತಿಥ್ಯ ಉತ್ತಮವಾಗಿದ್ದು, ವಿವಾಹ ಸಂಭ್ರಮ ಸಂತಸ ತಂದಿದೆ ಎಂದು ನ್ಯಾಯಮೂರ್ತಿ ಲಲಿತ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net