

ಸರ್ಕಾರಿ ಸ್ವಾಮ್ಯದಲ್ಲಿರುವ ಭಾರತದ ಬಹುರಾಷ್ಟ್ರೀಯ ಬ್ಯಾಂಕ್ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ವಲಯಗಳಲ್ಲಿ ನೇರ ನೇಮಕಾತಿ ಮೂಲಕ ರಿಸ್ಕ್ ಸ್ಪೆಷಲಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮುಂಬೈ ಕಚೇರಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ.
ಹುದ್ದೆಗಳ ವಿವರ
ರಿಸ್ಕ್ ಸ್ಪೆಷಲಿಸ್ಟ್ 14 ಹುದ್ದೆಗಳಿದ್ದು, ಸೆಕ್ಟರ್-7, ಕ್ರೆಡಿಟ್-1, ಕ್ಲೆಮೇಟ್ ರಿಸ್ಕ್-1, ಐಎನ್ಡಿ ಎಎಸ್-3 ಮತ್ತು ಮಾರ್ಕೆಟ್ ರಿಸ್ಕ್-2 ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ
ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಫೈನಾನ್ಸ್ /ಡೇಟಾ ಅನಲಿಸಿಸ್/ಬಿಸಿನೆಸ್ ಅನಲಿಸಿಸ್ ವಿಷಯಗಳಲ್ಲಿ ಎಂಬಿಎ, ಸ್ಟಾಟಿಸ್ಟಿಕ್ಸ್ನಲ್ಲಿ ಎಂಎಸ್ಸಿ ಪದವಿ, ಸಿಎ ಪದವಿ ಕೇಳಲಾಗಿದೆ. ಇದಲ್ಲದೆ ಎಂಎಸ್ ಆಫೀಸ್, ಎಕ್ಸೆಲ್ ಸೇರಿ ಇತರ ಕಂಪ್ಯೂಟರ್ ಜ್ಞಾನ ಅವಶ್ಯ. ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಕನಿಷ್ಠ 4 ವರ್ಷ ವೃತ್ತಿ ಅನುಭವ ಕೇಳಲಾಗಿದೆ. 31.3.2022ಕ್ಕೆ ಅನ್ವಯವಾಗುವಂತೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ
ಎಂಎಂಜಿಎಸ್-ಐಐ ಹುದ್ದೆಗೆ 48,170ದಿಂದ 69,810 ರೂ. ಎಂಎಂಜಿಎಸ್ -ಐಐಐ ಹುದ್ದೆಗೆ 63,840ರಿಂದ 78,230 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಇದಲ್ಲದೆ ಮೆಡಿಕಲ್, ಎಚ್ಆರ್ಎ, ಸಿಸಿಎ, ಡಿಎ ಸೇರಿ ಇತರ ಭತ್ಯೆ ಇರಲಿದೆ.
ಅರ್ಜಿ ಸಲ್ಲಿಕೆ ವಿಧಾನ
ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಅಪೂರ್ಣ ಮತ್ತು ದಾಖಲೆಗಳಿಲ್ಲದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಮೀಸಲಾತಿ ಕೋರುವವರು ಅಗತ್ಯ ದಾಖಲೆ ಸಲ್ಲಿಸತಕ್ಕದ್ದು. ಸಾಮಾನ್ಯ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳೊಂದಿಗೆ ಸಂವಹನ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 16.6.2022
ಅಧಿಸೂಚನೆಗೆ: https://bit.ly/3NHXATg
ಮಾಹಿತಿಗೆ: http://sbi.co.in
ಜಯಪುರ ಕಚೇರಿಯಲ್ಲೂ ನೇಮಕ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜಯಪುರ ವಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೇಸ್ ಮ್ಯಾನೇಜರ್ ಹುದ್ದೆಗಳನ್ನು (8) ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಎಎಂಎಲ್/ಸಿಎಫ್ಟಿ ಸೆಲ್ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಇದೇ ವೃತ್ತಿಯಲ್ಲಿ ಅನುಭವ ಪಡೆದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಯಾವುದೇ ಪದವಿ ಪಡೆದವರಿಬಹುದು. ವಯೋಮಿತಿ 60 ವರ್ಷ ಮೀರಿರಬಾರದು.
ಶಾರ್ಟ್ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. 37,000 ರೂ. ಮಾಸಿಕ ವೇತನ ಇರಲಿದೆ. ಆಸಕ್ತರು ಸಂಸ್ಥೆಯ ವೆಬ್ಸೈಟ್ನಲ್ಲಿ ನೀಡಲಾದ ವಿಳಾಸಕ್ಕೆ ಜೂನ್ 15ರೊಳಗೆ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಗೆ: https://bit.ly/3zrstHh ನೋಡಬಹುದು.