ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಪಂಜಾಬ್​ ಬ್ಯಾಂಕ್​ನಲ್ಲಿವೆ 20 ಜವಾನ ಹುದ್ದೆಗಳು: 30 ಸಾವಿರ ರೂ. ಜತೆಗೆ ವಿಶೇಷ ಭತ್ಯೆ

Punjab bank
Published on

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್​ಗಳಲ್ಲಿ ಒಂದಾಗಿರುವ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ ಬೆಂಗಳೂರು ವಿಭಾಗದ ಪಶ್ಚಿಮ ವೃತ್ತದ ಅಧೀನದಲ್ಲಿರುವ ಶಾಖೆಗಳಿಗೆ 20 ಕೆಳದರ್ಜೆ ಕೇಡರ್​ ಜವಾನ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯವರ್ಗದ ಅಭ್ಯರ್ಥಿಗೆ 8 ಸ್ಥಾನ, ಎಸ್ಸಿಗೆ 3, ಎಸ್ಟಿಗೆ 1, ಒಬಿಸಿಗೆ 6, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 2 ಸ್ಥಾನ ಮೀಸಲಿರಿಸಿದ್ದು, ಮಾಜಿ ಸೈನಿಕರಿಗೆ 4 ಹಾಗೂ ಶ್ರವಣದೋಷವುಳ್ಳವರಿಗೆ 1ಸ್ಥಾನ ಕಾಯ್ದಿರಿಸಲಾಗಿದೆ. ಅರ್ಜಿನಮೂನೆಯನ್ನು ಹತ್ತಿರದ ಶಾಖೆ/ ವೃತ್ತ ಕಚೇರಿಯಿಂದ ಪಡೆಯಬಹುದಾಗಿದೆ.

ಒಟ್ಟು: 20

ಎಲ್ಲೆಲ್ಲಿ ನೇಮಕಾತಿ?

ಕರ್ನಾಟಕದಲ್ಲಿ ಒಟ್ಟು 20 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಬೆಂಗಳೂರು ನಗರ-9, ಬೆಂಗಳೂರು ಗ್ರಾಮೀಣ-3, ಮಂಗಳೂರು-4, ಮೈಸೂರು-2, ತುಮಕೂರು- 1, ಉಡುಪಿ- 1 ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಆಯಾ ಜಿಲ್ಲೆಯ ನಿವಾಸಿಗಳಾಗಿರಬೇಕು ಎಂದು ಸೂಚಿಸಲಾಗಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ: ದ್ವೀತಿಯ ಪಿಯುಸಿ ಅಥವಾ ತತ್ಸಮಾನದಲ್ಲಿ ತೇರ್ಗಡೆ ಆಗಿರಬೇಕು. ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಓದುವ/ ಮಾತನಾಡುವ ಜ್ಞಾನ ಹೊಂದಿರಬೇಕು. ಅಭ್ಯರ್ಥಿಗಳು ಹೆಚ್ಚಿನ ವಿದ್ಯಾರ್ಹತೆ ಅಂದರೆ ಪದವಿ/ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಅರ್ಜಿಸಲ್ಲಿಸಲು ಅರ್ಹರಿರುವುದಿಲ್ಲ. ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಮಾಸಿಕ 14,500- 28,145 ರೂ. ವೇತನ ಜತೆ ಬ್ಯಾಂಕ್​ ನೀತಿಯ ಪ್ರಕಾರ ಭತ್ಯೆಗಳನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ 10ನೇ ತರಗತಿ (ಪರಿಗಣಿಸುವ ಅಂಕ ಪ್ರಮಾಣ ಶೇ.40) ಹಾಗೂ ದ್ವೀತಿಯ ಪಿಯುಸಿ (ಪರಿಗಣಿಸುವ ಅಂಕ ಪ್ರಮಾಣ- ಶೇ.60) ಅಂಕಗಳನ್ನು ಆಧರಿಸಿ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 3.3.2022

ಅರ್ಜಿ ಸಲ್ಲಿಕೆ ವಿಳಾಸ: ಮುಖ್ಯ ವ್ಯವಸ್ಥಾಪಕರು (ಎಚ್​ಆರ್​ಡಿ), ಪಂಜಾಬ್​ ನ್ಯಾಷನಲ್​ ಬ್ಯಾಂಕ್​, ವೃತ್ತ ಕಚೇರಿ, ಬೆಂಗಳೂರು ಪಶ್ಚಿಮ, ನಂ.100, ಮಸೀದಿ ರಸ್ತೆ, ಫ್ರೇಜರ್​ ಟೌನ್​, ಬೆಂಗಳೂರು- 560005.

ಮಾಹಿತಿಗೆ: 080-25808901/ cobangwesthrd@pnb.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net