More

    ಕಾರು ಚಲಾಯಿಸಲು ಬರುತ್ತಾ? ಅಂಚೆ ಇಲಾಖೆಯಲ್ಲಿದೆ 46 ಹುದ್ದೆಗಳು- 63 ಸಾವಿರ ರೂ.ವರೆಗೆ ಸಂಬಳ

    ಅಂಚೆ ಇಲಾಖೆಯ ತಮಿಳುನಾಡು ಹಾಗೂ ದೆಹಲಿ ಟಕದಲ್ಲಿ ಸಿಬ್ಬಂದಿ ಕಾರು ಚಾಲಕ (ಆಡಿರ್ನರಿ ಗ್ರೇಡ್​) ಹುದ್ದೆಗೆ ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅಜಿರ್ಆಹ್ವಾನಿಸಲಾಗಿದೆ. 2 ವರ್ಷ ಪ್ರೊಬೆಷನರಿ ಅವಧಿ ಇರುತ್ತದೆ.

    ಒಟ್ಟು ಹುದ್ದೆಗಳು: 46
    * ದೆಹಲಿಯಲ್ಲಿ 29 ಹುದ್ದೆ
    * ತಮಿಳುನಾಡಿನಲ್ಲಿ 17 ಹುದ್ದೆ

    ಅರ್ಹತಾ ಮಾನದಂಡಗಳೇನು?
    ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಲಘು ಹಾಗೂ ಭಾರಿ ಮೋಟಾರು ವಾಹನಗಳ ಚಾಲನಾ ಪರವಾನಗಿ ಹೊಂದಿರಬೇಕು. ಮೋಟಾರ್​ ಮೆಕಾನಿಸಂ ಕುರಿತ ಜ್ಞಾನ ಅವಶ್ಯ. ಕನಿಷ್ಠ 3 ವರ್ಷ ಲಘು ಮತ್ತು ಭಾರಿ ವಾಹನಗಳ ಚಾಲನೆಯಲ್ಲಿ ಅನುಭವ ಅವಶ್ಯ. ಹೋಮ್​ ಗಾರ್ಡ್​ ಅಥವಾ ಸಿವಿಲ್​ ವಾಲಂಟಿಯರ್​ ಆಗಿ ವೃತ್ತಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು.

    ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ 3-5 ವರ್ಷ ವಯೋಸಡಿಲಿಕೆ ಇದೆ. ಮಾಸಿಕ 19,900-63,200 ರೂ. ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯು ಇಲಾಖೆ ಸೂಚಿಸುವ ಪರೀಕ್ಷೆ ಆಧಾರದ ಮೇಲೆ ನಡೆಯಲಿದೆ. ಮೋಟಾರು ಯಂತ್ರಗಳ ಜ್ಞಾನ, ಮೋಟಾರ್​ ಮೆಕಾನಿಸಂ ಜ್ಞಾನ, ವಾಹನ ಚಾಲನಾ ಸಾಮರ್ಥ್ಯಗಳನ್ನು ಪರೀಸಲಾಗುವುದು. ಈ ಪರೀೆಗಳಿಗೆ ಸಂಬಂಧಿಸಿದಂತೆ ದಿನಾಂಕ, ಸ್ಥಳದ ಮಾಹಿತಿಯನ್ನು ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.

    ಸೂಚನೆ: ಅಭ್ಯರ್ಥಿಗಳು ತಮ್ಮ ಇತ್ತೀಚಿನ 2 ಭಾವಚಿತ್ರದ ಜತೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳ ಪ್ರತಿಯನ್ನು ಗೆಜೆಟೆಡ್​ ಸಹಿ ಇಲ್ಲದೇ ಕಳುಹಿಸುವಂತಿಲ್ಲ. ಸ್ಪೀಡ್​ ಪೋಸ್ಟ್​/ ರಿಜಿಸ್ಟ್ರರ್​ ಪೋಸ್ಟ್​ ಮೂಲಕ ದೆಹಲಿಯ ಹುದ್ದೆಗಳಿಗೆ “The Senior Manager , Mail Motor Service, C-121,Naraina Industrial Area phase-I, Naraina, New Delhi -110028 ವಿಳಾಸಕ್ಕೆ ಹಾಗೂ ತಮಿಳುನಾಡಿನ ಹುದ್ದೆಗಳಿಗೆ The Manager , Mail Motor Service, Goods shed Road, Coimbatore- 641001
    ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಕೊರಿಯರ್​ ಅಥವಾ ಇತರ ಯಾವುದೇ ಮೂಲದಿಂದ ಕಳುಹಿಸುವ ಅರ್ಜಿಗಳಿಗೆ ಮಾನ್ಯತೆ ಇಲ್ಲ ಎಂದು ತಿಳಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 15.3.2022 (ತಮಿಳುನಾಡು: 10.3.2022)

    ಅಧಿಸೂಚನೆಗೆ: https://bit.ly/3LvOQPH ÊÜáñÜᤠhttps://bit.ly/3HQLkgh

    ಮಾಹಿತಿಗೆ: http://www.indiapost.gov.in

    ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಇಷ್ಟಪಟ್ಟಿರುವಿರಾ? ವಿವಿಧ ಇಲಾಖೆಗಳಿಂದ 33 ಹುದ್ದೆಗಳಿಗೆ ಆಹ್ವಾನ

    ಪದವೀಧರರರಾ? ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇವೆ 48 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts