More

    ರಜನಿ ಪುತ್ರಿಯ ಮನೆಯಲ್ಲಿ ಕದ್ದ ಆಭರಣಗಳಿಂದ ದುಬಾರಿ ಮನೆ ಖರೀದಿಸಿದ್ದ ಸೇವಕಿ: ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಚೆನ್ನೈ: ಸೂಪರ್​​ ಸ್ಟಾರ್​​​ ರಜನಿಕಾಂತ್​ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯಾ ರಜಿನಿಕಾಂತ್​ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಕಾರು ಚಾಲಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕದ್ದ ಚಿನ್ನಾಭರಣದಲ್ಲಿ ಮನೆಗೆಲಸದಾಕೆ ಮನೆ ಖರೀದಿಸಿದ್ದು, ಅದರ ಮೊತ್ತ ಕೇಳಿದ್ರೆ ಒಮ್ಮೆ ಬೆರಗಾಗುವುದು ಗ್ಯಾರೆಂಟಿ.

    ಚೆನ್ನೈನ ಸೇಂಟ್ ಮೇರಿಸ್ ರಸ್ತೆಯಲ್ಲಿರುವ ಐಶ್ವರ್ಯಾ ರಜನಿಕಾಂತ್ ಅವರ ನಿವಾಸದಲ್ಲಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಈಶ್ವರಿ ಎಂಬಾಕೆ ಲಾಕರ್​ನಿಂದ ಬೆಲೆಬಾಳುವ ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ಕಳವು ಮಾಡಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಕಾರು ಚಾಲಕ ವೆಂಕಟೇಶ್​ನನ್ನು ಸಹ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ದೆಹಲಿಯಲ್ಲಿ ಭೂಕಂಪ!; ವರ್ಷಾರಂಭದಲ್ಲೇ ನಡುಗಿದ ಭೂಮಿ, ಆತಂಕದಲ್ಲಿ ರಾಜಧಾನಿಯ ಜನತೆ

    ಪ್ರಕರಣದ ತನಿಖೆಯ ವೇಳೆ ರೋಚಕ ಮಾಹಿತಿಗಳು ಬಯಲಾಗಿವೆ. ಕದ್ದ ಆಭರಣಗಳನ್ನು ಮಾರಾಟ ಮಾಡಿ ಶೋಲಿಂಗನಲ್ಲೂರು ಪ್ರದೇಶದಲ್ಲಿ ಆರೋಪಿ ಈಶ್ವರಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದ್ದಳು ಎಂದು ತಿಳಿದುಬಂದಿದೆ. ತನ್ನ ಮೇಲೆ ಅನುಮಾನ ಬಾರದಂತೆ ಬ್ಯಾಂಕ್​ನಲ್ಲಿ ಸಾಲ ಪಡೆದು ಎರಡು ವರ್ಷದೊಳಗೆ ಈಶ್ವರಿ ಪೂರ್ತಿಯಾಗಿ ಪಾವತಿಸಿದ್ದಳು.

    ಕಳೆದ 18 ವರ್ಷಗಳಿಂದ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಈಶ್ವರಿ, ಐಶ್ವರ್ಯಾ ರಜನಿಕಾಂತ್ ಅವರ ಮನೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದಳು ಮತ್ತು ಲಾಕರ್ ಅನ್ನು ಹಲವು ಬಾರಿ ತೆರೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೀ ಇರುವ ಸ್ಥಳವನ್ನು ಈಶ್ವರಿ ಚೆನ್ನಾಗಿ ತಿಳಿದಿದ್ದಳು. ಆಕೆ ಒಂದೇ ಬಾರಿ ಕಳ್ಳತನ ಮಾಡಿರಲಿಲ್ಲ. ಅನೇಕ ಬಾರಿ ಸ್ವಲ್ಪ ಸ್ವಲ್ಪವಾಗಿ ಆಭರಣಗಳನ್ನು ಕದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಚೆನ್ನೈನ ಮೈಲಾಪುರದಲ್ಲಿರುವ ಆಭರಣ ಮಳಿಗೆಯೊಂದರ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಈಶ್ವರಿ ಅಕ್ರಮವಾಗಿ ಮಾರಾಟ ಮಾಡಿದ್ದ ಐಶ್ವರ್ಯಾ ರಜನಿಕಾಂತ್ ಅವರ 100 ಚಿನ್ನಾಭರಣ ಮತ್ತು ವಜ್ರದ ಆಭರಣಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಪೊಲೀಸರಿಂದಲೇ ಅಪಹರಣ, ಹಣಕ್ಕೆ ಬೇಡಿಕೆ?; ತಲೆಮರೆಸಿಕೊಂಡಿರುವ ಸಬ್​ ಇನ್​ಸ್ಪೆಕ್ಟರ್!

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಐಶ್ವರ್ಯಾ ರಜನಿಕಾಂತ್ ಅವರು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಅಡಿಯಲ್ಲಿ ತಮ್ಮ ಹೊಸ ಚಿತ್ರ ‘ಲಾಲ್ ಸಲಾಮ್’ ಅನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ಮತ್ತು ವಿಷ್ಣು ವಿಶಾಲ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಜೀವಿತಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್​)

    ಕರೊನಾ ಪ್ರಕರಣಗಳ ಹೆಚ್ಚಳ!; ಸಭೆ ನಡೆಸಿದ ಮೋದಿ, ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚನೆ

    ಯುಗಾದಿ ದಿನವೇ ಮುಗಿದ ಬದುಕು!; ಪತಿಯ ಅನುಮಾನಕ್ಕೆ ಪತ್ನಿ ಬಲಿ

    ಪೊಲೀಸರಿಂದಲೇ ಅಪಹರಣ, ಹಣಕ್ಕೆ ಬೇಡಿಕೆ?; ತಲೆಮರೆಸಿಕೊಂಡಿರುವ ಸಬ್​ ಇನ್​ಸ್ಪೆಕ್ಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts