More

    ಕರೊನಾ ಪ್ರಕರಣಗಳ ಹೆಚ್ಚಳ!; ಸಭೆ ನಡೆಸಿದ ಮೋದಿ, ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚನೆ

    ನವದೆಹಲಿ: ದೇಶದಲ್ಲಿ ಕಳೆದೆರಡು ವಾರಗಳಿಂದ ಕೋವಿಡ್ ಮತ್ತು ಇನ್​ಫ್ಲೂಯೆಂಜಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉನ್ನತಮಟ್ಟದ ಸಭೆಯೊಂದನ್ನು ನಡೆಸಿದ್ದಾರೆ. ಮಾತ್ರವಲ್ಲ, ಸೂಕ್ತ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: ಹತ್ತು ವರ್ಷಗಳಿಗೂ ಅಧಿಕ ಕಾಲ ಒಂದಾದ ಮೇಲೊಂದು ಹೆರಿಗೆ; 28ನೇ ವಯಸ್ಸಿನಲ್ಲೇ 9 ಮಕ್ಕಳ ಮಹಾತಾಯಿ!

    ಸಭೆ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಹಾಗೂ ಇನ್​ಫ್ಲೂಯೆಂಜಾ ಸೋಂಕಿನ ಪ್ರಕರಣಗಳಲ್ಲೂ ಸ್ವಲ್ಪ ಏರಿಕೆ ಕಂಡುಬಂದಿದೆ. ಹೀಗಾಗಿ ನಾವು ಕೋವಿಡ್ ಸಂಬಂಧಿತ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಜತೆಗೆ ಶ್ವಾಸಕೋಶ ಸಂಬಂಧಿತ ಸ್ವಚ್ಛತೆಯನ್ನು ಕೂಡ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಲ್ಯಾಬ್​ಗಳ ಮೇಲೆ ಕಣ್ಗಾವಲು ಇಡುವ ಜತೆಗೆ ಜೀನೋಮ್ ಟೆಸ್ಟಿಂಗ್ ಮತ್ತು ಶ್ವಾಸಕೋಶ ಸಂಬಂಧಿತ ರೋಗಗಳ ಮೇಲೆ ತೀವ್ರ ನಿಗಾ ಇಡುವ ಅಗತ್ಯವಿದೆ ಎಂದೂ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಪೊಲೀಸರಿಂದಲೇ ಅಪಹರಣ, ಹಣಕ್ಕೆ ಬೇಡಿಕೆ?; ತಲೆಮರೆಸಿಕೊಂಡಿರುವ ಸಬ್​ ಇನ್​ಸ್ಪೆಕ್ಟರ್!

    ಹಿರಿಯ ನಾಗರಿಕರು ಹಾಗೂ ಕೋಮಾರ್ಬಿಡಿಟಿ ಇರುವಂಥವರು ಜನಸಂದಣಿ ಇರುವ ಸ್ಥಳಗಳಲ್ಲಿ ಹೋಗಬೇಕಾದಾಗ ಮಾಸ್ಕ್​ ಧರಿಸುವುದು ಉತ್ತಮ ಎಂದಿರುವ ಪ್ರಧಾನಿ ಮೋದಿ, ಕೋವಿಡ್ -19 ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ ಮತ್ತು ದೇಶಾದ್ಯಂತ ಕರೊನಾ ಪರಿಸ್ಥಿತಿಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವ ಅವಶ್ಯಕತೆ ಇದೆ ಎಂಬುದನ್ನೂ ಒತ್ತಿ ಹೇಳಿದ್ದಾರೆ.

    ಇದನ್ನೂ ಓದಿ: ದೆಹಲಿಯಲ್ಲಿ ಭೂಕಂಪ!; ವರ್ಷಾರಂಭದಲ್ಲೇ ನಡುಗಿದ ಭೂಮಿ, ಆತಂಕದಲ್ಲಿ ರಾಜಧಾನಿಯ ಜನತೆ

    ದೇಶದ ಆರು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಕೇಂದ್ರ ಆರೋಗ್ಯ ಸಚಿವಾಲಯವು ಸೂಕ್ತ ಕ್ರಮಕೈಗೊಳ್ಳುವಂತೆ ಆಯಾ ರಾಜ್ಯಗಳಿಗೆ ತಿಳಿಸಿತ್ತು.

    ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts