

ದೇಶದ ಅಭಿವೃದ್ಧಿಯ ದಿಶಾನಿದೇರ್ಶನಗಳನ್ನು ರೂಪಿಸುವ ಸಂವಿಧಾನಬದ್ಧ ಸಂಸ್ಥೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಆಯೋಗ್ (ನೀತಿ ಆಯೋಗ) ನಲ್ಲಿ ಯಂಗ್ ಪ್ರೊಫೆಷನಲ್ಸ್ ಹಾಗೂ ಕನ್ಸಲ್ಟೆಂಟ್ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಗರಿಷ್ಠ 5 ವರ್ಷ, ಕನಿಷ್ಠ 2 ವರ್ಷದ ಅವಧಿಗೆ ಈ ನೇಮಕಾತಿ ನಡೆಯುತ್ತಿದೆ.
ಹುದ್ದೆಗಳ ವಿವರ
* ಯಂಗ್ ಪ್ರೊಫೆಷನಲ್- 22
ವಿಜ್ಞಾನ/ ಅರ್ಥಶಾಸ್ತ್ರ/ ಸ್ಟ್ಯಾಟಿಸ್ಟಿಕ್ಸ್/ ಆಪರೇಷನ್ ರಿಸರ್ಚ್/ ಪಬ್ಲಿಕ್ ಪಾಲಿಸಿ/ ಡೆವಲಪ್ಮೆಂಟ್ ಸ್ಟಡಿಸ್/ ಬಿಜಿನೆಸ್ ಅಡ್ಮಿನಿಸ್ಟ್ರೆಷನ್/ ಮ್ಯಾನೇಜ್ಮೆಂಟ್ನಲ್ಲಿ ಪದವಿ ಅಥವಾ ಬಿಇ/ ಬಿಟೆಕ್/ ಎಂಬಿಬಿಎಸ್/ ಸಿಎ/ ಐಸಿಡಬ್ಲುಎ ಅಥವಾ ದ್ವಿತೀಯ ಪಿಯುಸಿ ನಂತರ ಅಧ್ಯಯನ ಮಾಡಿದ ಯಾವುದೇ ಪ್ರೊಫೆಷನ್ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಎಂಫಿಲ್/ ಎಂಟೆಕ್/ ಎಂಎಸ್/ ಎಲ್ಎಲ್ಎಂ/ ಪಿಎಚ್ಡಿ/ ಸಂಶೋಧನಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮಾಸಿಕ ಎಲ್ಲ ಭತ್ಯೆ ಸೇರಿ 70,000 ರೂ. ವೇತನ ನಿಗದಿಪಡಿಸಲಾಗಿದೆ.
ಒಂದು ವರ್ಷದ ವೃತ್ತಿ ಅನುಭವ ಇರುವವರಿಗೆ ಆದ್ಯತೆ ಎಂದು ತಿಳಿಸಲಾಗಿದೆ. ಡಿಎಂಇಒ ಕೈಗೊಂಡಿರುವ ಕೇಂದ್ರ ಸರ್ಕಾರದ ಸಚಿವಾಲಯ/ ಇಲಾಖೆಗಳ ವಿವಿಧ ವಲಯಗಳ ಯೋಜನೆಗಳ ಮಾನಿಟರಿಂಗ್, ಮೌಲ್ಯಮಾಪನಗಳನ್ನು ನೋಡಿಕೊಳ್ಳುವ ಜತೆ ಇತರ ಜವಾಬ್ದಾರಿ ನೀಡಲಾಗುವುದು.
* ಕನ್ಸ್ಲ್ಟೆಂಟ್ ಗ್ರೇಡ್ 1 - 6
ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ವಿಜ್ಞಾನ/ ಅರ್ಥಶಾಸ್ತ್ರ/ ಸ್ಟಾ$ಟಿಸ್ಟಿಕ್ಸ್/ ಆಪರೇಷನ್ ರಿಸರ್ಚ್/ ಪಬ್ಲಿಕ್ ಪಾಲಿಸಿ/ ಡೆವಲಪ್ಮೆಂಟ್ ಸ್ಟಡಿಸ್/ ಬಿಜಿನೆಸ್ ಅಡ್ಮಿನಿಸ್ಟ್ರೆಷನ್/ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಬಿಇ/ ಬಿಟೆಕ್/ ಎಂಬಿಬಿಎಸ್/ ಎಲ್ಎಲ್ಬಿ/ ಸಿಎ/ ಐಸಿಡಬ್ಲುಎ ಅಥವಾ ದ್ವೀತಿಯ ಪಿಯುಸಿ ನಂತರ ಅಧ್ಯಯನ ಮಾಡಿದ ಯಾವುದೇ ಪ್ರೊಫೆಷನ್ ಕೋರ್ಸ್ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಪಿಎಚ್ಡಿ ಮಾಡಿರುವ ಅಭ್ಯರ್ಥಿಗಳಿಗೆ ಆದ್ಯತೆ ಇರುತ್ತದೆ. 3-8 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಗರಿಷ್ಠ 45 ವರ್ಷ ವಯೋಮಿತಿ ಇದ್ದು, ಎಲ್ಲ ಭತ್ಯೆ ಸೇರಿ ಮಾಸಿ 80,000 - 1,45,000 ರೂ. ವೇತನ ಇರಲಿದೆ.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನೀತಿ ಆಯೋಗದ ವೆಬ್ಸೈಟ್ http://niti.gov.inವೆಬ್ಸೈಟ್ನಲ್ಲಿ ಕರಿಯರ್ ವಿಭಾಗವನ್ನು ಕ್ಲಿಕ್ ಮಾಡಿದಾಗ ನೇಮಕಾತಿ ಪುಟ ತೆರೆದುಕೊಳ್ಳುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಸೂಚನೆಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕಡೇ ದಿನ: 12.10.2022
ಅರ್ಜಿ ಸಲ್ಲಿಕೆ ಹಾಗೂ ಅಧಿಸೂಚನೆಗೆ: http://niti.gov.in/node/3430
ಮಾಹಿತಿಗೆ: http://www.niti.gov.in