

ಬೆಳಗಾವಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ (ಕೆವಿ) ಶೈಕ್ಷಣಿಕ ವರ್ಷ 2022-23ಕ್ಕೆ ಅರೆಕಾಲಿಕ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ನಮೂನೆಯನ್ನು ಅಧಿಸೂಚನೆಯಲ್ಲೇ ನೀಡಲಾಗಿದೆ.
ಒಟ್ಟು ಹುದ್ದೆಗಳು: 43
ಹುದ್ದೆ ವಿವರ
- ಬೋಧಕ ಹುದ್ದೆಗಳು
* ಪೋಸ್ಟ್ ಗ್ರಾಜುಯೇಷನ್ ಟೀಚರ್ (ಪಿಜಿಟಿ) - 7
(ವಾಣಿಜ್ಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಇಂಗ್ಲಿಷ್, ಜೀವಶಾಸ್ತ್ರ, ಅರ್ಥಶಾಸ್ತ್ರ, ಹಿಂದಿ)
ಬೋಧನಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬಿಇಡಿ ಮಾಡಿರಬೇಕು. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬೋಧನಾ ಸಾಮರ್ಥ್ಯ ಹೊಂದಿರಬೇಕು. ಮಾಸಿಕ 27,500 ರೂ. ವೇತನ ಇದೆ.
* ಟೆನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ) - 13
(ವಿಜ್ಞಾನ, ಗಣಿತ, ಸಮಾಜ-ವಿಜ್ಞಾನ, ಹಿಂದಿ, ಇಂಗ್ಲಿಷ್, ಸಂಸತ)
ಬೋಧನಾ ವಿಷಯಗಳನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿ ಪದವಿ ಪಡೆದಿದ್ದು, ಬಿಇಡಿ ಮಾಡಿರಬೇಕು. ಮಾಸಿಕ 26,250 ರೂ. ವೇತನ ನಿಗದಿಪಡಿಸಲಾಗಿದೆ. ಸಿಟಿಇಟಿ/ ಕೆಟಿಇಟಿ/ಎಸ್ಟಿಇಟಿ ಮಾಡಿದವರಿಗೆ ಆದ್ಯತೆ ಇದೆ.
* ಪೆಮರಿ ಟೀಚರ್ಸ್ - 12
ದ್ವಿತೀಯ ಪಿಯುಸಿ ಮಾಡಿರಬೇಕು. ಡಿ.ಇಡಿಯಲ್ಲಿ ಶೇ.50 ಅಂಕ ಪಡೆದಿರಬೇಕು. ಕೆಟಿಇಟಿ/ ಎಸ್ಟಿಇಟಿ/ ಸಿಟಿಇಟಿ ಮಾಡಿದವರಿಗೆ ಆದ್ಯತೆ ಇದೆ. ಮಾಸಿಕ 21. 250 ರೂ. ವೇತನ ಇದ್ದು, ಕಂಪ್ಯೂಟರ್ ಜ್ಞಾನ ಕೇಳಲಾಗಿದೆ.
* ಕಂಪ್ಯೂಟರ್ ಇನ್ಸ್ಟ್ರಕ್ಟರ್ (ಪ್ರಾಥಮಿಕ ಮತ್ತು ಸೆಕೆಂಡರಿ) - 3
ಕಂಪ್ಯೂಟರ್ ಸೈನ್ಸ್/ ಐಟಿಯಲ್ಲಿ ಬಿಇ/ ಬಿಟೆಕ್ ಮಾಡಿರಬೇಕು. ಅಥವಾ ಯಾವುದೇ ಬಿಇ/ ಬಿಟೆಕ್ ಮಾಡಿದ್ದು, ಕಂಪ್ಯೂಟರ್ ಡಿಪ್ಲೊಮಾ/ ಎಂಎಸ್ಸಿ ಮಾಡಿರಬಹುದು. ಮಾಸಿಕ 21,250-26,250 ರೂ. ವೇತನ ನೀಡಲಾಗುವುದು.
* ಕನ್ನಡ ಲಾಂಗ್ವೇಜ್ ಇನ್ಸ್ಟ್ರಕ್ಟರ್ - 1
ಸಿಟಿಇಟಿ/ ಟಿಇಟಿ ಅರ್ಹತೆ ಕೇಳಲಾಗಿದ್ದು, ಮಾಸಿಕ 18,750 ರೂ. ವೇತನ ನಿಗದಿಪಡಿಸಲಾಗಿದೆ.
- ನೇರ ಸಂದರ್ಶನ ನಡೆಯುವ ಹುದ್ದೆಗಳು
*ಕೌನ್ಸೆಲರ್ - 1
ಸೈಕಾಲಜಿಯಲ್ಲಿ ಬಿಎ/ ಬಿಎಸ್ಸಿ ಮಾಡಿದ್ದು, ಕೌನ್ಸಿಲಿಂಗ್ನಲ್ಲಿ ಡಿಪ್ಲೊಮಾ ಮಾಡಿರಬೇಕು. ಮಾಸಿಕ 26,250 ರೂ. ವೇತನ ಇರಲಿದೆ.
* ಸ್ಪೋಟ್ಸ್ ಕೋಚ್ (ಪುರುಷ ಮತ್ತು ಮಹಿಳೆ) - 2
ಬಿಪಿಇಡಿ ಅಥವಾ ತತ್ಸಮಾನ ಶಿಕ್ಷಣವನ್ನು ಶೇ.50 ಅಂಕದೊಂದಿಗೆ ಪಡೆದಿರಬೇಕು. ಮಾಸಿಕ 21,250 ರೂ. ವೇತನ ಇದೆ.
* ಯೋಗ ಟೀಚರ್ - 1
ಯಾವಯದೇ ಪದವಿ/ ಯೋಗದಲ್ಲಿ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳಿಗೆ ಮಾಸಿಕ 21,250 ರೂ. ವೇತನ ನೀಡಲಾಗುವುದು.
* ಡ್ಯಾನ್ಸ್, ಮ್ಯೂಸಿಕ್ ಇನ್ಸ್ಟ್ರಕ್ಟರ್ - 1
ದ್ವೀತಿಯ ಪಿಯುಸಿ/ ತತ್ಸಮಾನ ಶಿಕ್ಷಣ/ ಸಂಗೀತ, ಡ್ಯಾನ್ಸ್ನಲ್ಲಿ ಪದವಿ/ ಡಿಪ್ಲೊಮಾ ಮಾಡಿರಬೇಕು. ಮಾಸಿಕ 21,250 ರೂ. ವೇತನ ಇದೆ.
* ನರ್ಸ್- 1
ನರ್ಸಿಂಗ್, ನರ್ಸಿಂಗ್ ಆ್ಯಂಡ್ ಮಿಡ್ವ್ೈನಲ್ಲಿ ಡಿಪ್ಲೊಮಾ/ ನರ್ಸಿಂಗ್ನಲ್ಲಿ ಬಿಎಸ್ಸಿ ಮಾಡಿರಬೇಕು. ಕೆಲಸ ನಿರ್ವಹಿಸುವ ಪ್ರತಿ ದಿನಕ್ಕೆ 750 ರೂ. ಗೌರವಧನ ನೀಡಲಾಗುವುದು.
* ಡಾಟಾ ಎಂಟ್ರಿ ಆಪರೇಟರ್ - 3
ಕಂಪ್ಯೂಟರ್ ಸೈನ್ಸ್ನಲ್ಲಿ ಬಿಸಿಎ/ ಎಂಸಿಎ/ ಬಿಟೆಕ್/ ಬಿಎಸ್ಸಿ/ ಎಂಎಸ್ಸಿ ಮಾಡಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಕೆಲಸ ನಿರ್ವಹಿಸುವ ಪ್ರತಿ ದಿನಕ್ಕೆ 666 ರೂ. ವೇತನ ಇದೆ.
ಬೋಧಕೇತರ ಹುದ್ದೆಗೆ ಸಂದರ್ಶನ ನಡೆಯುವ ದಿನಾಂಕ: 16.3.2022
ಬೋಧಕ ಹುದ್ದೆಗೆ ಲಿಖಿತ ಪರೀಕ್ಷೆ : 10.3.2022, ಸಂದರ್ಶನ: 15.3.2022
ಅಧಿಸೂಚನೆಗೆ: https://bit.ly/35QdslG
ಮಾಹಿತಿಗೆ: http://no2belagavicantt.kvs.ac.in