

ಅಹಮದಾಬಾದ್: ವಡಾಪಾವ್ ಅಂತೂ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇದೆ. ಇನ್ನು ಐಸ್ಕ್ರೀಂ? ಇದಂತೂ ಬಿಡಿ, ಪುಟ್ಟ ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ತಿಂದವರೇ.
ಹಾಗಾದರೆ ವಡಾಪಾವ್ ಒಳಗೆ ಐಸ್ಕ್ರೀಂ ಇಟ್ಟು ತಿಂದಿದ್ದೀರಾ? ಅರೆ ಇದೇನಿದು, ಎಲ್ಲಿಯಾದರೂ ಉಂಟಾ ಅನ್ನಬೇಡಿ.
ಇಲ್ಲಿದೆ ಈ ವಿಶಿಷ್ಟ ಟೇಸ್ಟಿ ಟೇಸ್ಟಿ ರೆಸಿಪಿ. ಗುಜರಾತ್ನ ವ್ಯಾಪಾರಿಯೊಬ್ಬರು ಇದನ್ನು ಪರಿಚಯಿಸಿದ್ದಾರೆ. ಐಸ್ ಕ್ರೀಂ ಹಾಗೂ ಟೂಟಿ ಫ್ರೂಟಿ ಸ್ಟಫ್ ಮಾಡಿದ ವಡಾಪಾವ್ ರೆಡಿ ಮಾಡುತ್ತಾರೆ ಇವರು. ಈ ಬನ್ ಮಧ್ಯದಲ್ಲಿ ಕೆಂಪು ಹಾಗೂ ಹಸಿರು ಸಿರಪ್ ಲೇಪಿಸಿ, ಐಸ್ ಕ್ರೀಂ ಸ್ಕೂಪ್ ಅನ್ನು ಸೇರಿಸಿ ಗ್ರಾಹಕರಿಗೆ ನೀಡುತ್ತಾರೆ.
ಇದರ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ನೋಡಿದವರ ಬಾಯಲ್ಲಿ ನೀರೂರಿಸುತ್ತದೆ. ನೀವೂ ಒಮ್ಮೆ ಈ ವಿಡಿಯೋ ನೋಡಿ...