More

    ಪ್ರಧಾನಿಗೆ ‘ನಿರುದ್ಯೋಗ ದಿನದ ಶುಭಾಶಯ’ ಹೇಳಿ ಟ್ರೋಲಾದ ದಿನೇಶ್​ ಗುಂಡೂರಾವ್​

    ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ನಿಮಿತ್ತ ಲಕ್ಷಾಂತರ ಮಂದಿ ಅಭಿಮಾನಿಗಳು ಅವರಿಗೆ ವಿಷ್​ ಮಾಡಿದ್ದಾರೆ.

    ಕೆಲವರು ನೇರವಾಗಿ ವಿಷ್​ ಮಾಡಿದರೆ, ಹಲವರು ಟ್ವೀಟರ್​ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.

    ಅದರಂತೆಯೇ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೂ ಶುರು ಕೋರಿದ್ದಾರೆ. ಟ್ವಿಟರ್​ ಮೂಲಕ ಅವರು ಶುಭಾಶಯ ಕೋರಿದ್ದರೂ, ಅದರಲ್ಲಿ ಹುಟ್ಟುಹಬ್ಬದ ಶುಭಾಶಯ ಬದಲು ನಿರುದ್ಯೋಗ ದಿನಾಚರಣೆ ಶುಭಾಶಯ ಎಂದು ಬರೆದಿದ್ದಾರೆ.

    “ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಪೊಳ್ಳು ಭರವಸೆ ನೀಡಿ, ತಮ್ಮ ಎಡಬಿಡಂಗಿ ಆಡಳಿತ ನೀತಿಯ ಮೂಲಕ ಕಳೆದ 6 ತಿಂಗಳಲ್ಲಿ 2.1 ಕೋಟಿ ಯುವಕರು ಉದ್ಯೋಗ ಕಸಿದು ಅವರನ್ನು ಬೀದಿಗೆ ಬರುವಂತೆ ಮಾಡಿದ ನರೇಂದ್ರ ಮೋದಿಯವರ ಜನ್ಮದಿನದ ಅರ್ಥಾತ್ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

    ಆದರೆ ಹುಟ್ಟುಹಬ್ಬದಂದು ಈ ರೀತಿಯ ಶುಭಾಶಯ ಮಾಡಿರುವುದು ಮೋದಿಯವರ ಅಭಿಮಾನಿಗಳಿಗೆ ವಿಪರೀತ ಸಿಟ್ಟುಬಂದಿದೆ. ಈ ಹಿನ್ನೆಲೆಯಲ್ಲಿ, ದಿನೇಶ್​ ಗುಂಡೂರಾವ್​ ಅವರ ಟ್ವೀಟ್​ಗೆ ಬಹುತೇಕ ಎಲ್ಲರೂ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಪ್ರಧಾನಿ ಮೋದಿಯವರ ಬರ್ತ್​ಡೇಗೆ ವಿಷ್​ ಮಾಡಬೇಕಾ? ಇಲ್ಲಿದೆ ನೋಡಿ ವಿವರ…

    ಟೀಕೆ ಮಾಡುವುದು ತಪ್ಪಲ್ಲ ,ಆದರೆ ಟೀಕೆಯನ್ನು ಉದ್ದೇಶಪೂರ್ವಕವಾಗಿ ಅವರ ಜನ್ಮದಿನದ ಶುಭಾಶಯಕ್ಕೆ ಸೇರಿಸುವುದು ಒಳ್ಳೆಯ ಲಕ್ಷಣವಲ್ಲ ಎಂದು ಹಲವರು ಕಿಡಿ ಕಾರಿದ್ದಾರೆ. ಯಾವಾಗ, ಏನು ಹೇಳಬೇಕೆಂಬ ಪರಿಜ್ಞಾನ ಇಲ್ಲವೆ ಎಂದು ಕೆಲವರು ಕಮೆಂಟ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರೆ, ಇದು ಕಾಂಗ್ರೆಸ್​ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನೀವು ಹೇಳುತ್ತಿರುವುದು ನಿಜ. ಆರು ವರ್ಷಗಳಿಂದ ಕಾಂಗ್ರೆಸ್ ನಾಯಕರಿಗೆ ಉದ್ಯೋಗ ಇಲ್ಲ ಪಾಪ. ನಿಮಗೆ ಈಗ ಉಸ್ತುವಾರಿ ಸಿಕ್ಕಿದೆ. ಅದನ್ನು ಮೊದಲು ಚೆನ್ನಾಗಿ ನಿಭಾಯಿಸಿಕೊಂಡು ಹೋಗಿ. ಕೆಪಿಸಿಸಿ ಅಧ್ಯಕ್ಷ ಆದಾಗ ಏನೂ ಮಾಡಿಲ್ಲ. ಈಗಲಾದರೂ ಏನಾದರೂ ಕೆಲಸ ಮಾಡಿ ಎಂದು ತಿಗಡಿ ಎನ್ನುವವರು ಕಮೆಂಟ್​ ಮಾಡಿದ್ದರೆ, ದೇಶದ್ರೋಹ, ಭ್ರಷ್ಟಾಚಾರ, ದರೋಡೆ, ಆಡಳಿತಶಾಹಿ ಮಾಡುತ್ತಿದ್ದವರಿಗೆ, ಮೋದಿಜಿ ಬಂದ ಮೇಲೆ ಅವರ ಮೂಲಕಸಬು ಇಲ್ಲದಂತಾಗಿದೆ. ಅವರಿಗೆಲ್ಲಾ ನಿರುದ್ಯೋಗ ದಿನಾಚರಣೆ ಶುಭಾಶಯಗಳು ಎಂದು ಸುನೀಲ್​ ಎನ್ನುವವರು ಟ್ವೀಟ್​ ಮಾಡಿದ್ದಾರೆ.

    ಚೀನಾದಿಂದ 38 ಸಾವಿರ ಚ.ಕಿ.ಮೀ ಜಾಗ ಅತಿಕ್ರಮಣ: ರಾಜ್ಯಸಭೆಗೆ ಮಾಹಿತಿ

    ಆಕೆ ಕರೆನ್ಸಿ ಹಾಕಿಸಿಕೊಂಡಳು, ಅಂಗಡಿವ ಮೆಸೇಜ್​ ಕಳಿಸಿದ – ಹತ್ತಿರ ಕರೆದಾಕೆ ಮಾಡಿದ್ದೇನು?

    ಮನೆಗೆ ಬರುತ್ತಿದ್ದೇನೆ, ಕ್ವಾರಂಟೈನ್​ಗೆ ರೂಮ್​ ರೆಡಿ ಮಾಡು ಎಂದಿದ್ದ ಯೋಧ ಬಂದದ್ದು ಶವವಾಗಿ!

    ಪ್ರಧಾನಿ ಮೋದಿಯವರ ಬರ್ತ್​ಡೇಗೆ ವಿಷ್​ ಮಾಡಬೇಕಾ? ಇಲ್ಲಿದೆ ನೋಡಿ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts