

ಬೆಂಗಳೂರು: ವಿವಾಹವಾದ ದಿನದಿಂದಲೂ ಗಂಡ ಹತ್ತಿರ ಬಾರದೇ ನೊಂದಿದ್ದ ಮಹಿಳೆಯರೊಬ್ಬರಿಗೆ ತಮ್ಮ ಗಂಡನ ರಸಹ್ಯ ತಿಳಿದದ್ದು ಮದುವೆಯಾಗಿ ಮೂರು ವರ್ಷದ ಬಳಿಕ!
ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಯುವತಿಯ ವಿವಾಹವು 2018ರಲ್ಲಿ ನಡೆದಿದೆ. ಆದರೆ ಒಂದಿಲ್ಲೊಂದು ಕಾರಣ ನೀಡಿ ಪತಿ ಅವರ ಹತ್ತಿರ ಬರುತ್ತಿರಲಿಲ್ಲ. 28 ವರ್ಷದ ಮಹಿಳೆ ಗಂಡ ತೋರುತ್ತಿದ್ದ ಈ ನಿರಾಸಕ್ತಿಯಿಂದ ಬೇಸರಗೊಂಡಿದ್ದರು.
ಇದಕ್ಕೆ ಕಾರಣ ಕೇಳಿದರೆ ಗಂಡ ಏನೇನೋ ನೆಪ ಹೇಳುತ್ತಿದ್ದ. ಆದರೆ ಇದೀಗ ಗಂಡನ ಈ ರಹಸ್ಯ ಮೊಬೈಲ್ ಫೋನ್ನಿಂದ ತಿಳಿದುಬಂದಿದೆ. ಅದೇನೆಂದರೆ ಪತಿ ಇಲ್ಲದ ಸಮಯದಲ್ಲಿ ಆತನ ಮೊಬೈಲ್ ನೋಡಿದಾಗ ಮಹಿಳೆಗೆ ಅದರಲ್ಲಿ ಎರಡು ಗೇ ಡೇಟಿಂಗ್ ಆ್ಯಪ್ಗಳು ಕಂಡುಬಂದಿವೆ. ಅಂದರೆ ಸಲಿಂಗಕಾಮಿ ಡೇಟಿಂಗ್ ಆ್ಯಪ್ ಇವು.
ಅಂದರೆ ತನ್ನ ಗಂಡ ಸಲಿಂಗಿಕಾಮಿಯಾಗಿರುವ ಹಿನ್ನೆಲೆಯಲ್ಲಿ ತನ್ನ ಬಗ್ಗೆ ಆತನಿಗೆ ಆಸಕ್ತಿ ಇಲ್ಲ ಎನ್ನುವುದು ಈಕೆಗೆ ತಿಳಿದಿದ್ದು, ಗಂಡ ಮೋಸ ಮಾಡಿರುವ ಕಾರಣ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವರದಕ್ಷಿಣೆ ಪಡೆದುಕೊಂಡು ಮದುವೆಯಾಗಿದ್ದರೂ, ತಾನು ಸಲಿಂಗಿಕಾಮಿ ಎಂದು ತಿಳಿದಿದ್ದರೂ ಮೋಸ ಮಾಡಿರುವುದಾಗಿ ಅರ್ಜಿಯಲ್ಲಿ ಅವರು ಹೇಳಿದ್ದಾರೆ. ಜತೆಗೆ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತನ್ನ ಫೋನ್ನಲ್ಲಿ ಈ ಡೇಟಿಂಗ್ ಆ್ಯಪ್ಗಳು ಇರುವುದು ನಿಜವಾದರೂ ತಾನುಇದುವರೆಗೆ ಯಾವ ಸಲಿಂಗಿಯ ಜತೆಯೂ ಡೇಟ್ ಮಾಡಿಲ್ಲ ಎಂದು ಪತಿ ಹೇಳಿಕೆ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.